ವಿ. ರವಿಚಂದ್ರನ್ 
ಸಿನಿಮಾ ಸುದ್ದಿ

ನನ್ನ ಚಿತ್ರಗಳ ಉದ್ದೇಶ ಕೇವಲ ಹಣಗಳಿಕೆಯಲ್ಲ: 56ರ ಜನ್ಮದಿನ ಸಂಭ್ರಮದಲ್ಲಿ ವಿ. ರವಿಚಂದ್ರನ್

ಇಂದು ಕ್ರೇಜಿಸ್ಟಾರ್ ರವಿಚಂದ್ರನ್ ಆವರ ಜನ್ಮ ದಿನ, 56ನೇ ವರ್ಷಕ್ಕೆ ಕಾಲಿಟ್ಟ ನಟ ಇಂದಿಗೂ ಸಾಕಷ್ಟು ಕಾರ್ಯಕ್ರಮಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ.

ಬೆಂಗಳೂರು: ಇಂದು ಕ್ರೇಜಿಸ್ಟಾರ್ ರವಿಚಂದ್ರನ್ ಆವರ ಜನ್ಮ ದಿನ, 56ನೇ ವರ್ಷಕ್ಕೆ ಕಾಲಿಟ್ಟ ನಟ ಇಂದಿಗೂ ಸಾಕಷ್ಟು ಕಾರ್ಯಕ್ರಮಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಆದರೆ ಅವರ ವೃತ್ತಿಜೀವನದ ಅನುಭವದಿಂದ ಇತ್ತೀಚೆಗೆ ಅವರು ಮಾಸ್ ಅಭಿಮಾನಿಗಳಿಂದ ಕ್ಲಾಸ್ ಜನರನ್ನು ತಲುಪಲು ಬಯಸುತ್ತಾರೆ. ಕ್ರೇಜಿ’ ಹೆಸರಿಗೆ ತಗುಲಿಕೊಂಡಿರುವ ತಮ್ಮ ನ್ನು ತಾವು ಕ್ಲಾಸ್ ಜನರಿಗೆ ಹತ್ತಿರವಾಗುವಂತೆ ಬದಲಿಸಿಕೊಳ್ಳುವ ಮೂಲಕ ಆ ಒಂದು ಇಮೇಜ್ ನಿಂದ ಹೊರಬರಲು ಅವರು ಪ್ರಯತ್ನಿಸುತ್ತಿದ್ದಾರೆ.
ಹುಟ್ಟು ಹಬ್ಬದ ಶುಭಸಂದರ್ಭದಲ್ಲಿ ಎಕ್ಸ್ ಪ್ರೆಸ್ ಜತೆ ಮಾತನಾಡಿದ ನಟ ತಮ್ಮಾನುಭವವನ್ನು ಹಂಚಿಕೊಂಡಿದ್ದಾರೆ.
"ಚಿತ್ರರಂಗಕ್ಕೆ ಮಾಸ್ ಚಿತ್ರಗಳೊಂದಿಗೆ ಕಾಲಿಟ್ಟ ನಟ ನಾನು, ಏಕಾಂಗಿ ಚಿತ್ರದಿಂದ ಕ್ಲಾಸ್ ಜನರನ್ನು ತಲುಪಲು ಪ್ರಯತ್ನಿಸಿದ್ದೆ. ಆದರೆ ದೃಶ್ಯದಲ್ಲಿನ ರಾಜೇಂದ್ರ ಪೊನ್ನಪ್ಪ ಪಾತ್ರದ ಮುಖೇನ ಮತ್ತೆ ಬದಲಾದ ಶೈಲಿಯಲ್ಲಿ ಕಾಣಿಸಿಕೊಂಡೆ, ಆ ಪಾತ್ರ ಕ್ಲಾಸ್ ಹಾಗೂ ಮಾಸ್ ಎರಡೂ ವಿಭಾಗದ ಜನರನ್ನು ತಲುಪಿದೆ.ನನ್ನ ಚಲನಚಿತ್ರವನ್ನು ವೀಕ್ಷಿಸಲು ಪ್ರೇಕ್ಷಕರು ಕುಟುಂಬ ಸಮೇತ ಬಂದಾಗ ನನಗೆ ತುಂಬಾ ಇಷ್ಟವಾಗುತ್ತದೆ" ಸಾಮಾಜಿಕವಾಗಿ ಪ್ರಸ್ತುತಪಡಿಸುವ ಪಾತ್ರದಲ್ಲಿ ನಟಿಸುತ್ತಿರುವ ನಟ ಹೇಳಿದ್ದಾರೆ.
