ಮೈಸೂರು: ಕಳೆದ ಕೆಲ ದಿನಗಳ ಹಿಂದೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕಾರು ಅಪಘಾತವಾಗಿದ್ದ ಪ್ರಕರಣಕ್ಕೆ ಸಂಬಂಧಿಸಿ ನ್ಯಾಯಾಲಯದಲ್ಲಿ ದೋಷಾರೋಪ ಪಟ್ಟಿ ಸಲ್ಲಿಕೆಯಾಗಿದೆ.
ಪ್ರಕರಣ ಸಂಬಂಧ ಪೋಲೀಸರು ಶನಿವಾರ ಮೈಸೂರಿನ 4ನೇ ಜೆಎಂಎಫ್‍ಸಿ ನ್ಯಾಯಾಲಯದಲ್ಲಿ ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ.
ಅಪಘಾತದ ವೇಳೆ ದರ್ಶನ್ ಸ್ನೇಹಿತ ಆಂಟೋನಿ ರಾಯ್ ಕಾರನ್ನು ಚಲಾಯಿಸುತ್ತಿದ್ದನೆಂದು ಉಲ್ಲೇಖಿಸಲಾಗಿದೆ. ದೋಷಾರೋಪ ಪಟ್ಟಿಯಲ್ಲಿನ ಪ್ರಮುಖ ವಿವರಗಳು ಹೀಗಿದೆ-
ಸೆಪ್ಟೆಂಬರ್ 23ರಂದು ನಟ ದರ್ಶನ್ ತೂಗುದೀಪ ಅವರ ಕಾರು ಅಪಘಾತವಾಗಿತ್ತು. ಆವ್ ಏಳೆ ಅವರ ಸ್ನೇಹಿತನಾದ ಆಂಟೋನಿ ರಾಯ್ ಕಾರು ಚಾಲನೆ ಮಾಡುತ್ತಿದ್ದ.ಮೈಸೂರು ರಿಂಗ್ ರಸ್ತೆಯ ಜಂಕ್ಷನ್ ಸಮೀಪ ಚಾಲಕನ ನಿರ್ಲಕ್ಷದಿಂದ ಕಾರು ಡಿವೈಡರ್ ಗೆ ಡಿಕ್ಕಿಯಾಗಿ ಪಲ್ಟಿ ಹೊಡೆದಿದೆ. ಅಪಘಾತದಿಂದ 5 ಮಂದಿಗೆ ಗಾಯವಾಗಿದ್ದು ಚಿಕಿತ್ಸೆ ಪಡೆದಿದ್ದಾರೆ. ಈ ವೇಳೆ ನಟನ ಸಹಾಯಕ್ಕೆ ಬಂದಿದ್ದ ವ್ಯಕ್ತಿಯೊಬ್ಬರು ಆಯತಪ್ಪಿ ಬಿದ್ದು ಗಾಯಗೊಂಡಿದ್ದು ಅವರೂ ಸಹ ಚಿಕಿತ್ಸೆ ಪಡೆಇದ್ದಾರೆ.ಕಾರಿನಲ್ಲಿ ಯಾವ ತಾಂತ್ರಿಕ ದೋಷವಿರಲ್ಲಿಲ್ಲ ಎನ್ನುವುದು ಸಾಬೀತಾಗಿದ್ದು ತಾಂತ್ರಿಕ ದೋಷದಿಂದ ಅಪಘಾತ ಸಂಭವಿಸಿಲ್ಲ. ಚಾಲಕನ ನಿರ್ಲಕ್ಷವೇ ಅವಘಡಕ್ಕೆ ಕಾರಣವಾಗಿದೆ.
ಚಾಲಕ ಆಂಟೋನಿ ರಾಯ್ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕು ಎಂದು ಪೋಲೀಸರು ನ್ಯಾಯಾಲಯಕ್ಕೆ ಮನವಿ ಮಾಡಿದ್ದಾರೆ.