ಸಿನಿಮಾ ಸುದ್ದಿ

ಪಡ್ಡೆಹುಲಿಯಲ್ಲಿ ಒಂದಾದ ರವಿಚಂದ್ರನ್-ಸುಧಾರಾಣಿ

Sumana Upadhyaya

ನಿರ್ಮಾಪಕ ಕೆ.ಮಂಜು ಅವರ ಪುತ್ರ ಶೇಯಸ್ ಚೊಚ್ಚಲ ಚಿತ್ರ ಪಡ್ಡೆ ಹುಲಿ ಭಾರೀ ಸದ್ದು ಮಾಡುತ್ತಿದೆ. ಇದರಲ್ಲಿ ನಿರ್ದೇಶಕ ಗುರು ದೇಶಪಾಂಡೆ 25 ವರ್ಷಗಳ ನಂತರ ರವಿಚಂದ್ರನ್ ಮತ್ತು ಸುಧಾರಣಿಯವರನ್ನು 25 ವರ್ಷಗಳ ನಂತರ ತೆರೆ ಮೇಲೆ ತರುತ್ತಿದ್ದಾರೆ.

1993ರಲ್ಲಿ ರವಿಚಂದ್ರನ್ ಮತ್ತು ಸುಧಾರಣಿ ಮನೆದೇವರು ಚಿತ್ರದಲ್ಲಿ ಒಟ್ಟಾಗಿ ನಟಿಸಿದ್ದರು. 25 ವರ್ಷಗಳ ನಂತರ ಮತ್ತೆ ತೆರೆ ಮೇಲೆ ಒಟ್ಟಾಗಿ ಕಾಣಿಸಿಕೊಳ್ಳಲು ಇಬ್ಬರೂ ಅದೇ ಕಾತರತೆ ಉಳಿಸಿಕೊಂಡಿದ್ದಾರೆ. ಚಿತ್ರದಲ್ಲಿ ಗುರು ದೇಶಪಾಂಡೆ ರವಿಚಂದ್ರನ್ ಅವರಿಗೆ ವಿಶೇಷ ಪಾತ್ರ ನೀಡಲಿದ್ದಾರೆ. ವಿಷ್ಣುವರ್ಧನ್ ಅವರ ನಾಗರಹಾವು ಚಿತ್ರದಲ್ಲಿ ಚಾಮಯ್ಯ ಮೇಷ್ಚ್ರು ಪಾತ್ರದಲ್ಲಿ ಮಿಂಚಿದ್ದ ಅಶ್ವಥ್ ಅವರ ಪಾತ್ರವನ್ನು ರವಿಚಂದ್ರನ್ ಪಾತ್ರ ಹೋಲಲಿದೆ.

ಈ ತಿಂಗಳ 30ರಂದು ರವಿಚಂದ್ರನ್ ಅವರ ಪಾತ್ರವನ್ನು ನಿರ್ದೇಶಕರು ಬಹಿರಂಗಪಡಿಸಲಿದ್ದಾರೆ.ಅಂದು ರವಿಚಂದ್ರನ್ ಅವರ ಹುಟ್ಟುಹಬ್ಬ.

ಪ್ರೇಮಲೋಕದ ಯಶಸ್ಸನ್ನು ಪಡ್ಡೆಹುಲಿ ಮೂಲಕ ಮರುಕಳಿಸುವ ಯತ್ನ ನಿರ್ದೇಶಕರದ್ದು. ಚಿತ್ರದಲ್ಲಿ ನಿಶ್ವಿಕಾ ನಾಯ್ಡು ನಾಯಕಿ. ಅಜನೀಶ್ ಬಿ ಲೋಕನಾಥ್ ಅವರ ಸಂಗೀತ, ಕೆ.ಎಸ್.ಚಂದ್ರಶೇಖರ್ ಛಾಯಾಗ್ರಹಣ ಮತ್ತು ಕೆ ಎಂ ಪ್ರಕಾಶ್ ಅವರ ಸಂಕಲನವಿದೆ.

SCROLL FOR NEXT