ಪ್ರಿಯಾಂಕ ತಿಮ್ಮೇಶ್ 
ಸಿನಿಮಾ ಸುದ್ದಿ

ಚಿಲ್ಲಂ ಹಿರೋಹಿನ್ ಪ್ರಿಯಾಂಕ ತಿಮ್ಮೇಶ್, ಅರ್ಜನ್ ಗೌಡ ಚಿತ್ರದಲ್ಲಿಯೂ ನಾಯಕಿ

ಜೆ. ಚಂದ್ರಕಲಾ ನಿರ್ದೇಶನದ ಚಿಲ್ಲಂ ಚಿತ್ರದ ನಟಿ ಪ್ರಿಯಾಂಕ ತಿಮ್ಮೇಶ್ , ಮತ್ತೊಂದು ಚಿತ್ರ ಒಪ್ಪಿಕೊಂಡಿದ್ದಾರೆ. ಸ್ಯಾಂಡಲ್ ವುಡ್ ನಲ್ಲಿ ಪ್ರಿಯಾಂಕ್ ತಿಮ್ಮೇಶ್ ಅವರಿಗೆ ಬೇಡಿಕೆ ಹೆಚ್ಚಾಗುತ್ತಿದೆ. ಹೆಚ್ಚೆಚ್ಚು ಸಿನಿಮಾಗಳ ಆಫರ್ ಬರುತ್ತಿದೆ.

ಜೆ. ಚಂದ್ರಕಲಾ ನಿರ್ದೇಶನದ ಚಿಲ್ಲಂ ಚಿತ್ರದ ನಟಿ ಪ್ರಿಯಾಂಕ ತಿಮ್ಮೇಶ್ , ಮತ್ತೊಂದು ಚಿತ್ರ ಒಪ್ಪಿಕೊಂಡಿದ್ದಾರೆ.  ಸ್ಯಾಂಡಲ್ ವುಡ್ ನಲ್ಲಿ  ಪ್ರಿಯಾಂಕ್ ತಿಮ್ಮೇಶ್ ಅವರಿಗೆ ಬೇಡಿಕೆ ಹೆಚ್ಚಾಗುತ್ತಿದೆ. ಹೆಚ್ಚೆಚ್ಚು ಸಿನಿಮಾಗಳ ಆಫರ್ ಬರುತ್ತಿದೆ.

ಲಕ್ಕಿ ಶಂಕರ್ ನಿರ್ದೇಶನದ ಅರ್ಜನ್ ಗೌಡ ಸಿನಿಮಾದಲ್ಲಿ ಪ್ರಿಯಾಂಕ್ ತಿಮ್ಮೇಶ್ ನಟಿಸುತ್ತದ್ದಾರೆ. ರಾಮು  ಎಂಟರ್ ಪ್ರೈಸಸ್  ಈ ಚಿತ್ರ ನಿರ್ಮಿಸಿದ್ದು, ಪ್ರಜ್ವಲ್ ದೇವರಾಜ್ ನಾಯಕ ನಟರಾಗಿದ್ದಾರೆ. ಈ ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೆ ಮತ್ತೊಂದು ಜೋಡಿ ಎಂಟ್ರಿಯಾಗಿದೆ.

 ಪ್ರಿಯಾಂಕ ತಿಮ್ಮೇಶ್ ಈ ಚಿತ್ರದಲ್ಲಿ ಮುಗ್ದ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.  ರಾಮು ಎಂಟರ್ ಪ್ರೈಸಸ್ ಬ್ಯಾನರ್ ಅಂತಹ ದೊಡ್ಡ ಚಿತ್ರ ನಿರ್ಮಾಣ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿರುವುದಕ್ಕೆ ಸಂತೋಷವಾಗುತ್ತಿದೆ ಎಂದು ಅವರು ಹೇಳಿದ್ದಾರೆ.

ಮೇ 18 ರಂದು ಬೆಂಗಳೂರಿನಲ್ಲಿ ಚಿತ್ರೀಕರಣ ನಡೆಯಲಿದೆ. ಮೇ 24 ರಂದು ಮಂಗಳೂರಿನಲ್ಲಿ ಚಿತ್ರೀಕರಣ ನಡೆಯಲಿದ್ದು, ಪ್ರಿಯಾಂಕ ತಿಮ್ಮೇಶ್ ಅಲ್ಲಿ ಚಿತ್ರತಂಡ ಸೇರಲಿದ್ದಾರೆ. ಅರ್ಜುನ್ ಗೌಡ ಚಿತ್ರದಲ್ಲಿ ಸ್ಪರ್ಶ ಖ್ಯಾತಿಯ ರೇಖಾ ಕೂಡಾ  ನಟಿಸುತ್ತಿದ್ದಾರೆ.ಧರ್ಮ ಮಿಲ್ಲಿಂದ್ ಈ ಚಿತ್ರಕ್ಕೆ ಸಂಗೀತ ಸಂಯೋಜಿಸುತ್ತಿದ್ದು, ಜಯ್ ಆನಂದ್ ಅವರ ಛಾಯಾಗ್ರಹಣವಿರಲಿದೆ.





Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Karnataka CM News LIVE Updates | 'ನಾನು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ; ಸಕ್ರಿಯ ರಾಜಕಾರಣದಲ್ಲಿ ಇರುತ್ತೇನೆ: ಸಿದ್ದರಾಮಯ್ಯ

Siddaramaiah Press Meet: 'ಹೈಕಮಾಂಡ್ ಆದೇಶದ ಮೇಲೆ ರಾಜಿನಾಮೆ ನೀಡಿದ್ದೇನೆ': ಸಿದ್ದರಾಮಯ್ಯ ವಿದಾಯದ ಮಾತು

ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ ಸಿದ್ದರಾಮಯ್ಯ! ರಾಜ್ಯಪಾಲರ ವಿಶೇಷ ಕಾರ್ಯದರ್ಶಿಗೆ ಪತ್ರ ಹಸ್ತಾಂತರ

ಮುಂದಿನ CM ಡಿಕೆ.ಶಿವಕುಮಾರ್: ಸಚಿವರಿಗೆ ಸಿದ್ದರಾಮಯ್ಯ ಮಾಹಿತಿ, ಅಂದು-ಇಂದು-ಎಂದೆಂದೂ ಒಗ್ಗಟ್ಟೇ ನಮ್ಮ ಶಕ್ತಿ- ಕಾಂಗ್ರೆಸ್

ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ ಘೋಷಣೆ: ಕಣ್ಣೀರು ಹಾಕಿದ ಸಚಿವ ಸಂತೋಷ್ ಲಾಡ್; Video

SCROLL FOR NEXT