ತಿರುವನಂತಪುರಂ: ದೇಶಾದ್ಯಂತ ಸದ್ದು ಮಾಡುತ್ತಿರುವ "ಮೀಟೂ" ಅಭಿಯಾನ ಮಲಯಾಲಂ ಚಿತ್ರರಂಗದ ಕದ ತಟ್ಟಿದೆ. ಮಾಲಿವುಡ್ ನ ಖ್ಯಾತ ನಟ, ರಾಜಕಾರಣಿ ಮುಖೇಶ್ ತನಗೆ ಕಿರುಕುಳ ನೀಡಿದ್ದರು ಎಂದು 'ಕೋಡೀಶ್ವರನ್' ಟೆಲಿವಿಷನ್ ರಸಪ್ರಶ್ನೆ ಕಾರ್ಯಕ್ರಮದ ತಂಡದಲ್ಲಿದ್ದ ಏಕೈಕ ಮಹಿಳಾ ಸಿಬ್ಬಂದಿ ಆರೋಪಿಸಿದ್ದಾರೆ.
ಸುಮಾರು 19 ವರ್ಷದ ಕೆಳಗೆ ಮುಖೇಶ್ ತನ್ನನ್ನು ತಮ್ಮ ಕೋಣೆಗೆ ಆಹ್ವಾನಿಸಿದ್ದರು. ಹಲವು ಬಾರಿ ಇದಕ್ಕಾಗಿ ನನಗೆ ಕರೆ ಮಾಡಿದ್ದ ಮುಖೇಶ್ ತಾನು ಉಳಿದುಕೊಂಡಿದ್ದ ಹೋಟೆಲ್ ಕೋಣೆಯನ್ನು ಅವರ ಕೋಣೆಗೆ ಸಮೀಪಕ್ಕೆ ಬದಲಿಸುವ ಪ್ರಯತ್ನವನ್ನು ನಡೆಸಿದ್ದರು ಎಂದು ಮಹಿಳೆಯು ತನ್ನ ಟ್ವಿಟ್ಟರ್ ನಲ್ಲಿ ಹೇಳಿಕೊಂಡಿದ್ದಾರೆ.
"ನಾನು 20 ವರ್ಷದವಳಿದ್ದೆ. ಆಗ ಮಲಯಾಳಂ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಜನಪ್ರಿಯ ರಸಪ್ರಶ್ನೆ ಕಾರ್ಯಕ್ರಮ 'ಕೋಡೀಶ್ವರನ್ ಅನ್ನು ಖ್ಯಾತ ನಟ ಮುಖೇಶ್ ಕುಮಾರ್ ನಡೆಸಿಕೊಡುತ್ತಿದ್ದರು. ಅವರು ನನಗೆ ಹಲವು ಬಾರಿ ಕರೆ ಮಾಡಿದ್ದರು. ಅಲ್ಲದೆ ನನ್ನ ಕೋಣೆಯನ್ನು ವರ ಕೋಣೆಗೆ ಸಮೀಪ ಬರುವಂತೆ ಬದಲಿಸಿದ್ದರು. ನಾನು ಈ ಕುರಿತು ನನ್ನ ಬಾಸ್ ಡೆರೆಕ್ ಅವರೊಡನೆ ಚರ್ಚಿಸಿದಾಗ ಅವರು ನನಗೆ ತಕ್ಷಣ ವಿಮಾನದ ಟಿಕೆಟ್ ನೀಡಿದ್ದಲ್ಲದೆ ಅಲ್ಲಿಂದ ಹೊರಡಲು ಸೂಚಿಸಿದ್ದರು. 19 ವರ್ಷಗಳ ಹಿಂದೆ ಡೆರೆಕ್ ಮಾಡಿದ ಸಹಾಯಕ್ಕೆ ನಾನು ಚಿರಋಣಿ" ಮಹಿಳೆ ತನ್ನ ಟ್ವೀಟ್ ನಲ್ಲಿ ಬರೆದಿದ್ದಾಳೆ.
"ಈ ಕಾರ್ಯಕ್ರಮದ ಸೆಟ್ ನಲ್ಲಿದ್ದ ಏಕೈಕ ಮಹ್ಳೆ ನಾನಾಗಿದ್ದೆ.ಅದೊಂದು ದಿನ ನನಗೆ ನಿರಂತರವಾಗಿ ಕರೆಗಳು ಬರಲಾರಂಭಿಸಿದಾಗ ನಾನು ಅನಿವಾರ್ಯವಾಗಿ ನನ್ನ ಸಹೋದ್ಯೋಗಿಯ ಕೋಣೆಯಲ್ಲಿ ಇರಬೇಕಾಗಿ ಬಂದಿತು.ಅಲ್ಲದೆ ಚೆನ್ನೈನ ಲೆಮೆರಡಿಯನ್ ಹೋಟೆಲ್ ನಲ್ಲಿನ ವಾಸ್ತವ್ಯದ ಅನುಭವ ತೀರಾ ಕೆಟ್ಟದಾಗಿದ್ದು ಅವರು ನನಗೆ ಅರಿವಿಲ್ಲದಂತೆ ನನ್ನ ಕೋಣೆಯನ್ನು ಬದಲಿಸಿದ್ದರು. ನಾನು ಇದನ್ನು ಹೋಟೆಲ್ ಸಿಬ್ಬಂದಿಗಳಿಗೆ ಪ್ರಶ್ನಿಸಿದಾಗ ಮುಖೇಶ್ ಕುಮಾರ್ ಈ ಕುರಿತಂತೆ ಮನವಿ ಮಾಡಿಕೊಂಡಿದ್ದಾಗಿ ಅವರು ಹೇಳಿದ್ದಾರೆ" ಮಹಿಳೆ ವಿವರಿಸಿದ್ದಾರೆ.
ತಮ್ಮ ಮೇಲಿನ ಆರೋಪದ ಕುರಿತಂತೆ ಪ್ರಶ್ನಿಸಿದಾಗ ಮುಖೇಶ್ ನಗುತ್ತಾ ಪ್ರತಿಕ್ರಯಿಸಿದ್ದಾರೆ. ಮಹಿಳೆಗೆ ತಾನು ಕಿರುಕುಳ ನೀಡಿದ್ದಾದರೆ ಆಕೆ ಅದೇಕೆ ಕಳೆದ 19 ವರ್ಷಗಳಿಂದ ಮೌನವಾಗಿದ್ದರು? ಎಂದು ಅವರು ಪ್ರಶ್ನಿಸಿದ್ದಾರೆ. ತಾವು ಅಂದು ನಡೆದ ಘಟನೆಯ ಕುರಿತು ಯಾವ ನೆನಪನ್ನು ಹೊಂದಿಲ್ಲ ಎಂದ ಮುಖೇಶ್ ಕುಮಾರ್ ತಮ್ಮ ವೃತ್ತಿಜೀವನದಲ್ಲಿ ಅಂತಹ ಘಟನೆಗಳನ್ನು ನಾನೆಂದೂ ನೆನಪಿನಲ್ಲಿಟ್ಟುಕೊಳ್ಳಲಾರೆ ಎಂದರು.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos