ತರುಣ್, ದರ್ಶನ್ ಜೋಡಿಯ ಹೊಸ ಚಿತ್ರದ ''ಡಿ53’ ಪೋಸ್ಟರ್!
ಬೆಂಗಳೂರು: ತರುಣ್ ಸುಧೀರ್ ತಮ್ಮ ಮುಂದಿನ ಚಿತ್ರಕ್ಕಾಗಿ ತಯಾರಿ ನಡೆಸಿದ್ದು ದರ್ಶನ್ ನಾಯಕನಾಗಿರುವ ಚಿತ್ರದ ಪೋಸ್ಟರ್ ಬಿಡುಗಡೆಗೊಳಿಸಿದ್ದಾರೆ. ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಸ್ಯಾಂಡಲ್ ವುಡ್ ನ ಡಿ ಬಾಸ್ ದರ್ಶನ್ ಅಭಿನಯದ ಚಿತ್ರವೊಂದರ ಹೊಸ ಪೋಸ್ಟರ್ ಬಿಡುಗಡೆಯಾಗಿರುವುದು ನಟನ ಅಭಿಮಾನಿಗಳ ಪಾಲಿಗೆ ಎಲ್ಲಿಲ್ಲದ ಹರ್ಷ ತಂದಿದೆ.
ವಿಶೇಷವೆಂದರೆ "ಡಿ53" ಎನ್ನುವ ಶೀರ್ಷಿಕೆಯನ್ನು ಹೊಂದಿರುವ ಈ ಪೋಸ್ಟರ್ ನಲ್ಲಿ ಮನುಷ್ಯನೊಬ್ಬನ ಎರಡು ಕೈಗಳು ಹಾಗೂ ಒಂದು ಮಗುವಿನ ಚಿತ್ರವಿದೆ.ಅಲ್ಲದೆ ಆ ಮಗುವಿನ ಹಿನ್ನೆಲೆಯಲ್ಲಿ ರಾಮಾಯಣದ ಪ್ರಸಿದ್ದ ಖಳನಾಯಕ ರಾವಣನ ಚಿತ್ರವೂ ಇದೆ.
ಅಲ್ಲದೆ "ಈ ಲೈಗೆ ಶಬರಿ ಮುಂದೆ ಸೋಲೋದು ಗೊತ್ತು, ರಾವಣನ ಮುಂದೆ ಗೆಲ್ಲೋದು ಗೊತ್ತು" ಎಂದು ಟ್ಯಾಗ್ ಲೈನ್ ಸಹ ಈ ಪೋಸ್ಟರ್ ನಲ್ಲಿದ್ದು ಚಿತ್ರರಸಿಕರಲ್ಲಿ ಅಪಾರ ಕುತೂಹಲ ಮೂಡಿಸಿದೆ.
ಫೈನ್ ಆರ್ಟ್ ವಿದ್ಯಾರ್ಥಿ ಪರಿವರ್ತನ್ ಈ ಪೋಸ್ಟರ್ ಸೃಷ್ಟಿಸಿದ್ದು ನಿರ್ದೇಸಕರು ಈ ಪೋಸ್ಟರ್ ಉತ್ತಮ ಸೃಷ್ಟಿಯ ಹಿಂದೆ ಪರಿವರ್ತನ ಕೈಗಳಿರುವುದನ್ನು ಒಪ್ಪಿಕೊಳ್ಳುತ್ತಾರೆ."ಪಾತ್ರ ಅಥವಾ ಚಿತ್ರದ ಶೀರ್ಷಿಕೆ ಬಹಿರಂಗವಾಗದಿದ್ದರೂ ಪೋಸ್ಟರ್ ಬಗ್ಗೆ ಸಿಕ್ಕಿದ ಪ್ರತಿಕ್ರಿಯೆ ಅದ್ಭುತವಾಗಿದೆ.ಪೋಸ್ಟರ್ ಸೃಷ್ಟಿಯಲ್ಲಿರುವ ವೈಶಿಷ್ಟ್ಯಪೂರ್ಣ ಚಾಕಚಕ್ಯತೆಯನ್ನು ಪ್ರೇಕ್ಷಕರು ಮೆಚ್ಚಿಕೊಂಡಿದ್ದಾರೆ" ತರುಣ್ ಹೇಳಿದ್ದಾರೆ. ಪರಿವರ್ತನ್ ಸಹ ದರ್ಶನ್ ಅವರ ದೊಡ್ಡ ಅಭಿಮಾನಿಯಾಗಿದ್ದು ಅವರ ಚಿತ್ರಕ್ಕೆ ಪೋಸ್ಟರ್ ನಿರ್ಮಿಸುವ ಮೂಲಕ ಅವರ ಅಭಿಮಾನ ಮೆರೆದಿದ್ದಾರೆ ಎಂದು ಅವರು ಹೇಳಿದ್ದಾರೆ.
ಉಮಾಪತಿ ನಿರ್ಮಾಣದ ಈ ಚಿತ್ರದ ಶೀರ್ಷಿಕೆಯ ಅಧಿಕೃತ ಘೋಷಣೆಯನ್ನು ಡಿಸೆಂಬರ್ ನಲ್ಲಿ ಮಾಡುವುದಕ್ಕಾಗಿ ಚಿತ್ರರಂಗ ಯೋಜನೆ ರೂಪಿಸಿದೆ. ಮುಂದಿನ ವರ್ಷ ಸಂಕ್ರಾಂತಿ ಹಬ್ಬದ ಸಮಯಕ್ಕೆ ಚಿತ್ರದ ಫಸ್ಟ್ ಲುಕ್ ಬಿಡುಗಡೆಗೆ ತರುಣ್ ಸಜ್ಜಾಗುತ್ತಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics