ಸಿನಿಮಾ ಸುದ್ದಿ

ಸಾಹಿತ್ಯವು ಅಂಗಡಿಯಲ್ಲಿ ಸಿಗುವ ವಸ್ತುವಲ್ಲಾ: ಧನಂಜಯ್

Nagaraja AB

ಟಗರು ಚಿತ್ರದಲ್ಲಿನ  ಡಾಲಿ ಪಾತ್ರದ ಮೂಲಕ ಜನಪ್ರಿಯರಾಗಿರುವ  ನಟ ಧನಂಜಯ್,   ಈಗ ಮೈಸೂರಿನ ಸುನೀಲ್ ನಿರ್ದೇಶನದ ಆರ್ಕೇಸ್ಟ್ರಾ ಚಿತ್ರಕ್ಕೆ  ಸಾಹಿತ್ಯ ಸಂಯೋಜಿಸಿದ್ದಾರೆ.

ಈ ಚಿತ್ರಕ್ಕಾಗಿ  12 ಗೀತೆಗಳನ್ನು ಅವರು ರಚಿಸುವುದರ ಜೊತೆಗೆ ಇನ್ನೂ ಏಳು ಎಂಟು ಚಲನಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ.

ಇಷ್ಟೊಂದು ಬಿಡುವಿಲ್ಲದ ಕೆಲಸದಲ್ಲಿ ಯಾವಾಗ ವಿಶ್ರಾಂತಿ ಪಡೆಯುತ್ತೀರಾ ಎಂಬ ಪ್ರಶ್ನೆಗೆ ಕೆಲ ದಿನಗಳ ನಂತರ ಸಂಪೂರ್ಣವಾಗಿ  ವಿಶ್ರಾಂತಿಯಲ್ಲಿರುತ್ತೇನೆ ಎಂದು  ಹೇಳುತ್ತಾರೆ.

ರಂಗಭೂಮಿ ಹಿನ್ನೆಲೆಯವರಾದ ಧನಂಜಯ್, ಅನೇಕ  ನಾಟಕ ರಚಿಸಿ, ನಿರ್ದೇಶಿಸಿದ್ದಾರೆ. ಕಿರುಚಿತ್ರಗಳಿಗೂ ಕಥೆ ಬರೆದಿದ್ದಾರೆ. ಹೀಗಾಗಿ ಹಲವು ದಿನಗಳಿಂದಲೂ  ಕಥೆ ಬರೆಯುವುದು ಅಭ್ಯಾಸವಾಗಿಬಿಟ್ಟಿದೆ ಎನ್ನುತ್ತಾರೆ.

ಸಾಹಿತ್ಯವೂ ಪ್ರತ್ಯೇಕ್ಷವಾಗಿ ಕೊಂಡುಕೊಳ್ಳುವ ವಸ್ತುವಲ್ಲಾ ಎನ್ನುವ ಧನಂಜಯ್ ,ನನ್ನ ಬರವಣಿಗೆ ಕೌಶಲ್ಯವನ್ನು ತಿಳಿದಿದ್ದವರು  ಗೀತೆ ರಚನೆಕಾರನಾಗಿ ಬದಲಾಯಿಸಿದ್ದಾರೆ ಎಂದು  ಹೇಳುತ್ತಾರೆ.

ರಘು ದೀಕ್ಷಿತ್ ಮತ್ತು ನಿರ್ದೇಶಕ ಸುನಿಲ್ ಅವರು ಕೇಳಿದ್ದಾಗ  ಧನಂಜಯ್ ಸಾಹಿತ್ಯವನ್ನು ಸಿದ್ಧಪಡಿಸಿದ್ದರು. "ಚಿತ್ರದ ಕಥೆ ತುಂಬಾ ವಾಸ್ತವಿಕವಾಗಿದೆ. ಈ ಕಥೆಯು ಮೈಸೂರಿನಲ್ಲಿ ಆರ್ಕೆಸ್ಟ್ರಾ ಸಂಸ್ಕೃತಿಯ ಬಗ್ಗೆ. ಹಾಡುಗಳನ್ನು ಬರೆಯುವ ಮೊದಲು ನಾನು ಪ್ರತಿಯೊಂದು ಕಥೆಯನ್ನು ಕೇಳಿದ್ದೇನೆ "ಎಂದು ಅವರು ಹೇಳುತ್ತಾರೆ.

ಕಳೆದ ವರ್ಷ ಟಗರು ಚಿತ್ರದಲ್ಲಿ ಮಾತ್ರ ಕೆಲಸ ಮಾಡಿದ್ದರು.  ಹೀಗಾಗಿ ಉಳಿದ  ಸಂದರ್ಭದಲ್ಲಿ ಬರವಣಿಗೆಯಲ್ಲಿ ತೊಡಗಿಸಿಕೊಂಡಿದ್ದರು.  ತನ್ನ ಸ್ನೇಹಿತನ ಚಿತ್ರಕ್ಕೆ ಸಾಹಿತ್ಯ ಬರೆದಿರುವುದು ತುಂಬಾ ಸಂತೋಷವನ್ನುಂಟುಮಾಡಿದ್ದು, ಇತರ ಚಿತ್ರಗಳಿಗೂ ಸಾಹಿತ್ಯ ರಚಿಸುವುದಾಗಿ ಹೇಳುವ ಧನಂಜಯ್, ಉತ್ತಮ ಕಥೆ ಹೊಂದಿರುವ ಚಿತ್ರಗಳಿಗೆ ಮಾತ್ರ ಗೀತೆ ರಚಿಸುವುದಾಗಿ ಹೇಳುತ್ತಾರೆ.

 ಆರ್ಕೇಸ್ಟ್ರಾ ಚಿತ್ರದಲ್ಲಿನ ಎಲ್ಲಾ ಗೀತೆಗಳು  ಪೂರ್ಣಗೊಂಡಿದ್ದು, 12 ಗೀತೆಗಳನ್ನು ಧನಂಜಯ್ ಅವರೇ ಬರೆದಿದ್ದಾರೆ. ಕೆಲವೇ ದಿನಗಳಲ್ಲಿ ಅವರ ಅದ್ಬುತ ಗೀತೆಗಳನ್ನು ಕೇಳಲಿದ್ದೀರಿ . ಆದರೆ, ಧನಂಜಯ್ ಈ ಚಿತ್ರದಲ್ಲಿನ ಅಭಿಯನಯಿಸದೆ ಇರುವುದು ಬೇಸರದ ಸಂಗತಿಯಾಗಿದೆ ಎಂದು ನಿರ್ದೇಶಕ ಸುನೀಲ್ ಮೈಸೂರು ತಿಳಿಸಿದ್ದಾರೆ.

SCROLL FOR NEXT