ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಮುಂಬೈನಲ್ಲಿದ್ದಾರೆ. ಅರೆ! ಅವರೇಕೆ ಮುಂಬೈಗೆ ಹೋಗಿದ್ದಾರೆಂದು ಕೇಳುವುದಾದರೆ ಮುಂದಿನ ವಿವರಗಳನ್ನು ಓದಿ. ಯಶ್ ತಮ್ಮ ಮುಂದಿನ ಚಿತ್ರ "ಕೆಜಿಎಫ್" ತಂಡದೊಡನೆ ಅಕ್ತೋಬರ್ 1ರಂದು ಮುಂಬೈಗೆ ತೆರಳಿದ್ದಾರೆ. ಅಲ್ಲಿ ಖ್ಯಾತ ಬಾಲಿವುಡ್ ವಿತರಕ ಅನಿಲ್ ತದಾನಿ ಅವರನ್ನು ಭೇಟಿಯಾಗಿದ್ದಾರೆ.
"ಕೆಜಿಎಫ್" ನಿರ್ಮಾಪಕ ವಿಜಯ್ ಕಿರಗಂದೂರ್, ನಿರ್ದೇಶಕ ಪ್ರಶಾಂತ್ ನೀಲ್ ಹಾಗೂ ಎಕ್ಸಿಕ್ಯೂಟಿವ್ ಪ್ರೊಡ್ಯೂಸರ್ ಕಾರ್ತಿಕ್ ಗೌಡ ಸಹ ಯಶ್ ಗೆ ಜತೆಯಾಗಿದ್ದಾರೆ.
ಕಾರ್ತಿಕ್ ಗೌಡ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಅವರ ಮುಂಬೈ ಪ್ರವಾಸದ ಚಿತ್ರಗಳನ್ನು ಹಾಕಿಕೊಂಡಿರುವುದಲ್ಲದೆ "ನಿನ್ನೆ ಮುಂಬೈನಲ್ಲಿ" ಎಂದು ಬರೆದುಕೊಂಡಿದ್ದಾರೆ. ಅಲ್ಲದೆ ಕನ್ನಡ ರಾಕಿಂಗ್ ಸ್ಟಾರ್ ಯಶ್ ಖ್ಯಾತ ನಿರ್ಮಾಪಕ , ವಿತರಕರಾದ ಅನಿಲ್ ತದನಿ ವೈರಲ್ಭಯನ್ ಎಂದೂ ಸೇರಿಸಿದ್ದಾರೆ.
ವಿತರಕ ಅನಿಲ್ ಭೇಟಿಯ ಕುರಿತಂತೆ ಹೆಚ್ಚಿನ ವಿಒಚಾರ ತಿಳಿಯದೆ ಹೋದರೂ ಸಹ ಯಶ್ ಹಾಗೂ "ಕೆಜಿಎಫ್" ತಂಡವನ್ನು ಬಾಲಿವುಡ್ ನಟ ಫರಾನ್ ಅಖ್ತರ್ ಭೇತಿಯಾಗಿದ್ದಾರೆನ್ನುವ ಮಾಹಿತಿ ಎಕ್ಸ್ ಪ್ರೆಸ್ ಗೆ ಲಭಿಸಿದೆ.
ಫರಾನ್ ತಾವು ಚಿತ್ರವನ್ನು ವೀಕ್ಷಿಸಿದ್ದು ತಮ್ಮ ಅಭಿಪ್ರಾಯವನ್ನೇನಾದರೂ ತಿಳಿಸಿದ್ದಾರೆಯೆ ಎನ್ನುವುದು ಇನ್ನೂ ಸ್ಪಷ್ತವಾಗಿಲ್ಲ.ಫರಾನ್ ದೃಢ ನಿರ್ಧಾರ ತಿಳಿಸಿದ ಮೇಲೆ ಚಿತ್ರತಂಡ ಈ ಸುದ್ದಿಯನ್ನು ಬಹಿರಂಗಪಡಿಸಲು ನಿರ್ಧರಿಸಿದೆ ಎನ್ನಲಾಗಿದೆ.
ಇದೇ ಅಕ್ಟೋಬರ್ 14 ರಂದು, ಕೆಜಿಎಫ್ ಚಿತ್ರದ ಟೀಸರ್ ಬಿಡುಗಡೆಯಾಗಲಿದ್ದು ಚಿತ್ರವು ನವೆಂಬರ್ 16 ರಂದು ತೆರೆಗೆ ಬರಲಿದೆ.
80 ರ ದಶಕದ ಆರಂಭದ ಕಥೆಯನ್ನಾಧರಿಸಿದ ಈ ಚಿತ್ರ ಕನ್ನಡದಲ್ಲಿ ಮಾತ್ರವಲ್ಲದೆ ಒಟ್ಟು ಐದು ಭಾಷೆಗಳಲ್ಲಿ ತೆರೆ ಕಾಣುತ್ತಿದೆ. ಕನ್ನಡ ಚಿತ್ರವೊಂದು ಐದು ಭಾಷೆಗಳಲ್ಲಿ ಬರುತ್ತಿರುವದು ಇದೇ ಪ್ರಥಮವೆನ್ನುವುದು ಇಲ್ಲಿ ಗಮನಾರ್ಹ ಅಂಶ.ಚಿತ್ರಕ್ಕೆ ಭುವನ್ ಗೌಡ ಛಾಯಾಗ್ರಹಣ, ರವಿ ಬಸ್ರೂರು ಸಂಗೀತವಿದೆ.ಮಡಲಿಂಗ್ ನಿಂದ ನಟನೆಗೆ ಬಂದ ಶ್ರೀನಿಧಿ ಶೆಟ್ಟಿ ಈ ಚಿತ್ರದ ಮೂಲಕ ತಮ್ಮ ಚೊಚ್ಚಲ ಪ್ರಯತ್ನದಲ್ಲಿದ್ದರೆ ಯಶ್ ಇದರಲ್ಲಿ ರಾಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos