ರಿಯಾ ರನ್ವಿಕಾ 
ಸಿನಿಮಾ ಸುದ್ದಿ

ಕನ್ನಡಕ್ಕೆ ಇನ್ನೊಬ್ಬ ನವ ನಟಿ: 'ನಮ್ ಹುಡುಗ್ರು ಕಥೆ' ಹೇಳಲು ತಯಾರಾದ ರಿಯಾ ರನ್ವಿಕಾ

ಸ್ಯಾಂಡಲ್ ವುಡ್ ಗೆ ಇನ್ನೊಂದು ಹೊಸ ನಟಿಯ ಆಗಮನವಾಗಿದೆ. ಮೈಸೂರಿನ ಲಿಖಿತಾ ಬಿಲ್ಲಾಳ್ ಚಿತ್ರರಂಗದಲ್ಲಿ ರಿಯಾ ರನ್ವಿಕಾ ಆಗಿ ಮಿಂಚಲು ತಯಾರಾಗಿದ್ದಾರೆ. ಇಂಜಿನಿಯರಿಂಗ್....

ಬೆಂಗಳೂರು: ಸ್ಯಾಂಡಲ್ ವುಡ್ ಗೆ ಇನ್ನೊಂದು ಹೊಸ ನಟಿಯ ಆಗಮನವಾಗಿದೆ. ಮೈಸೂರಿನ ಲಿಖಿತಾ ಬಿಲ್ಲಾಳ್ ಚಿತ್ರರಂಗದಲ್ಲಿ ರಿಯಾ ರನ್ವಿಕಾ ಆಗಿ ಮಿಂಚಲು ತಯಾರಾಗಿದ್ದಾರೆ. ಇಂಜಿನಿಯರಿಂಗ್ ವ್ಯಾಸಂಗ ಮಾಡಿರುವ ರಿಯಾ ಎಚ್.ಬಿ. ಸಿದ್ದು  ನಿರ್ದೇಶನದ "ನಮ್ ಹುಡುಗ್ರು ಕಥೆ" ಚಿತ್ರದಲ್ಲಿ ಅಭಿನಯಿಸುವ ಮೂಲಕ ಬೆಳ್ಳಿಪರದೆಗೆ ಪದಾರ್ಪಣೆ ಮಾಡಲಿದ್ದಾರೆ.
ಸಿದ್ದು ಚಿತ್ರಕ್ಕೆ ಕಥೆ, ಸಂಭಾಷಣೆಯನ್ನೂ ಬರೆದಿರುವ ಈ ಚಿತ್ರಕ್ಕೆ ನಿರಂಜನ್ ನಾಯಕರಾಗಿದ್ದಾರೆ.
"ನಾನು ಚಿಕ್ಕ ವಯಸ್ಸಿನಲ್ಲಿ ಕನ್ನಡಿ ಮುಂದೆ ನಿಂತು ಅಭಿನಯಿಸುವ ಅಭ್ಯಾಸವನ್ನು ಹೊಂದಿದ್ದೆ. ಚಿತ್ರನಟಿಯಾಗುವ ಮುನ್ನ ನಾಗತಿಹಳ್ಳಿ ಚಂದ್ರಶೇಖರ್ ಅವರ ಟೆಂಟ್ ಸಿನಿಮಾ ನಲ್ಲಿ ಮೂರು ತಿಂಗಳ ಸರ್ಟಿಫಿಕೇಟ್ ಕೋರ್ಸ್ ಗೆ ಸೇರಿ ತರಬೇತಿಯನ್ನೂ ಪಡೆದಿದ್ದೇನೆ" ಪೋಷಕರ ಬೆಂಬಲ, ಸಹಕಾರದಿಂದ ಮೈಸೂರಿನಿಂದ ಬೆಂಗಳೂರಿಗೆ ವಾಸ್ತವ್ಯ ಬದಲಿಸಿರುವ ನಟಿ ರಿಯಾ ಹೇಳಿದ್ದಾರೆ.
"ನಾನು ಚಿತ್ರರಂಗಕ್ಕೆ ಬರಲು ಗಾಡ್ ಫಾದರ್ ಗಳಿರಬೇಕು ಎನ್ನುವ ವಾದವನ್ನು ಒಪ್ಪುವುದಿಲ್ಲ. ಸಧ್ಯ ನಾನು ನನ್ನ ಕೆಲಸದ ಮೇಲೆ ನನ್ನೆಲ್ಲಾ ಗಮನ ಕೇಂದ್ರೀಕರಿಸುತ್ತೇನೆ. ಹಾಗೆಯೇ ಕಠಿಣ ಪರಿಶ್ರಮ ಇದ್ದಲ್ಲಿ ನೀವು ಯಾವ ಸ್ಥಾನಕ್ಕೆ ಬೇಕಾದರೂ ಏರಬಹುದು ಎಂದು ನಾನು ನಂಬುತ್ತೇನೆ."
ಹಲವು ಸ್ಕ್ರಿಪ್ಟ್ ಗಳನ್ನು ಓದಿದ್ದ ನಂತರ ಸಿದ್ದು ಅವರ "ನಮ್ ಹುಡುಗ್ರು ಕಥೆ"ಯನ್ನು ತನ್ನ ಚೊಚ್ಚಲ ಚಿತ್ರವನ್ನಾಗಿ ಆಯ್ಕೆ ಮಾಡಿಕೊಂಡ ರಿಯಾ ಈ ಚಿತ್ರದಲ್ಲಿ ನನ್ನ ಪಾತ್ರ ಮುಗ್ಧ ಹುಡುಗಿಯಿಂದ ಪ್ರಬುದ್ಧ ಮಹಿಳೆಯಾಗಿ ಪರಿವರ್ತನೆಯಾಗಲಿದೆ. ಇದು ನನಗೆ ಹೆಚ್ಚು ಸಂತಸವನ್ನು ತಂದಿದೆ. ಎಂದರು.
"ನಮ್ ಹುಡುಗ್ರು ಕಥೆ"ಗೆ ಅಭಿಮಾನ್ ರಾಯ್ ಸಂಗೀತವಿದ್ದು ಸೂರ್ಯ ಎಸ್. ಕಿರಣ್ ಛಾಯಾಗ್ರಹಣವಿದೆ. ಚಿತ್ರದ ಶೂಟಿಂಗ್ ಬೆಂಗಳೂರಿನಲ್ಲಿ ಪ್ರಾರಂಭವಾಗಲಿದ್ದು ಬಳಿಕ ಚಿತ್ರತಂಡ ಮಂಗಳೂರು, ಮಂಡ್ಯ, ಮೈಸೂರು ಮತ್ತು ಧರ್ಮಸ್ಥಳಕ್ಕೆ ಪ್ರಯಾಣ ಬೆಳೆಸಲಿದೆ.
ರಮ್ಯಾಳ ಶೈಲಿ ನನಗೆ ಇಷ್ಟ, ರಾಧಿಕಾ ಪಂಡಿತ್ ರೋಲ್ ಮಾಡಲ್
"ನಾನು ರಮ್ಯ ಅವರ ಶೈಲಿಯನ್ನು ಇಷ್ಟಪಡುತ್ತೇನೆ.ಎರಡನೆಯದು ರಾಧಿಕಾ ಪಂಡಿತ್, ಅವರು ತಮ್ಮ ಕೆಲಸದ ಮೂಲಕ ಉದ್ಯಮದಲ್ಲಿ ಒಂದು ಉದಾಹರಣೆಯಾಗಿದ್ದಾರೆ" ರಿಯಾ ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಬಿಜೆಪಿ ಸಂಸದೀಯ ಮಂಡಳಿಯಲ್ಲಿ ಮಹತ್ತರ ಬದಲಾವಣೆ ಸಾಧ್ಯತೆ; ನಾಲ್ವರು ಮುಖ್ಯಮಂತ್ರಿಗಳಿಗೆ ಸ್ಥಾನ?

ಇರಾನ್‌ ತೈಲ ವಹಿವಾಟಿಗೆ ಅಮೆರಿಕಾ ಬ್ರೇಕ್: ಭಾರತದ 4 ಕಂಪನಿಗಳು ಕಪ್ಪುಪಟ್ಟಿಗೆ, 3 ಪ್ರಜೆಗಳ ಮೇಲೂ ನಿರ್ಬಂಧ..!

"ಮದುವೆ ಅಂದ್ರೆ ಗುಲಾಮಗಿರಿಯಲ್ಲ, ಮನೆಗೆಲಸ ಮಾಡು-ಅತ್ತೆ-ಮಾವನ ನೋಡ್ಕೋ ಅನ್ನೋಕೆ ಗಂಡನಿಗೆ ಹಕ್ಕಿಲ್ಲ": ಹೈಕೋರ್ಟ್ ಮಹತ್ವದ ತೀರ್ಪು..!

ಬಿಡದಿ ಟೌನ್‌ಶಿಪ್‌ ಯೋಜನೆ: ರೈತರ ಭೂಮಿ ಕಸಿಯಲ್ಲ, denotification ಮಾಡಲ್ಲ- ಸಿಎಂ ಡಿಕೆ. ಶಿವಕುಮಾರ್ ಸ್ಪಷ್ಟನೆ

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?