'ಪಾರಣೆ' 
ಸಿನಿಮಾ ಸುದ್ದಿ

ಗಡಿನಾಡಿನ ಜನರ ಅಸ್ತಿತ್ವ ಸಾರುವ ಕೊಡವ ಚಿತ್ರ 'ಪಾರಣೆ'ಗೆ ಅಂತರಾಷ್ಟ್ರೀಯ ಮನ್ನಣೆ

ಕೊಡವ ಚಿತ್ರ "ಪಾರಣೆ" ಫಸ್ಟ್ ಲುಕ್ ಪೋಸ್ಟರ್ ಹಾಗೂ ಟೀಸರ್ ಗಳನ್ನು ಚಿತ್ರ ನಿರ್ದೇಶಕ ಸನಲ್ ಕುಮಾರ್ ಶಶಿಧರನ್ ಇಂದು (ಗುರುವಾರ) ಬಿಡುಗಡೆಗೊಳಿಸುತ್ತಿದ್ದಾರೆ.

ಬೆಂಗಳೂರು: ಕೊಡವ ಚಿತ್ರ "ಪಾರಣೆ" ಫಸ್ಟ್ ಲುಕ್ ಪೋಸ್ಟರ್ ಹಾಗೂ ಟೀಸರ್ ಗಳನ್ನು ಚಿತ್ರ ನಿರ್ದೇಶಕ ಸನಲ್ ಕುಮಾರ್ ಶಶಿಧರನ್ ಇಂದು (ಗುರುವಾರ) ಬಿಡುಗಡೆಗೊಳಿಸುತ್ತಿದ್ದಾರೆ.
ಬೆ<ಗಳೂರಿನಲ್ಲಿ ನೆಲೆಸಿರುವ ಕೇರಳಿಗ ಶ್ರೀಲೇಸ್ ಎಸ್. ನಾಯರ್ ಈ ಚಿತ್ರ ನಿರ್ಮಿಸುತ್ತಿದ್ದು ಕೊಡವ ಭಾಷೆಯಲ್ಲಿ ತಯಾರಾದ ಚಿತ್ರದ ಮೂಲಕ ಮತ್ತೊಮ್ಮೆ ಕರ್ನಾಟಕ-ಕೇರಳ ಗಡಿ ಭಾಗದ ಜನರ ಚಿತ್ರಣವನ್ನು ಬಿಂಬಿಸಲು ಪ್ರಯತ್ನ ಸಾಗಿದೆ. 
ಕೊಡಗಿನಲ್ಲಿರುವ ಪಾರಣೆ ಎನ್ನುವ ಗ್ರಾಮದ ಹೆಸರನ್ನೇ ಚಿತ್ರಕ್ಕೂ ಇಡಲಾಗಿದ್ದು ಅಲ್ಲಿನ ಜನರು ತಮ್ಮ ಅಸ್ತಿತ್ವದ ಕುರಿತಂತೆ ಎದುರಿಸುತ್ತಿರುವ ಸಮಸ್ಯೆಯ ಬಗ್ಗೆ ಚಿತ್ರ ಗಮನ ಹರಿಸುತ್ತದೆ.
"ಪಾರಣೆ- ಪ್ರಾದೇಶಿಕ ಸಂಸ್ಕೃತಿಯನ್ನು, ನೆಲವನ್ನು ಪರಿಶೋಧಿಸುತ್ತದೆ ಮತ್ತು ಅವರು ತಮ್ಮ ತಾಯ್ನಾಡನ್ನು ಕಾಪಾಡಿಕೊಳ್ಳಲು ತಮ್ಮ ಸ್ಥಳೀಯ ಪ್ರದೇಶದ ಮೇಲೆ ನಡೆಯುವ ಆಕ್ರಮಣ ವಿರುದ್ಧ ಜನರು ದಂಗೆಯೇಳುವುದನ್ನು ತೋರಿಸುವುದು ನನ್ನ ಕಥೆಯ ಉದ್ದೇಶವಾಗಿದೆ"  ಶ್ರೀಲೇಶ್ ವಿವರಿಸಿದರು.
ವಿಶೇಷವೆಂದರೆ ಇದು ಅತ್ಯಂತ ಕಡಿಮೆ ಬಜೆಟ್ ನ ಚಿತ್ರ. ಇದಕ್ಕಾಗಿ ಕೇವಲ 3.5ಲಕ್ಷ ರು. ವೆಚ್ಚ ಮಾಡಲಾಗಿದೆ. ಅಷ್ಟೇ ಅಲ್ಲ ಚಿತ್ರದಲ್ಲಿ ಯಾವ ವೃತ್ತಿಪರ ನಟ-ನಟಿಯರೂ ಇಲ್ಲ.ಚಿತ್ರಕ್ಕಾಗಿ ಯಾವುದೇ ಲಿಖಿತ ರೂಪದ ಚಿತ್ರಕಥೆಯನ್ನು ಬರೆದಿಡಲಿಲ್ಲ. "ನಾವು ಪಾರಣೆ ಗ್ರಾಮದ ಜನರನ್ನೇ ಚಿತ್ರಕ್ಕೆ ಆಯ್ಕೆ ಮಾಡಿಕೊಂಡೆವು.ಚಿತ್ರವನ್ನು ಕೊಡಗಿನ ಸುತ್ತಲೂ ಚಿತ್ರದ ಚಿತ್ರೀಕರಣ ನಡೆದಿದೆ." ನಿರ್ದೇಶಕ ಹೇಳಿದ್ದಾರೆ.
ಇದೀಗ ಈ ಚಿತ್ರ ಹಲವು ರಾಷ್ಟ್ರೀಯ-ಅಂತರಾಷ್ಟ್ರೀಯ ಮಟ್ಟದ ಚಿತ್ರೋತ್ಸವದಲ್ಲಿ ಪ್ರದರ್ಶನಕ್ಕೆ ಆಯ್ಕೆಯಾಗಿದೆ. ನಿರ್ದೇಶಕರು ಇದರಿಂದ ಸಹಜವಾಗಿ ಸಂತಸಗೊಂಡಿದ್ದು "ಭಾರತದಲ್ಲಿ ಮೊದಲ ಬಾರಿಗೆಕೊಡವ ಭಾಷಾ ಚಿತ್ರವೊಂದು ಚಿತ್ರೋತ್ಸವದಲ್ಲಿ ಪ್ರದರ್ಶನವಾಗುತಿದೆ. ಇದು ಇಂಡೋನೇಷಿಯಾ ಹಾಗು ಬ್ರಿಟನ್ ನಲ್ಲಿ ನಡೆಯುವ ಚಿತ್ರೋತ್ಸವದಲ್ಲಿ ಪ್ರದರ್ಶನಗೊಳ್ಳುತ್ತಿರುವುದು ನಮಗೆ ಅತ್ಯಂತ ಖುಷಿಯ ವಿಚಾರ" ಅವರು ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT