ಸಿನಿಮಾ ಸುದ್ದಿ

ನಟ ಶರಣ್ ಮುಂದಿನ ಸಿನಿಮಾ ಟೈಟಲ್ ಏನು ಗೊತ್ತೇ?

Shilpa D
ಬೆಂಗಳೂರು: ಶರಣ್ ಅಭಿನಯದ‘ರ್ಯಾಂಬೊ 2’  ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಉತ್ತಮವಾಗಿ ಪ್ರದರ್ಶನ ಕಾಣುತ್ತಿದೆ. 
2012ರಲ್ಲಿ ನಟ ಶರಣ್ ಅಭಿನಯಿಸಿದ್ದ ‘ರ್ಯಾಂಬೊ’ ಚಿತ್ರದ ಸೀಕ್ವೆಲ್ ಆಗಿ ಮೂಡಿಬಂದ ‘ರ್ಯಾಂಬೊ 2’ ಸಿನಿಮಾಕ್ಕೆ ಪ್ರೇಕ್ಷಕರು ಫಿದಾ ಆಗಿದ್ದಾರೆ‘ರ್ಯಾಂಬೊ 2 ರೀತಿಯೇ ಶರಣ್ ಈಗ ಸಾಲು ಸಾಲು ಸೀಕ್ವೆಲ್​ಗಳ ಕಡೆ ಗಮನ ಹರಿಸುತ್ತಿದ್ದಾರೆ. ಅದಕ್ಕೆ ಹೊಸ ಸೇರ್ಪಡೆ, ವಿಕ್ಟರಿ 2. ಈ ಸಿನಿಮಾವನ್ನು ಹರಿ ಸಂತೋಷ್ ನಿರ್ದೇಶಿಸಲಿದ್ದಾರೆ.
2013 ರಲ್ಲಿ ನಂದಕಿಶೋರ್ ನಿರ್ದೇಶಿಸಿದ್ದ ‘ವಿಕ್ಟರಿ’ ಚಿತ್ರ ಬಾಕ್ಸ್ ಆಫೀಸ್​ನಲ್ಲಿ ನಗುಬೀರಿತ್ತು. ಅದರಲ್ಲಿ ಜೋಡಿಯಾಗಿದ್ದ ನಟಿ ಅಸ್ಮಿತಾ ಸೂದ್ ಮತ್ತು ಶರಣ್ ಜತೆಯಾಗಿದ್ದಾರೆ.
ಅದಕ್ಕೆ ತರುಣ್ ಶಿವಪ್ಪ ಬಂಡವಾಳ ಹೂಡುತ್ತಿದ್ದು, ‘ಕಾಲೇಜ್ ಕುಮಾರ್’ ಖ್ಯಾತಿಯ ಸಂತು ನಿರ್ದೇಶನ ಮಾಡುತ್ತಿದ್ದಾರೆ. ಆದರೆ ಆ ಚಿತ್ರದ ಶೀರ್ಷಿಕೆ ಏನು ಎಂಬುದು ಬಹಿರಂಗ ಆಗಿರಲಿಲ್ಲ. ಲೇಟೆಸ್ಟ್ ಸುದ್ದಿ ಏನೆಂದರೆ, ಆ ಚಿತ್ರಕ್ಕೆ ‘ವಿಕ್ಟರಿ 2’ ಎಂದು ನಾಮಕರಣ ಮಾಡಲು ಚಿತ್ರತಂಡ ನಿರ್ಧರಿಸಿದೆಯಂತೆ.
ಮೊದಲ ಚಿತ್ರದಲ್ಲೂ ಪದಗಳ ಬದಲಿಗೆ ವಿಜಯದ ಚಿಹ್ನೆಯನ್ನೇ ಶೀರ್ಷಿಕೆಯಾಗಿ ಬಳಕೆ ಮಾಡಿಕೊಳ್ಳಲಾಗಿತ್ತು. ಈಗ ಅಂಥದ್ದೇ ಎರಡು ಚಿಹ್ನೆಗಳು ‘ಪಾರ್ಟ್ 2’ ಎಂಬುದನ್ನು ಸೂಚಿಸಲಿವೆಯಂತೆ. 
ಇನ್ನು‘ವಿಕ್ಟರಿ 2’ ತಂಡ ಕೊನೇ ಹಂತದ ಚಿತ್ರೀಕರಣದಲ್ಲಿ ಭಾಗಿಯಾಗಿದೆ. ಅಸ್ಮಿತಾ ಮತ್ತು ಶರಣ್ ಜೋಡಿಯ ಬಗ್ಗೆ ಅಭಿಮಾನಿಗಳಿಗೆ ವಿಶೇಷ ನಿರೀಕ್ಷೆ ಇದೆ. ‘ವಿಕ್ಟರಿ’ಯಲ್ಲಿ ತೆರೆಹಂಚಿಕೊಂಡಿದ್ದ ಅಸ್ಮಿತಾ, ಬಳಿಕ ‘ಅಧ್ಯಕ್ಷ’ ಚಿತ್ರದಲ್ಲೂ ಕಲ್ಯಾಣಿ ಟೀಚರ್ ಎಂಬ ಅತಿಥಿ ಪಾತ್ರ ಮಾಡಿದ್ದರು. ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತವಿದೆ. .,..
SCROLL FOR NEXT