ಸ್ಯಾಂಡಲ್ವುಡ್ ನ ರೊಮ್ಯಾಂಟಿಕ್ ಹೀರೋ ಗೋಲ್ಡನ್ ಸ್ಟಾರ್ ಗಣೇಶ್ ಅವರು ಇದೀಗ ಹಾರರ್-ಕಾಮಿಡಿ ಚಿತ್ರದಲ್ಲಿ ನಟಿಸಲಿದ್ದಾರೆ.
ಕಚಗುಳಿ ಇಡುವ ಸಂಭಾಷಣೆ ಮೂಲಕ ಅಭಿಮಾನಿಗಳನ್ನು ರಂಜಿಸುತ್ತಿದ್ದ ಗೋಲ್ಡನ್ ಸ್ಟಾರ್ ಇದೀಗ ನಾಗಣ್ಣ ಅವರ ನಿರ್ದೇಶನದ ಹಾರರ್-ಕಾಮಿಡಿ ಚಿತ್ರದಲ್ಲಿ ನಟಿಸಲಿದ್ದಾರೆ.
ಗಣೇಶ್ ಇದೇ ಮೊದಲ ಬಾರಿಗೆ ಹಾರರ್-ಕಾಮಿಡಿ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಹೊಸ ನಿರ್ದೇಶಕರ ಜತೆ. ಚಿತ್ರದಲ್ಲಿ ಹಾರರ್ ಜತೆಗೆ ಗಣೇಶ್ ಅವರು ತಮ್ಮ ಎಂದಿನ ಕಾಮಿಡಿ ಮೂಲಕ ಜನರನ್ನು ರಂಜಿಸಲಿದ್ದಾರೆ. ಇನ್ನು ಚಿತ್ರದ ಪ್ರಿ-ಪ್ರೊಡೆಕ್ಷನ್ ಕೆಲಸಗಳು ನಡೆಯುತ್ತಿದ್ದು ಜೂನ್ ಮಧ್ಯ ಭಾಗದಲ್ಲಿ ಅಥವಾ ಕೊನೆಯಲ್ಲಿ ಚಿತ್ರದ ಬಗ್ಗೆ ಅಧಿಕೃತ ಘೋಷಣೆ ಹೊರಬೀಳಲಿದೆ.
ನಾಗಣ್ಣ ಜತೆಗಿನ ಹಾರರ್-ಕಾಮಿಡಿ ಚಿತ್ರದ ನಂತರ ನಿರ್ದೇಶಕ ವಿಜಯ್ ನಾಗೇಂದ್ರ ಅವರ ನಿರ್ದೇಶನದ ಚಿತ್ರದಲ್ಲಿ ನಟಿಸಲು ಗಣೇಶ್ ತೀರ್ಮಾನಿಸಿದ್ದಾರೆ ಎಂದು ಹೇಳಲಾಗಿದೆ.