ಸಿನಿಮಾ ಸುದ್ದಿ

ಭೈರಾದೇವಿಯ ಕಾಳಿ ಅವತಾರದಲ್ಲಿ ರಾಧಿಕಾ ಕುಮಾರಸ್ವಾಮಿ

Shilpa D
ಬೆಂಗಳೂರು: ವಿಜಯದಶಮಿ ಅಂಗವಾಗಿ ರಾಧಿಕಾ ಕುಮಾರಸ್ವಾಮಿ ನಟನೆಯ ಭೈರಾದೇವಿ ಸಿನಿಮಾದಲ್ಲಿ ಕಾಳಿ ಅವತಾರವಿರುವ ಫೋಟೋ ರಿಲೀಸ್ ಮಾಡಲಾಗಿದೆ. 
ಶ್ರೀಜೈ ನಿರ್ದೇಶಿಸುತ್ತಿರುವ ಭೈರಾದೇವಿ ಸಿನಿಮಾವನ್ನು ರಾಧಿಕಾ ಕುಮಾರ ಸ್ವಾಮಿ ಹೋಮ್ ಬ್ಯಾನರ್ ಶಮಿಕಾ ಎಂಟರ್ ಪ್ರೈಸಸ್ ನಿರ್ಮಾಣ ಮಾಡುತ್ತಿದೆ, ಈ ಸಿನಿಮಾದಲ್ಲಿ ರಾಧಿಕಾ ಕಾಳಿ ಮತ್ತು ಆಘೋರಿ  ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ, ಭೈರಾದೇವಿಯ ಮತ್ತೊಂದು ಹೆಸರು ಕಾಳಿ, ಹೀಗಾಗಿ ರಾಧಿಕಾ ಫೋಟೋಶೂಟ್ ಬಹಿರಂಗ ಪಡಿಸಿದ್ದೇವೆ,
ರಾಧಿಕಾ ಈ ಪಾತ್ರಕ್ಕಾಗಿ ಸುಮಾರು 5 ಗಂಟೆ ಸಮಯ ರಾಘವೇಂದ್ರ ಮತ್ತು ನಾಗೇಂದ್ರ ಮೇಕಪ್ ಮಾಡಿದ್ದಾರೆ. ಒಂದು ಹಾಡಿನ ಚಿತ್ರೀಕರಣವಿದ್ದು, ಅದನ್ನು ಸ್ಮಶಾನದಲ್ಲಿ ಶೂಟಿಂಗ್ ಮಾಡಲು ಪ್ಲಾನ್ ಮಾಡಲಾಗಿದೆ, ಈಗಾಗಲೇ ಶೇ.80 ರಷ್ಚು ಶೂಟಿಂಗ್ ಮುಗಿದಿದ್ದು, ಉಳಿದ ಭಾಗವನ್ನು ವಾರಾಣಾಸಿಯಲ್ಲಿ ಪೂರ್ಣಗೊಳಿಸಲಾಗುವುದು ಎಂದು ನಿರ್ದೇಶಕರು ಹೇಳಿದ್ದಾರೆ.
ಭೈರಾದೇವಿ ಸಿನಿಮಾ ಕನ್ನಡ, ತೆಲುಗು ಮತ್ತು ತಮಿಳು ಭಾಷೆಗಳಲ್ಲಿ ನಿರ್ಮಾಣವಾಗುತ್ತಿದೆ. ಹಾರರ್ ಸಸ್ಪೆನ್ಸ್ ಚಿತ್ರದಲ್ಲಿ ರಮೇಶ್ ಅರವಿಂದ್ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಉಳಿದಂತೆ ಸ್ಕಂದ ಅಶೋಕ್, ಶಿವರಾಮ್, ರಂಗಾಯಣ ರಘು ಮತ್ತು ಅನು ಪ್ರಭಾಕರ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ,
ರವಿಶಂಕರ್ ದ್ವಿಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ, ಆಘೋರಿ ಪಾತ್ರದಲ್ಲಿ ನಟಿಸಿರುವ ರವಿಶಂಕರ್ ಹಾಡೊಂದಕ್ಕೆ ಹಿನ್ನೆಲೆ ಗಾಯನ ನೀಡಿದ್ದಾರೆ.
SCROLL FOR NEXT