ಕಿಚ್ಚ ಸುದೀಪ್ ಹಾಗೂ ನಿರ್ದೇಶಕ ಪ್ರೇಮ್
ಬೆಂಗಳೂರು: ಕನ್ನಡ ಬಾವುಟಕ್ಕೆ ಅವಮಾನ ಮಾಡಿದ ಆರೋಪದಡಿಯಲ್ಲಿ ನಟ ಕಿಚ್ಚ ಸುದೀಪ್ ಹಾಗೂ ನಿರ್ದೇಶಕ ಪ್ರೇಮ್ ವಿರುದ್ಧ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ದೂರು ದಾಖಲಾಗಿದೆ.
ಪ್ರೇಮ್ ನಿರ್ದೇಶನದ ಶಿವರಾಜ್ ಕುಮಾರ್ ಹಾಗೂ ಸುದೀಪ್ ಅಭಿನಯದ "ದಿ ವಿಲನ್" ಚಿತ್ರದ ಹಾಡೊಂದರಲ್ಲಿ ಸುದೀಪ್ ಕನ್ನಡ ಬಾವುಟವನ್ನು ಸೊಂಟಕ್ಕೆ ಸುತ್ತಿಕೊಳ್ಳುವ ಮೂಲಕ ಅವಮಾನ ಮಾಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಈ ಸಂಬಂಧ ನಿರ್ದೇಶಕ ಪ್ರೇಮ್ ಹಾಗೂ ಸುದೀಪ್ ಇಬ್ಬರೂ ಕ್ಷಮೆ ಕೇಳಬೇಕು ಎಂದುಕನ್ನಡ ಸಂಘಟನೆಗಳ ಒಕ್ಕೂಟ ಒತ್ತಾಯಿಸಿದೆ.
ಕನ್ನಡ ಚಳವಳಿ ನಾಗೇಶ್ ಎನ್ನುವವರು ವಾಣಿಜ್ಯ ಮಂಡಳಿಗೆ ದೂರು ನೀಡಿದ್ದು ಹಾಗೇನಾದರೂ ಕ್ಷಮೆ ಕೇಳದೆ ಹೋದರೆ "ದಿ ವಿಲನ್" ಪ್ರದರ್ಶಿಸಲಾಗುವ ಚಿತ್ರಮಂದಿರಗಳ ಎದುರು ಪ್ರತಿಭಟನೆ ನಡೆಸಲಾಗುತ್ತದೆ ಎಂದೂ ದೂರಿನಲ್ಲಿ ಉಲ್ಲೇಖಿಸಲಾಗಿದೆ.
"ದಿ ವಿಲನ್ ಚಿತ್ರದಲ್ಲಿ ಕನ್ನಡ ಬಾವುಟಕ್ಕೆ ಅಪಮಾನ ಮಾಡಲಾಗಿದೆ ಎನ್ನುವ ದೂರು ಬಂದಿರುವುದು ನಿಜ. ಆದರೆ ಚಿತ್ರ ಬಿಡುಗಡೆಯಾಗಿ ಹಲವು ದಿನಗಳಾಗಿದ್ದು ಸೆನ್ಸಾರ್ ಮಂಡಳಿ ಸಹ ಈ ದೃಶ್ಯಗಕ್ಕೆ ಅನುಮತಿ ನೀಡಿದೆ. ಹೀಗಾಗಿ ದೂರುದಾರರು ನೇರವಾಗಿ ನಿರ್ದೇಶಕ ಪ್ರೇಮ್ ಅವರ ಬಳಿ ತೆರಳಬೇಕೆಂದು ಸೂಚಿಸಿದ್ದೇವೆ" ಮಾಧ್ಯಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ವಾಣಿಜ್ಯ ಮಂಡಳಿ ಅಧ್ಯಕ್ಷ ಎಸ್.ಎ. ಚೆನ್ನೇಗೌಡ ಹೇಳಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos