ಬೆಂಗಳೂರು: ದಕ್ಷಿಣ ಭಾರತ ಸಿನಿಮಾ ರಂಗದ ಬಹು ಬೇಡಿಕೆಯ ವಿಲ್ಲನ್ ಜಗಪತಿ ಬಾಬು ಮತ್ತೆ ಕನ್ನಡದಲ್ಲಿ ನಟಿಸುತ್ತಿದ್ದಾರೆ,
ಶಶಾಂಕ್ ನಿರ್ದೇಶನದ ಬಚ್ಚನ್ ಹಾಗೂ ನಿಖಿಲ್ ಕುಮಾರ್ ಅಭಿನಯದ ಜಾಗ್ವಾರ್ ಸಿನಿಮಾ ನಂತರ ನಂದ ಕಿಶೋರ್ ನಿರ್ದೇಶಸಿ ಧ್ರುವ ಸರ್ಜಾ ನಟಿಸಿರುವ ಪೊಗರು ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ.
ಜಗಪತಿ ಬಾಬು ವಿಲ್ಲನ್ ಆಗಿ ಸಿನಿಮಾದಲ್ಲಿ ನಟಿಸುತ್ತಿದ್ದಾರೆ ಎಂದು ನಿರ್ದೇಶಕರು ಸ್ಪಷ್ಟ ಪಡಿಸಿದ್ದಾರೆ. ಮೇ 21 ರಿಂದ ಶೂಟಿಂಗ್ ಗೆ ದಿನಾಂಕ ನಿಗದಿ ಪಡಿಸಲಾಗಿತ್ತು ಆದರೆ ತಮ್ಮ ಫಿಟ್ ನೆಸ್ ಗಾಗಿ ವರ್ಕೌಟ್ ಮಾಡಲು ಮತ್ತಷ್ಟು ಸಮಯಾವಕಾಶ ಕೋರಿದ್ದರು ಹೀಗಾಗಿ ಜೂನ್ 15 ರಿಂದ ಪೊಗರು ಶೂಟಿಂಗ್ ಆರಂಭವಾಗಲಿದೆ.
ಸಿನಿಮಾದಲ್ಲಿ 12ರ ಹರೆಯದ ಹುಡುಗನಾಗಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿತ್ತು. ಹಾಗಾಗಿ ಧ್ರುವ ಸರ್ಜಾ ಪಾತ್ರದ ಬಗ್ಗೆ ಎಲ್ಲರಿಗೂ ಕುತೂಹಲ ಮೂಡಿದ್ದು ಸಹಜ. ಅವರು ತಮ್ಮ ದೇಹದ ತೂಕವನ್ನು 30 ಕೆ.ಜಿ ಕಡಿಮೆ ಮಾಡಿಕೊಂಡಿರುವುದಾಗಿ ಹೇಳಿದ್ದರು. ಧ್ರುವ ಸರ್ಜಾ ತಮ್ಮ ತೂಕವನ್ನು ಇಳಿಸಿಕೊಂಡಿರೋದು ಕೇವಲ 4 ನಿಮಿಷಕ್ಕಾಗಿ ಎನ್ನುವುದು ಎಲ್ಲರ ಹುಬ್ಬೇರುವಂತೆ ಮಾಡಿದೆ.
ರವಿಶಂಕರ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದು, ಜುಲೈ ನಲ್ಲಿ ಜಗಪತಿ ಬಾಬು ಸಿನಿಮಾ ಶೂಟಿಂಗ್ ನಲ್ಲಿ ಭಾಗವಹಿಸಲಿದ್ದಾರೆ. ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ನೀಡಿದ್ದಾರೆ.