ಬೆಂಗಳೂರು: ತಮಿಳು ಸಿನಿಮಾ ಇಂಡಸ್ಟ್ರಿಯಲ್ಲಿ ತಮ್ಮನ್ನು ಗುರುತಿಸಿಕೊಂಡಿರುವ ಧನ್ಯ ಬಾಲಕೃಷ್ಣ ಮೂಲತ ಬೆಂಗಳೂರಿನವರಾದ ಧನ್ಯ ಇದೀಗ ಮೊಟ್ಟ ಮೊದಲ ಬಾರಿಗೆ ಕನ್ನಡ ಸಿನಿಮಾದಲ್ಲೂ ನಟಿಸುತ್ತಿದ್ದಾರೆ.
ರಿಷಿ ಜೊತೆ ಇನ್ನೂ ಟೈಟಲ್ ಇಡದ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.ಮಲಯಾಳಂ ಸ್ಟಾರ್ ನಿವೀನ್ ಪೌಲಿ ಮತ್ತು ನಟನತಾರಾ ಸಿನಿಮಾದಲ್ಲಿ 2ನೇ ನಾಯಕಿಯಾಗಿ ನಟಿಸುತ್ತಿದ್ದಾರೆ. ಕನ್ನಡ ಸಿನಿಮಾದಲ್ಲಿ ನಟಿಸಲು ಅವಕಾಶ ಗಿಟ್ಟಿಸಿಕೊಂಡಿರುವ ಧನ್ಯ ನಾಲ್ಕು ಭಾಷೆಗಳಲ್ಲಿ ನಟಿಸುತ್ತಿದ್ದಾರೆ.
ರಂಗಭೂಮಿ ಹಿನ್ನೆಲೆಯ ಧನ್ಯ ಮೊದಲಿಗೆ 2011 ರಲ್ಲಿ ಎ.ಆರ್ ಮುರುಗದಾಸ್ ಅವರ ತಮಿಳು ಸಿನಿಮಾದಲ್ಲಿ ನಟಿಸಿದ್ದರು,ಆರು ವರ್ಷಗಳ ನಂತರ ಕನ್ನಡದಲ್ಲಿ ನಟಿಸುತ್ತಿದ್ದಾರೆ,
ಗಿರಿರಾಜ್ ಅವರ ವೆಬ್ ಸಿರೀಸ್ ನಲ್ಲಿ ಕೆಲಸ ಮಾಡಿರುವ ಧನ್ಯ, ಮೊದಲ ಬಾರಿಗೆ ಕನ್ನಡಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ, ನನ್ನ ಮಾತ-ಭಾಷೆ ಕನ್ನಡವಾಗಿರುವುದರಿಂದ ಡೈಲಾಗ್ ಡೆಲಿವರಿ ತುಂಬಾ ನೈಜವಾಗಿರುತ್ತದೆ ಬೇರೆ ಭಾಷೆಗಳಿಗಿಂತ ಕನ್ನಡವೇ ನನಗೆ ಹೆಚ್ಚು ಇಷ್ಟ,
ಸದ್ಯ ಹಲವು ಆಫರ್ ಗಳು ಧನ್ಯ ಬಳಿಯಿವೆ, ತೆಲುಗಿನ ಮತ್ತೊಂದು ಸಿನಿಮಾದಲ್ಲಿ ಕೂಡ ಧನ್ಯ ನಟಿಸುತ್ತಿದ್ದಾರೆ, ಪ್ರಶಾಂತ್ ರೆಡ್ಡಿ ಮತ್ತು ದೇವರಾಜ್ ಆರ್ ಈ ಸಿನಿಮಾಗೆ ಬಂಡವಾಳ ಹೂಡುತ್ತಿದ್ದು, ನವೆಂಬರ್ ಮೊದಲ ವಾರದಲ್ಲಿ ಶೂಟಿಂಗ್ ಆರಂಭವಾಗಲಿದೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos