ಸಿನಿಮಾ ಸುದ್ದಿ

ಬ್ಲಾಕ್ ಬಸ್ಟರ್ ಟಗರು ತಮಿಳಿಗೆ: ನಿರ್ದೇಶಕ ಮುತ್ತಯ್ಯ ಪಾಲಿಗೆ ರಿಮೇಕ್ ಹಕ್ಕು

Shilpa D
ಬೆಂಗಳೂರು: ಸ್ಯಾಂಡಲ್​ವುಡ್​ನಲ್ಲಿ ದೊಡ್ಡ ಮಟ್ಟದ ಯಶಸ್ಸು ಕಂಡ ‘ಟಗರು’ ಚಿತ್ರ ತಮಿಳಿನಲ್ಲಿ ರಿಮೇಕ್ ಆಗಲಿರುವ ಸುದ್ದಿ ಪಕ್ಕಾ ಆಗಿದೆ.
ಈ ಹಿಂದೆಯೇ ‘ಟಗರು’ ಚಿತ್ರ ಕಾಲಿವುಡ್​ನಲ್ಲಿ ರಿಮೇಕ್ ಆಗಲಿದೆ ಎಂಬ ಸುದ್ದಿ ಹರಿದಾಡಿತ್ತು. ಆದರೆ, ನಿರ್ದೇಶಕರ್ಯಾರು, ನಾಯಕ ಯಾರು ಎಂಬ ಮಾಹಿತಿ ಲಭ್ಯವಾಗಿರಲಿಲ್ಲ. ಇದೀಗ ಅದೆಲ್ಲದಕ್ಕೂ ಉತ್ತರ ದೊರಕಿದ್ದು, ತಮಿಳಿನ ಖ್ಯಾತ ನಿರ್ದೇಶಕ ಮುತ್ತಯ್ಯ ರಿಮೇಕ್ ಹಕ್ಕು ಪಡೆದಿದ್ದಾರೆ.
ರಿಮೇಕ್ ಹಕ್ಕನ್ನು ನಿರ್ದೇಶಕ ಮುತ್ತಯ್ಯ ಪಡೆದುಕೊಂಡಿದ್ದಾರೆ.ಈ ಕುರಿತು ಟ್ವೀಟ್ ಮಾಡಿರುವ ‘ಟಗರು’ ನಿಮಾರ್ಪಕ ಕೆ.ಪಿ. ಶ್ರೀಕಾಂತ್, ‘ತಮಿಳಿನಲ್ಲಿ ‘ಕೊಂಬನ್’ ಚಿತ್ರ ನಿರ್ದೇಶನ ಮಾಡಿದ್ದ ಮುತ್ತಯ್ಯ ‘ಟಗರು’ ಚಿತ್ರದ ರಿಮೇಕ್ ಹಕ್ಕು ಪಡೆದಿದ್ದಾರೆ. ಜೈ ಟಗರು. ಮೈಯ್ಯೆಲ್ಲ ಪೊಗರು’ ಎಂದಿದ್ದಾರೆ.
ಈಗಾಗಲೇ ‘ಟಗರು’ ರಿಮೇಕ್ ಹಕ್ಕು ಖರೀದಿಸಿರುವ ಮುತ್ತಯ್ಯ, ಸಿನಿಮಾಕ್ಕೆ ಸಂಬಂಧಿಸಿದ ಕೆಲಸಗಳಿಗೆ ಚಾಲನೆ ನೀಡಿದ್ದಾರೆ. ‘ಹಕ್ಕು ಖರೀದಿ ಬಗ್ಗೆ ಈ ಹಿಂದೆಯೇ ಮಾತುಕತೆಯಾಗಿತ್ತು. ಚಿತ್ರದ ಕೆಲಸಗಳಲ್ಲಿ ಆ ತಂಡವೂ ತೊಡಗಿಸಿಕೊಂಡಿತ್ತು. ಇದೀಗ ಅಧಿಕೃತವಾಗಿ ರಿಮೇಕ್ ರೈಟ್ಸ್ ಖರೀದಿ ಮಾಡಿದ್ದಾರೆ. ತಮಿಳಿನಲ್ಲಿ ಆ ಪಾತ್ರ ವನ್ನು ಕಾರ್ತಿ ಅಥವಾ ವಿಜಯ್ ಸೇತುಪತಿ ಹೆಸರು ಕೇಳಿಬರುತ್ತಿವೆ. ಕಾರ್ತಿ ಆಯ್ಕೆ ಬಹುತೇಕ ಅಂತಿಮ ಎಂಬ ಮಾತೂ ಇದೆ.
ವಿಶೇಷವೆಂದರೆ, ಇನ್ನು ಕೆಲ ದಿನಗಳಲ್ಲಿ ಆ ಚಿತ್ರದ ಮುಹೂರ್ತ ನೆರವೇರಲಿದ್ದು, ‘ಟಗರು’ ತಂಡಕ್ಕೆ ನಿರ್ದೇಶಕ ಮುತ್ತಯ್ಯ ಆಹ್ವಾನ ನೀಡಿದ್ದಾರೆ. ಶಿವರಾಜ್​ಕುಮಾರ್, ಸೂರಿ, ಶ್ರೀಕಾಂತ್ ಸೇರಿ ಅನೇಕರು ಮುಹೂರ್ತದಲ್ಲಿ ಪಾಲ್ಗೊಳ್ಳಲಿದ್ದಾರೆ. ಇನ್ನು, ಶಿವರಾಜ್​ಕುಮಾರ್ ಅಭಿನಯದ ಹೊಸ ಚಿತ್ರಕ್ಕೂ ಮುತ್ತಯ್ಯ ನಿರ್ದೇಶನ ಮಾಡಲಿದ್ದಾರೆ.
SCROLL FOR NEXT