ಬೆಂಗಳೂರು: ಅಭಿಮಾನಿಯೊಬ್ಬರ ತಾಯಿಗೆ ಕ್ಯಾನ್ಸರ್ ಚಿಕಿತ್ಸೆಗಾಗಿ ನೆರವಿಗೆ ಮುಂದಾಗುವ ಮೂಲಕ ಸ್ಯಾಂಡಲ್ ವುಡ್ ನಟ ಕಿಚ್ಚ ಸುದೀಪ್ ಮಾನವೀಯತೆ ಮೆರೆದಿದ್ದಾರೆ.
ಲಕ್ಷ್ಮಣ್ ಗೌಡ ಎಂಬ ಅಭಿಮಾನಿ ತಮ್ಮ ಟ್ವಿಟ್ಟರ್ ಮೂಲಕ ಕಿಚ್ಚ ಸುದೀಪ್ ಅವರನ್ನು ಸಂಪರ್ಕಿಸಿ ನೆರವು ಕೇಳಿದ್ದಾರೆ.ಇದಕ್ಕೆ ಪ್ರತಿಕ್ರಯಿಸಿರುವ ಸುದೀಪ್ ಸಹ ನೆರವಿನ ಭರವಸೆ ನೀಡಿದ್ದಾರೆ.
"ಅಣ್ಣ ನಮ್ಮ ಅಮ್ಮಇವರು ಹೆಸರು ಮಂಗಳಮ್ಮ ವಯಸ್ಸು 40 ಇವರು 4 ವರ್ಷಗಳಿಂದ ಬಿರ್ಸ್ಟ್ ಕ್ಯಾನ್ಸರ್ ಎಂಬ ಕಾಯಿಲೆ ಇಂದ ಬಳಲುತ್ತಿದ್ದರೆ 2 ಸಲ ಆಪರೇಷನ್ ಆಗಿದೆ ಮತ್ತೆ ಕಾಯಿಲೆ ಜಾಸ್ತಿ ಆಗಿದೆ ಈಗ ಮತ್ತೆ ಆಪರೇಷನ್ ಮಾಡಿಸ್ಬೇಕು ಮತ್ತೆ ಆಪರೇಷನ್ ಅಂದ್ರೆ ನಾವು ತುಂಬಾ ತೊಂದ್ರೆಲಿ ಇದೀವಿ ಅದರಿಂದ ಸಹಾಯ ಅನಿವಾರ್ಯತೆ ಇದೆ pls ಅಣ್ಣ" ಎಂದು ಲಕ್ಷ್ಮಣ್ ಗೌಡ ಟ್ವೀಟ್ ಮಾಡಿದ್ದಾರೆ.
ಇದಕ್ಕೆ ಪ್ರತಿಕ್ರಿಯೆಯಾಗಿ "ನಾನು ನನ್ನ ಕೈಲಾದ ಸಹಾಯ ಮಾಡುವೆ, ನಿಮ್ಮ ತಾಯಿ ಯಾವ ಆಸ್ಪತ್ರೆಯಲ್ಲಿದ್ದಾರೆ ಎನ್ನುವುದನ್ನು ತಿಳಿಸಿ, ನನ್ನ ಜನರು ನಿಮಗೆ ಸಹಕಾರ ನೀಡುತ್ತಾರೆ" ಸುದೀಪ್ ಹೇಳಿದ್ದಾರೆ.
ಅಭಿಮಾನಿಗಳ ನೋವಿಗೆ ಎಂದಿಗೂ ಕಿವಿಯಾಗಿರುವ ನಟ ಕಿಚ್ಚ ಸುದೀಪ್ ಇದೀಗ ಮತ್ತೊಮ್ಮೆ ಸಹಾಯಹಸ್ತ ಚಾಚಲು ಮುಂದಾಗಿ ಮಾನವೀಯತೆ ಮೆರೆದಿದ್ದಾರೆ.