ಮುಂಬೈ: ನಟ ಯಶ್ ಅಭಿನಯದ ಬಹು ನಿರೀಕ್ಷಿತ ಚಿತ್ರ ಕೆಜಿಎಫ್ ಟ್ರೈಲರ್ ಬಿಡುಗಡೆಯಾಗಿದ್ದು, ಟ್ರೇಲರ್ ನೋಡಿದ ಹಲವು ಖ್ಯಾತನಾಮರು ಟ್ರೈಲರ್ ಗೆ ಫಿದಾ ಆಗಿದ್ದಾರೆ.
ಟ್ರೈಲರ್ ಮೂಡಿ ಬಂದಿರುವ ಚಾಕಚಕ್ಯತೆಗೆ ದಕ್ಷಿಣ ಭಾರತದ ಸಿನಿಮಾ ನಟರು, ನಿರ್ಮಾಪಕರು, ನಿರ್ದೇಶಕರು ಫಿದಾ ಆಗಿದ್ದಾರೆ. ಇದಕ್ಕೆ ನೂತನ ಸೇರ್ಪಡೆ ಎಂಬಂತೆ ಬಾಲಿವುಡ್ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಕೂಡ ಕೆಜಿಎಫ್ ಟ್ರೈಲರ್ ನೋಡಿ ಚಿತ್ರತಂಡದ ಶ್ರಮಕ್ಕೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ನಿರ್ದೇಶಕ ರಾಮಗೋಪಾಲ ವರ್ಮಾ ಟ್ವೀಟ್ ಮಾಡಿದ್ದು, ಕೆಜಿಎಫ್ ನೋಡಲೇಬೇಕಾದ ಸಿನಿಮಾ. ಚಿತ್ರದ ಟ್ರೈಲರ್ ಅಮೇಜಿಂಗ್ ಆಗಿದ್ದು, ರೋಮಾಂಚನವನ್ನ ಹೆಚ್ಚಿಸುತ್ತಿದೆ. ದಕ್ಷಿಣ ಭಾರತದ ಸಿನಿಮಗಳು ಉತ್ತರ ಭಾರತದ ಸಿನಿಮಾಗಳಿಗಿಂತ ಹೆಚ್ಚು ಎತ್ತರಕ್ಕೆ ಏರುತ್ತಿವೆ ಎಂದು ಟ್ವೀಟ್ ಮಾಡಿದ್ದಾರೆ.