ಇಂದು ರವಿಚಂದ್ರನ್ ಜನ್ಮದಿನವಾದರೂ ಅವರ ಯಾವ ಚಿತ್ರ ಸಹ ತೆರೆಗೆ ಬರುತ್ತಿಲ್ಲ ಎನ್ನುವುದು ಅವರ ಅಭಿಮಾನಿಗಳಿಗೆ ತುಸು ನಿರಾಸೆ ತಂದಿದೆ. "ಎಲ್ಲರೂ ಐವತ್ತು ವರ್ಷದ ಬಳಿಕ 51, 52, 53ವರ್ಷಗಳತ್ತ ಸಾಗುತ್ತಾರೆ. ಆದರೆ ನಾನು ಐವತ್ತು ವರ್ಷದ ಬಳಿಕ1, 2 ಮತ್ತು 3 ಎಂದು ಹೊಸದಾಇ ಎಣಿಕೆ ಪ್ರಾರಂಭಿಸಿದ್ದೇನೆ. ಈ ಬಿಡಿ ಅಂಕೆಯ ಹಿಒಂದಿದ್ದ 5ನ್ನು ತೆಗೆದು ಹಾಕಿದ್ದೇನೆ" ರವಿಚಂದ್ರನ್ ನಗುತ್ತಾ ನುಡಿದರು."ನನ್ನ ದೇಹ ಸಹ ವಯಸ್ಸಾಗಿದೆ ಎನ್ನುವುದನ್ನು ಸೂಚಿಸುತ್ತದೆ ಆದರೆ ನಾನು ಮಾತ್ರ ಇನ್ನಷ್ಟು ಪ್ರಯತ್ನ ಹಾಕಿ  ಕಷ್ಟಪಟ್ಟು ಕೆಲಸ ಮಾಡುತ್ತೇನೆ. ಹಾಗಾಗಿ, ನಾನು ಎಂದಿಗೂ ವಯಸ್ಸಾಗಿದೆ ಎಂದೆಣಿಸುವುದಿಲ್ಲ. ಕನಿಷ್ಟ ನನ್ನ ಯೋಚನೆಗಳಲ್ಲಿ ನಾನಿನ್ನೂ ಯುವಕನೇ ಆಗಿದ್ದೇನೆ."
'ನಾನು ಜವಾಬ್ದಾರಿಯುತ ಚಲನಚಿತ್ರೋದ್ಯಮಿ'
90 ರ ದಶಕದಲ್ಲಿ ವಾಣಿಜ್ಯೋದ್ದೇಶಿತ ಚಿತ್ರಗಳೇ ಶಿಖರಪ್ರಾಯ ಬೇಡಿಕೆ ಇತ್ತು. ನನ್ನ ಎಲ್ಲಾ ಚಲನಚಿತ್ರಗಳು ಆ ರೀತಿಯ ಚಿತ್ರಗಳೇ ಆಗಿದ್ದು ಪ್ರೇಕ್ಷಕರ ನಾಡಿಮಿಡಿತಕ್ಕೆ ಸರ್ಹೊಂದಿದ್ದವು, ಯಶಸ್ವಿಯಾಗಿದ್ದವು. ಪ್ರೇಕ್ಷಕರು ನನ್ನನ್ನು ಅನುಸರಿಸಿದ್ದರು, ಈ ನಟನಲಿ ಇನ್ನೇನೂ ಹೆಚ್ಚಿನದನ್ನು ನಿರೀಕ್ಷಿಸಲಾಗುವುದಿಲ್ಲ ಎಂದು ತೀರ್ಮಾನಿಉಸಿದರು. ಅವರು ನಾನಿನ್ನು ನಟಿಸುವುದೇ ಇಲ್ಲ ಎಂದೂ ತೀರ್ಮಾನಿಸಿದ್ದರು. ಆದರೆ ನಾನು ಪ್ರಯೋಗಕ್ಕಿಳಿದಿದ್ದೆ. ಹೊಸತನ್ನು ನಾನು ನೀಡಿದರೆ ಅದನ್ನು ನನ್ನ ಪ್ರೇಕ್ಷಕರು ಸಹ ಒಪಿಕೊಳ್ಳುವರೆಂದು ನಾನು ಭಾವಿಸುತ್ತಿದ್ದೆ
ಕಳೆದ 36 ವರ್ಷಗಳಿಂದ ಚಲನಚಿತ್ರವನ್ನೇ ಉಸಿರಾಗಿಸಿಕೊಂಡಿರುವ ನಟ ಯಾವಾಗ ಬೇಕಾದರೂ ಬೆಳ್ಳಿ ಪರದೆಯಲ್ಲಿ ಕಾಣಿಸಿಕೊಳ್ಳುವುದಕ್ಕೆ ಸಿದ್ದರಿದ್ದರು. ನಾನು ಉತ್ತಮ ವಿದ್ಯಾರ್ಥಿ ಎಂದು ಒಪ್ಪಿಕೊಳ್ಳುವ ರವಿಚಂದ್ರನ್  ಯಾವ ಪ್ದವಿ ಹೊಂದಿಲ್ಲದಿದ್ದರೂ ಅದು ಅವರಿಗೆ ಅಗತ್ಯವಿಲ್ಲ ಎಂದೇ ಭಾವಿಸುತ್ತಾರೆ. ಚಿತ್ರೋದ್ಯಮ ನನ್ನ ಪಾಲಿನ ಅತ್ಯುತ್ತಮ ಶಿಕ್ಷಕ ಎನ್ನುವ ನಟ "ನನ್ನ ಶಿಕ್ಷಣವು ಕೇವಲ ಚಲನಚಿತ್ರಗಳನ್ನು ನಿರ್ಮಿಸುವ ಅನುಭವದಿಂದಲೇ ಆರಂಭವಾಯಿತು. ನನ್ನ ಸುತ್ತಲಿನ ಜನರು ನನಗೆ ಸಾಕಷ್ಟು ಪಾಠಗಳನ್ನು ಕಲಿಸಿದ್ದಾರೆ ಅದರಲ್ಲಿ ಒಳ್ಳೆಯದಿದೆ, ಕೆಟ್ಟದೂ ಇದೆ. ಇದೆಲ್ಲ ದಾಟಿ ನಾನಿಂದು ಬದುಕುಳಿದಿದ್ದೇನೆ. ಜವಾಬ್ದಾರಿಯುತ ಚಿತ್ರನಿರ್ಮಾಪಕರಾಗಿ ಮತ್ತು ಚಿತ್ರರಂಗದ ಕುರಿತು ಪ್ರಾಮಾಣಿಕರಾಗಿರುವ ಓರ್ವ ಕಲಾವಿದನಾಗಿ ರವಿ ಇದ್ದಾರೆ.
ಎರಡೂವರೆ ಗಂಟೆಗಳ ಚಿತ್ರದ ಮೂಲಕ  ಅವರು ಪ್ರಭಾವಶಾಲಿ ಸಂದೇಶ ನೀಡಲು ಬಯಸಿದ್ದರು. "ನನ್ನ ಚಿತ್ರಗಳು ಕೇವಲ ಹಣಗಳಿಕೆಗಾಗಿ ಮಾತ್ರವೇ ಇಲ್ಲ, ನಾನು ತೆಗೆದುಕೊಂಡ ಹೆಚ್ಚುವರಿ ಜವಾಬ್ದಾರಿ  ಸಹ ಇದಾಗಿದೆ" ಅವರು ಹೇಳಿದ್ದಾರೆ.  ಏರಿಳಿತಗಳು ಜೀವನದ ಒಂದುಭಾಗವೆಂದು ಬಗೆಯುವ ನಟ ಅದರ ನ್ಯಾಯೋಚಿತ ಪಾಲನ್ನೇ ಹೊಂದಿದ್ದಾರೆ.ತಾನದನ್ನು ಸರಿಯಾದ ಸ್ಪಿರಿಟ್ ನಲ್ಲೇ ತೆಗೆದುಕೊಲ್ಳುತ್ತೇನೆ, ಅದರಿಂದ ನನಗೆ ಉತ್ತಮ ಸ್ಥಾನವೇ ದಕ್ಕಿಎ. "ದೇವರು ನನ್ನನ್ನು ಅನೇಕ ಬಾರಿ ಮೆಚ್ಚಿದ್ದಾನೆ, ಆದರೆ ನನಗೆ ಕೆಲವು ಕಠಿಣ ಸಮಯಗಳನ್ನು ನೀಡಿದ್ದಾನೆ. ಆದರೆ ನಾನು ಯಾವ ಸಮಯದಲ್ಲಾದರೂ ಅದನ್ನು ಅರ್ಥಮಾಡಿಕೊಳ್ಳಬಲ್ಲೆ. ಮತ್ತು ನಾನದನ್ನು ಧನಾತ್ಮವಾಗಿ ಪರಿಗಣಿಸುತ್ತೇನೆ. ಭಗವಂತ ನನ್ನ ಸಾಮರ್ಥ್ಯ ಪರೀಕ್ಷೆ ನಡೆಸಿದ್ದಾನೆಂದು ನಾನು ನಂಬುತ್ತೇನೆ" ಅವರು ಹೇಳುತ್ತಾರೆ.
ಚಿತ್ರರಂಗಕ್ಕೆ ಬಂದ ಸಮಯದಲ್ಲಿ ಆಲ್ ರೌಂಡರ್ ಆಗಿ ಕೆಲಸ ಮಾಡಿದ್ದ ನಟ ಈಗಲೂ ಒಂದೇ ವಿಭಾಗದಲ್ಲಿ ಕೆಲಸ ಮಾಡಲು ಇಷ್ಟಪಡುವುದಿಲ್ಲ.  "ನಾನು ಯಾವಾಗಲೂ ಚಲನಚಿತ್ರೋದ್ಯಮದ ಪ್ರತಿಯೊಂದು ವಿಭಾಗದಲ್ಲಿ  ಕೆಲಸ ಮಾಡುತ್ತಿದ್ದೆ.  ಬರವಣಿಗೆ, ನಿರ್ದೇಶನ, ನಿರ್ಮಾಣ, ಸಂಗೀತ.ಹೀಗೆ, ಪ್ರಾರಂಭದಲ್ಲಿ ನನಗೆ ಕನ್ನಡ ಆಡು ಭಾಷೆ ಅಷ್ಟೋಂದು ಪರಿಚಯವಿರಲಿಲ್ಲ. ಆದರೆ ವರ್ಷಗಳ ಅನುಭವದಿಂದ ಈಗದು ಸುಧಾರಿಸಿದೆ. ಬರವಣಿಗೆ ಸಹ ಪ್ರಾರಂಭಕ್ಕಿಂತ ಈಗ ಉತ್ತಮವಾಗಿದೆ.ನನ್ನ ಬದುಕಿನ ಪ್ರತಿ ಹಂತದಲ್ಲಿ ನಾನು ಪಾಠ ಕಲಿಯುತ್ತಾ ಸಾಗಿದೆ.ರವಿಚಂದ್ರನ್ ಹೇಳುತ್ತಾರೆ.
ನಟನೆ ನನಗೆ ಹೊಟ್ಟೆಗೆ ಅನ್ನ ನೀಡಿದೆ. ನಾನು ಆರ್ಥಿಕ ತೊಂದರೆಯಲ್ಲಿದ್ದಾಗ, ನಟನೆಯು ನನ್ನನ್ನು ಉಳಿಸಿದೆ. ನಟನೆಯಲ್ಲಿ ತೊಡಗಿದ್ದಾಗ ನಾನು ಕಷ್ಟದಲ್ಲಿದ್ದರೂ ಸಹ ಉತ್ತಮ ಆದಾಯ ಬರುತ್ತಿದ್ದು ನನ್ನ ನಿರ್ದೇಶನ ಕೆಲಸಕ್ಕೆ ಸಹಾಯ ಆಗಿದೆ ಎನ್ನುವುದನ್ನು ನಾನು ಮರೆಯಲಾರೆ.
ನನ್ನ ಮಕ್ಕಳ  ವೃತ್ತಿಜೀವನದ ಉಸ್ತುವಾರಿಯನ್ನು ತೆಗೆದುಕೊಳ್ಳುವೆ
"ನಾನು ನನ್ನ ಮಕ್ಕಳ  ವೃತ್ತಿಜೀವನದ ಉಸ್ತುವಾರಿಯನ್ನು ತೆಗೆದುಕೊಳ್ಳುವೆ" ಎನ್ನುವ ರವಿ  ಮನೋರಂಜನ್ ಮತ್ತು ವಿಕ್ರಮ್ ಅವರ ವೃತ್ತಿಜೀವನ, ನನನ್ಗೆ ಮುಖ್ಯವೆನ್ನುತ್ತಾರೆ. ನನ್ನ ಬದುಕನ್ನು ನೋಡಿ ಅವರಿಗೆ ಕಲಿಯಲು ಹೇಳುವೆ, ನನ್ನ ಅನುಭವವೇ ಅವರಿಗೆ ಪಾಠ. ಅವರಿಗೆ ಬೇಕಾದಾಗ ನಾನು ಅವರೊಡನೆ ಇರುತ್ತೇನೆ ಎಂದು ನಟ ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

26/11 ಮುಂಬೈ ದಾಳಿಗೆ 17 ವರ್ಷ: ಕರಾಳ ದಿನ ನೆನೆದ ದೇಶದ ಜನತೆ, ಹುತಾತ್ಮರಿಗೆ ಭಾವಪೂರ್ಣ ಶ್ರದ್ಧಾಂಜಲಿ

ಸಿಎಂ ಹುದ್ದೆ ಗುದ್ದಾಟ: ಸಿದ್ದರಾಮಯ್ಯ-ಡಿ ಕೆ ಶಿವಕುಮಾರ್ ಗೆ ಹೈಕಮಾಂಡ್ ದೆಹಲಿಗೆ ಬುಲಾವ್ ಸಾಧ್ಯತೆ

ನವೆಂಬರ್ 28ರಂದು ಉಡುಪಿಗೆ ಪ್ರಧಾನಿ ಮೋದಿ: ಬನ್ನಂಜೆಯಿಂದ ಕಲ್ಸಂಕ ಜಂಕ್ಷನ್‌ವರೆಗೆ ರೋಡ್ ಶೋ

ಯುಕ್ರೇನ್-ರಷ್ಯಾ ಶಾಂತಿ ಒಪ್ಪಂದ ಸನಿಹ: ಸುಳಿವು ನೀಡಿದ ಯುಕ್ರೇನ್

2026 T20 ವಿಶ್ವಕಪ್: ಕೊಲಂಬೋದಲ್ಲಿ ಫೆ.15 ರಂದು ಭಾರತ- ಪಾಕ್ ಪಂದ್ಯ

SCROLL FOR NEXT