ಯಶ್-ರಾಧಿಕಾ ದಂಪತಿ (ಸಂಗ್ರಹ ಚಿತ್ರ)
ಬೆಂಗಳೂರು: ಸ್ಯಾಂಡಲ್ ವುಡ್ ಸ್ಟಾರ್ ದಂಪತಿಗಳಾದ ಯಶ್-ರಾಧಿಕಾ ದಂಪತಿ ಸೀಮಂತ ಸಂಭ್ರಮದಲ್ಲಿರುವಾಗಲೇ ಅವರ ಅಭಿಮಾನಿಗಳಿಗೆ ಮತ್ತೊಂದು ಸಿಹಿ ಸುದ್ದಿ ನೀಡುವ ಸಾಧ್ಯತೆ ಇದೆ.
ಈ ಬಗ್ಗೆ ಮಾಧ್ಯಮವೊಂದು ವರದಿ ಮಾಡಿದ್ದು, ನಗರದ ತಾಜ್ ವೆಸ್ಟ್ ಎಂಡ್ ಹೋಟೆಲ್ ನಲ್ಲಿ ಸೀಮಂತ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿದೆ. ಗೌಡ್ರ ಸಂಪ್ರದಾಯದಂತೆ ಮಧ್ಯಾಹ್ನ ಸೀಮಂತ ಶಾಸ್ತ್ರ ನಡೆಯಲಿದ್ದು, ಸೀಮಂತದ ಫಂಕ್ಷನ್ ಗೆ ಸ್ಯಾಂಡಲ್ ವುಡ್ ಸ್ಟಾರ್ ನಟರೂ ಸೇರಿದಂತೆ ಖ್ಯಾತನಾಮ ಕಲಾವಿದರು ಭಾಗಿ ಆಗಲಿದ್ದಾರೆ. ಈಗಾಗಲೇ ರಾಧಿಕಾ ಹಾಗೂ ಯಶ್ ತಾಜ್ ವೆಸ್ಟೆಂಡ್ ಗೆ ಆಗಮಿಸಿದ್ದು, ಮದುವೆ ಆದ ಸ್ಥಳದಲ್ಲೇ ಸೀಮಂತ ಶಾಸ್ತ್ರ ನಡೆಯುತ್ತಿದೆ.
ಈ ಸ್ಥಳ ಯಶ್ ಮತ್ತು ರಾಧಿಕಾರ ಫೇವರಿಟ್ ಸ್ಥಳವಾಗಿದೆ. ಸದ್ಯಕ್ಕೆ ಸೀಮಂತದ ಅರೇಂಜ್ ಮೆಂಟ್ಸ್ ನಡೆಯುತ್ತಿದ್ದು, ಯಶ್ ಹಾಗೂ ರಾಧಿಕಾ ಸೀಮಂತಕ್ಕೆ ರೆಡಿ ಆಗುತ್ತಿದ್ದಾರೆ. ಸಿನಿಮಾರಂಗದವರು, ಆಪ್ತರು ಮತ್ತು ಬಂಧುಗಳೆಲ್ಲರು ಸೀಮಂತಕ್ಕೆ ಹಾಜರಾಗುವ ಸಾಧ್ಯತೆ ಇದೆ.
ಇನ್ನು ಯಶ್ ಹಾಗೂ ರಾಧಿಕಾ ಡಿಸೆಂಬರ್ 9ರಂದು ಮದುವೆ ಆಗಿದ್ದರು. ಸಂತಸದ ವಿಷಯವೆಂದರೆ ಅದೇ ದಿನವೇ ಮಗು ಜನನಕ್ಕೆ ವೈದ್ಯರು ಡೇಟ್ ಕೊಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಈ ಹಿನ್ನೆಲೆಯಲ್ಲಿ ಡಿಸೆಂಬರ್ 9ಕ್ಕೆ ಜೂನಿಯರ್ ರಾಕಿಂಗ್ ಸ್ಟಾರ್ ಅಥವಾ ಪುಟಾಣಿ ಸ್ಯಾಂಡಲ್ ವುಡ್ ಪ್ರಿನ್ಸೆಸ್ ಆಗಮನವಾಗುವ ಸಾಧ್ಯತೆ ಇದೆ.