ತಾನ್ಯಾ ಹೋಪೆ 
ಸಿನಿಮಾ ಸುದ್ದಿ

ನಾನು, ಸುನೀಲ್ ಕುಮಾರ್ ದೇಸಾಯಿ ಶಿಕ್ಷಕ-ವಿದ್ಯಾರ್ಥಿಯೆಂತೆ ಇದ್ದೆವು: ತಾನ್ಯಾ ಹೋಪೆ

ನಟಿ ತಾನ್ಯಾ ಹೋಪೆಇನ್ನೂ ಬೆಳ್ಳಿತೆರೆ ಮೇಲೆ ಕಾಣಿಸಿಕೊಳ್ಳುವ ನಿರೀಕ್ಷೆಯಲ್ಲಿರುವಗಲೇ ಸಾಕಷ್ಟು ಸದ್ದು ಮಾಡುತ್ತಿದ್ದಾರೆ. ಬಹಳಷ್ಟು ಚಿತ್ರಗಳಲ್ಲಿ ನಟಿಸುತ್ತಿರುವ ಈಕೆ ತಾನು ಫಿಲ್ಮ್ ಇಂಡಸ್ಟ್ರಿಯಿಂದ....

ಬೆಂಗಳೂರು: ನಟಿ ತಾನ್ಯಾ ಹೋಪೆಇನ್ನೂ ಬೆಳ್ಳಿತೆರೆ ಮೇಲೆ ಕಾಣಿಸಿಕೊಳ್ಳುವ ನಿರೀಕ್ಷೆಯಲ್ಲಿರುವಗಲೇ ಸಾಕಷ್ಟು ಸದ್ದು ಮಾಡುತ್ತಿದ್ದಾರೆ. ಬಹಳಷ್ಟು ಚಿತ್ರಗಳಲ್ಲಿ ನಟಿಸುತ್ತಿರುವ ಈಕೆ ತಾನು ಫಿಲ್ಮ್ ಇಂಡಸ್ಟ್ರಿಯಿಂದ ಸಾಕಷ್ಟು ಕಲಿತಿರುವುದಾಗಿ ಹೇಳುತ್ತಾರೆ. ಉಪೇಂದ್ರ ಅಭಿನಯದ "ಹೋಂ ಮಿನಿಸ್ಟರ್" ಹಾಗೂ ದರ್ಶನ್ ನಾಯಕ ನಟನಾಗಿ ಕಾಣಿಸಿಕೊಳ್ಳುವ "ಯಜಮಾನ" ಚಿತ್ರಗಳ ಬಿಡುಗಡೆಗಾಗಿ ಕಾದಿರುವ ನಟಿ ಜತೆ ಕನ್ನಡಪ್ರಭ ಮಾತನಾಡಿದೆ.
ಇನ್ನು ಸುನೀಲ್ ಕುಮಾರ್ ದೇಸಾಯಿ ಅವರ "ಉದ್ಘರ್ಷ" ಚಿತ್ರದ ಚಿತ್ರೀಕರಣ ಸಂಪೂರ್ಣಗೊಳಿಸಿ ಮಡಿಕೇರಿಯಿಂದ ತೆರಳುತ್ತಿರುವ ನಟಿ ಮುಂದಿನ ಚಿತ್ರೀಕರಣಕ್ಕೆ ಸ್ವಿಡ್ಜರ್ ಲ್ಯಾಂಡ್ ಗೆ ಪ್ರಯಾಣಿಸಲಿದ್ದಾರೆ ಎನ್ನಲಾಗಿದೆ. ಅಲ್ಲಿನ ಆಲ್ಫ್ಸ್ ಪರ್ವತ ಶ್ರೇಣಿಯಲ್ಲಿ ನಾಗಶೇಖರ್ ನಿರ್ದೇಶನದಲ್ಲಿ ಮೂಡಿಬರುಇತ್ತಿರುವ "ಅಮರ್" ಚಿತ್ರದಲ್ಲಿ ತಾನ್ಯಾ ನಟಿಸಲಿದ್ದಾರೆ. ಈ ಚಿತ್ರೀಕರಣ ಇದೇ ನವೆಂಬರ್ 2ರಿಂದ ಪ್ರಾರಂಭವಾಗಲಿದೆ.
"ಸ್ವಿಡ್ಜರ್ ಲ್ಯಾಂಡ್ ನಲ್ಲಿನ ಚಿತ್ರೀಕರಣ ಮುಗಿದ ಬಳಿಕವೂ ಮತ್ತೆರಡು ವಾರಗಳ ಚಿತ್ರೀಕರಣ ಬಾಕಿ ಉಳಿದಿರಲಿದ್ದು ಸುಮಾರು ಡಿಸೆಂಬರ್ ಮಧ್ಯ ಭಾಗದ ವೇಳೆಗೆ "ಅಮರ್" ಚಿತ್ರದ ಚಿತ್ರೀಕರಣ ಪೂರ್ಣವಾಗುವ ನಿರೀಕ್ಷೆ ಇದೆ. ನಾನು ನಮ್ಮ ನಿರ್ದೇಶಕರಿಂದ ಕೇಳಿದಂತೆ ಅಂಬರೀಶ್ ಇದಾಗಲೇ ಅಮರ್ ನ ಮೊದಲ ಭಾಗ ವೀಕ್ಷಿಸಿ ಮೆಚ್ಚುಗೆ ಸೂಚಿಸಿದ್ದಾರೆ. ನಾವೀಗ ಚಿತ್ರದ ಎರಡನೇ ಭಾಗದ ಚಿತ್ರೀಕರಣ ನಡೆಸಿದ್ದೇವೆ. ಇದು ಬಹುಪಾಲು ವಿದೇಶಗಳಲ್ಲಿ ನಡೆದಿದ್ದು ಕೆಲ ಭಾಗ ಮಾತ್ರ ಬೆಂಗಳೂರಿನಲ್ಲಿ ಶೂಟಿಂಗ್ ಇರಲಿದೆ" ತಾನ್ಯಾ ಹೇಳಿದ್ದಾರೆ.
ಸುನೀಲ್ ಕುಮಾರ್ ದೇಸಾಯಿಯವರ ಕುರಿತಂತೆ ಮಾತನಾಡುವ ನಟಿ "ನನಗೆ ಅವರೊಡನೆ ಕೆಲಸ ಮಾಡಿದ್ದ ಅನುಭವ ನಿಜಕ್ಕೂ ಉತ್ತಮವಿತ್ತು. ಅದು ಶಿಕ್ಷಕ ಹಾಗೂ ವಿದ್ಯಾರ್ಥಿನಿ ನಡುವಿನ ಸಂಬಂಧದಂತಿತ್ತು. ಅವರು "ಉದ್ಘರ್ಷ" ಚಿತ್ರೀಕರಣ ನಡೆಸಿದರೆ ನನ್ನ ಪಾಲಿಗದು ಶಾಲಾ ತರಗತಿಯಂತಿದ್ದು ಣಾನು ಅಲ್ಲಿ ಬಹಳಷ್ಟು ಕಲಿಯಲು ಸಾಧ್ಯವಾಗಿದೆ" ಎಂದರು.
"ನನ್ನ ವೃತ್ತಿ ಬದುಕಿನ ಪ್ರಾರಂಭದಲ್ಲೇ ಇಂತಹಾ ಪಾತ್ರಗಳು ನನಗೆ ದೊರಕಿರುವುದು ನನಗೆ ನಿಜಕ್ಕೂ ಸಂತಸ ತಂದಿದೆ.ಇಷ್ಟಕ್ಕೂ ನನಗೆ ನಾನು ಚಿತ್ರತಂಡದ ನಡುವೆ ಇರುವಾಗ ಒಂದೊಂದು ಬಾರಿ ನಿಜಕ್ಕೂ ಭಯ, ಹಿಂಜರಿಕೆಯನ್ನು ಅನುಭವಿಸುತ್ತೇನೆ" ನಟಿ ಸಂತಸದಿಂದ ನುಡಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನಾವು ದಾಳಿ ಮಾಡದೇ ಹೋಗಿದ್ದರೆ ಇಷ್ಟು ಹೊತ್ತಿಗೆ Iran ಅಣ್ವಸ್ತ್ರ ರಾಷ್ಟ್ರವಾಗಿರುತ್ತಿತ್ತು': ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು

IPL 2026: ತವರಿನಲ್ಲಿ ಮುಂಬೈ ಗೆ ಮುಖಭಂಗ; RCB ಗೆ 18 ರನ್ ಭರ್ಜರಿ ಗೆಲುವು!

7 ತಿಂಗಳ ಮಗುವಿಗಾಗಿ ಕೆಲಸದ ಸಮಯದ ಹೊಂದಾಣಿಕೆ ಕೋರಿದ ಭಾರತೀಯ ಉದ್ಯೋಗಿ; US ಮ್ಯಾನೇಜರ್ ಪ್ರತಿಕ್ರಿಯೆ ಬಗ್ಗೆ ಜಾಲತಾಣಗಳಲ್ಲಿ ಭಾರಿ ಚರ್ಚೆ!

ಗುರಿ ಇಟ್ಟಿದ್ದು ಜಿಹಾದಿ ಬಂಡುಕೋರರಿಗೆ, ಗುರಿಯಾಗಿದ್ದು ಸ್ಥಳೀಯ ಮಾರ್ಕೆಟ್; 100 ಕ್ಕೂ ಹೆಚ್ಚು ನಾಗರಿಕರ ಮಾರಣಹೋಮ!

IPL 2026: ಮುಂಬೈ ವಿರುದ್ದ ಭರ್ಜರಿ ಬ್ಯಾಟಿಂಗ್; ಬಾಬರ್ ಆಜಂ, ಕ್ರಿಸ್ ಗೇಯ್ಲ್ ದಾಖಲೆ ಮುರಿದ Virat Kohli!

SCROLL FOR NEXT