ಶ್ರುತಿ ಹರಿಹರನ್-ಧ್ರುವ ಸರ್ಜಾ
ಬೆಂಗಳೂರು: ಆಕ್ಷನ್ ಕಿಂಗ್ ಅರ್ಜುನ್ ಸರ್ಜಾ ವಿರುದ್ಧ ನಟಿ ಶ್ರುತಿ ಹರಿಹರನ್ ಮಾಡಿರುವ ಮೀ ಟೂ ಆರೋಪ ದೊಡ್ಡ ಚರ್ಚೆಯಾಗುತ್ತಿದೆ. ಇನ್ನು ತನ್ನ ಮಾವ ಅರ್ಜುನ್ ಸರ್ಜಾ ವಿರುದ್ಧ ಮೀ ಟೂ ಆರೋಪ ಮಾಡಿರುವ ಶ್ರುತಿ ವಿರುದ್ಧ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಗುಡುಗಿದ್ದಾರೆ.
ಶ್ರುತಿ ಹರಿಹರನ್ ವಿರುದ್ಧ ಕಿಡಿಕಾರಿರುವ ಧ್ರುವ ಸರ್ಜಾ, ಅರ್ಜುನ್ ಸರ್ಜಾ ಅವರ ವಿರುದ್ಧದ ಆರೋಪಕ್ಕೆ ತಮ್ಮ ಬಳಿ ಸಾಕ್ಷಿ ಇದೆ ಎಂದು ಶ್ರುತಿ ಹೇಳಿದ್ದಾರೆ. ಅವರ ಬಳಿ ಏನಾದರೂ ಸಾಕ್ಷಿ ಇದ್ದರೆ ತೋರಿಸಲಿ ಎಂದು ಚಾಲೆಂಜ್ ಹಾಕಿದ್ದು ಇನ್ನು ಪಬ್ಲಿಸಿಟಿ ತೆಗೆದುಕೊಂಡಿದ್ದು ಸಾಕು ಎಂದು ಹೇಳಿದ್ದಾರೆ.
ಮೀ ಟೂ ಒಳ್ಳೆಯ ವೇದಿಕೆ. ಅಲ್ಲಿ ಬಂದು ಎಲ್ಲರೂ ಹೇಳುವುದು ಒಳ್ಳೆಯದು. ಆದರೆ ಅಲ್ಲಿ ಎಷ್ಟು ಪಾಸಿಟಿವ್ ಇದೆಯೋ, ಅಷ್ಟೇ ನೆಗೆಟಿವ್ ಇದೆ. ನಾನು ಚಿಕ್ಕ ವಯಸ್ಸಿನಿಂದ ನಮ್ಮ ಅಂಕಲ್ ಅನ್ನು ನೋಡಿಕೊಂಡು ಬಂದಿದ್ದೇನೆ. ಅವರು ಏನು ಅಂತ ನನಗೆ ತುಂಬ ಚೆನ್ನಾಗಿ ಗೊತ್ತಿದೆ ಎಂದು ಧ್ರುವ ಸರ್ಜಾ ಹೇಳಿದ್ದಾರೆ.
ಯಾವುದೋ ನಾಯಿ, ನರಿ ಕ್ರಿಮಿ ಕೀಟಗಳು ಹೇಳಿದ್ದನ್ನು ನಾನು ಕೇಳುವುದಿಲ್ಲ. ಅವರಿಗೆ ಹೇಳಬೇಕು ಅಂತ ಅನಿಸಿದರೆ ಅವತ್ತೇ ಹೇಳಬಹುದಿತ್ತು. ನಮ್ಮ ಮನೆ ದೇವರ ಬಗ್ಗೆ ನನಗೆ ಗೊತ್ತಿದೆ. ಸಾಕ್ಷಿ ಇದ್ರೆ ತೋರಿಸಲಿ ಎಂದು ಗುಡುಗಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos