ಸಂಗ್ರಹ ಚಿತ್ರ 
ಸಿನಿಮಾ ಸುದ್ದಿ

#MeToo: ಇಡೀ ಜಗತ್ತೇ ಅರ್ಜುನ್ ರತ್ತ ಬೊಟ್ಟು ಮಾಡಿದರೂ, ನಾನು ನಂಬುವುದಿಲ್ಲ: ನಟಿ ಖುಷ್ಬೂ

#MeToo ಆರೋಪಕ್ಕೆ ಸಂಬಂಧಿಸಿದಂತೆ ಇಡೀ ಜಗತ್ತೇ ಅರ್ಜುನ್ ಸರ್ಜಾರತ್ತ ಬೊಟ್ಟು ಮಾಡಿದರೂ ನಾನು ನಂಬುವುದಿಲ್ಲ ಎಂದು ದಕ್ಷಿಣ ಭಾರತದ ಖ್ಯಾತ ನಟಿ ಖುಷ್ಬೂ ಹೇಳಿದ್ದಾರೆ.

ಚೆನ್ನೈ: #MeToo ಆರೋಪಕ್ಕೆ ಸಂಬಂಧಿಸಿದಂತೆ ಇಡೀ ಜಗತ್ತೇ ಅರ್ಜುನ್ ಸರ್ಜಾರತ್ತ ಬೊಟ್ಟು ಮಾಡಿದರೂ ನಾನು ನಂಬುವುದಿಲ್ಲ ಎಂದು ದಕ್ಷಿಣ ಭಾರತದ ಖ್ಯಾತ ನಟಿ ಖುಷ್ಬೂ ಹೇಳಿದ್ದಾರೆ.
ಸ್ಯಾಂಡಲ್ ವುಡ್ ನಟಿ ಶೃತಿ ಹರಿಹರನ್ ಅರ್ಜುನ್ ಸರ್ಜಾ ವಿರುದ್ಧ ಮಾಡಿರುವ ಮೀಟೂ ಆರೋಪಗಳಿಗೆ ಸಂಬಂಧಿಸಿದಂತೆ ಇಡೀ ಭಾರತೀಯ ಚಿತ್ರರಂಗವೇ ದಿಗ್ಭ್ರಾಂತಗೊಂಡಿದ್ದು, ಪರ-ವಿರೋಧ ಚರ್ಚೆಗಳು ಮುಂದುವರೆದಿವೆ. ಏತನ್ಮಧ್ಯೆ ನಟ ಅರ್ಜುನ್ ಸರ್ಜಾ ಅವರ ಬೆಂಬಲಕ್ಕೆ ನಟಿ ಖುಷ್ಬೂ ಕೂಡ ನಿಂತಿದ್ದು, ನಾನು ಅವರನ್ನು 34 ವರ್ಷಗಳಿಂದಲೂ ನೋಡಿದ್ದೇನೆ, ಇಡೀ ಜಗತ್ತೇ ಅವರ ವಿರುದ್ಧ ಬೊಟ್ಟು ಮಾಡಿ ತೋರಿಸಿದರೂ ನಾನು ನಂಬುವುದಿಲ್ಲ ಎಂದು ಖುಷ್ಬೂ ಹೇಳಿದ್ದಾರೆ.
ಈ ಬಗ್ಗೆ ವಿಡಿಯೋದಲ್ಲಿ ಹೇಳಿಕೆ ನೀಡಿರುವ ನಟಿ ಖುಷ್ಬೂ, ಅರ್ಜುನ್ ಸರ್ಜಾರನ್ನು ನಾನು 34 ವರ್ಷಗಳಿಂದಲೂ ನೋಡಿದ್ದೇನೆ. ನನ್ನ ಮೊದಲ ಚಿತ್ರದ ಹೀರೋ ಅರ್ಜುನ್. ಮೊದಲ ಬಾರಿಗೆ ನನ್ನನ್ನು ರಕ್ಷಣೆ ಮಾಡಿದ್ದ ಹೀರೋ ಅವರು. ಅವರು ಎಂದಿಗೂ ಅಸಭ್ಯವಾಗಿ ವರ್ತಿಸಿಲ್ಲ. ಸರ್ಜಾ ವಿರುದ್ಧ ಈ ರೀತಿಯ ಆರೋಪ ಕೇಳಿ ನನಗೆ ಅಚ್ಚರಿಯಾಯಿತು. ಕನ್ನಡ, ತೆಲುಗು ಮತ್ತು ತಮಿಳು ಭಾಷೆಯ ಸಿನಿಮಾಗಳಲ್ಲಿ ಇಬ್ಬರೂ ಒಟ್ಟಾಗಿ ಸಾಕಷ್ಟು ಚಿತ್ರಗಳಲ್ಲಿ ನಟಿಸಿದ್ದೇವೆ. ಸರ್ಜಾ ಮೇಲಿನ ಆರೋಪ ಅವರ ಎರಡು ಹೆಣ್ಣು ಮಕ್ಕಳ ಮೇಲೆ ಎಂತಹ ಪರಿಣಾಮ ಬೀರಿರುತ್ತದೆ ಎಂದು ನನಗೆ ತಿಳಿದಿದೆ. ನಾನು ಗ್ಯಾರೆಂಟಿ ಕೊಡುತ್ತೇನೆ. ಅರ್ಜುನ್ ಎಂದಿಗೂ ಯಾರೊಂದಿಗೂ ಆ ರೀತಿ ನಡೆದುಕೊಂಡಿರುವುದಿಲ್ಲ. ಇಡೀ ಜಗತ್ತೇ ಅವರತ್ತ ಕೈ ತೋರಿದರೂ ನಾನು ನಂಬುವುದಿಲ್ಲ. ಅವರ ಪರ ನಾನು ಮಾತನಾಡಲಿಲ್ಲ ಅಂದ್ರೆ ನನಗೆ ಶೇಮ್ ಅಗುತ್ತದೆ. ಅವರ ಕುಟುಂಬದಂತೆಯೇ ನಾನು ಅವರನ್ನು ನಂಬುತ್ತೇನೆ. ನಾನು ನಿನ್ನ ಪರ ಇದ್ದೇನೆ ಎಂದು ನಟ ಅರ್ಜುನ್‌ ಸರ್ಜಾಗೆ ಬೆಂಬಲ ನೀಡಿದ್ದಾರೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಹೊಸದಾಗಿ ನೇಮಕಗೊಂಡಿದ್ದ Hamas ಮಿಲಿಟರಿ ನಾಯಕನನ್ನೂ ಹೊಡೆದುರುಳಿಸಿದ Israel!

ಸಿದ್ದರಾಮಯ್ಯ 2 ಬಾರಿ ಸಿಎಂ ಆಗಿದ್ದಾರೆ; ಡಿಕೆಶಿ ಹಲವು ಮುಖ್ಯಮಂತ್ರಿಗಳ ಜತೆ ಸಚಿವರಾಗಿ ಕೆಲಸ ಮಾಡಿದ್ದಾರೆ: ಸುರ್ಜೇವಾಲ ಮಾತಿನ ಅರ್ಥವೇನು?

ಇಲ್ಲಿಂದ ತೊಲಗಿ; ಭಾರತೀಯ ದಂಪತಿಗೆ ಅಮೆರಿಕಾದಲ್ಲಿ ಜನಾಂಗೀಯ ನಿಂದನೆ

IPL 2026: SRH ವಿರುದ್ಧ RR ಗೆ 47 ರನ್ ಗಳ ಭರ್ಜರಿ ಗೆಲುವು

IPL 2026 Eliminator: ವೈಭವ್ ಸೂರ್ಯವಂಶಿ ಸ್ಫೋಟಕ ಬ್ಯಾಟಿಂಗ್, SRHಗೆ 244 ರನ್ ಬೃಹತ್ ಗುರಿ ನೀಡಿದ RR

SCROLL FOR NEXT