ದೇಶಾದ್ಯಂತ ಬಿರುಗಾಳಿ ಎಬ್ಬಿಸಿರುವ #MeToo ಅಭಿಯಾನದ ಬಗ್ಗೆ ಖ್ಯಾತ ನಾಮರು ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದು, ಖ್ಯಾತ ಗಾಯಕಿ ಉಷಾ ಉತ್ತುಪ್ #MeToo ಅಭಿಯಾನವನ್ನು ಅತಿಯಾಯ್ತು ಅಂದಿದ್ದಾರೆ.
ಇಡಿಯ ಅಭಿಯಾನ ನಡೆಯುತ್ತಿರುವ ರೀತಿಯ ಬಗ್ಗೆ ಬೇಸರ ವ್ಯಕ್ತಪಡಿಸಿರುವ ಉಷಾ ಉತ್ತುಪ್, ಇಡಿ ಅಭಿಯಾನವನ್ನು ಅತಿಯಾಗಿ ನಡೆಸುತ್ತಿರುವುದರ ಬಗ್ಗೆ ಬೇಸರವಿದೆ ಎಂದು ಹೇಳಿದ್ದಾರೆ. ಎಂ ಟಿವಿ ಇಂಡಿಯಾ ಮ್ಯೂಸಿಕ್ ಶೃಂಗಸಭೆಯಲ್ಲಿ ಭಾಗವಹಿಸಿದ್ದ ವೇಳೆ ಐಎಎನ್ಎಸ್ ಗೆ ಸಂದರ್ಶನ ನೀಡಿರುವ ಉಷಾ ಉತ್ತುಪ್, ಅಭಿಯಾನವನ್ನು ಅತಿಯಾದ ಮಟ್ಟಕ್ಕೆ ತೆಗೆದುಕೊಂಡು ಹೋಗುತ್ತಾರೆ ಎಂದು ಅಂದುಕೊಂಡಿರಲಿಲ್ಲ ಎಂದಿದ್ದಾರೆ.
ಅದೃಷ್ಟವಶಾತ್ ತಮಗೆ #MeToo ನಲ್ಲಿ ಹೇಳಿಕೊಳ್ಳುತ್ತಿರುವ ರೀತಿಯಲ್ಲಿ ಯಾವುದೇ ಅನುಭವಗಳೂ ಆಗಿಲ್ಲ. ಈ ಅಭಿಯಾನದಲ್ಲಿ ತೊಡಗಿಸಿಕೊಂಡಿರುವ ಮಹಿಳೆಯರಿಗೆ ಮಾತ್ರ ನೋವುಂಟಾಗಿಲ್ಲ, ಈ ಅಭಿಯಾನವನ್ನು ಅತಿಯಾಗಿ ಕೊಂಡೊಯ್ಯಲಾಗುತ್ತಿದೆ ಎಂದು ಉಷಾ ಉತ್ತುಪ್ ಅಭಿಪ್ರಾಯಪಟ್ಟಿದ್ದಾರೆ.