ಗುರುಪ್ರಸಾದ್ 
ಸಿನಿಮಾ ಸುದ್ದಿ

ನಟಿಯರ ಪಾತಿವ್ರತೆ ಪ್ರಶ್ನಿಸುವ ಗುರುಪ್ರಸಾದ್, ಮಧ್ಯರಾತ್ರಿ ಸ್ವಂತ ಮಗಳನ್ನು ಹೊರಹಾಕಿದ್ದೇಕೆ?: ಗುರು ಮಾಜಿ ಪತ್ನಿ ಪ್ರಶ್ನೆ

ಸ್ಯಾಂಡಲ್ವುಡ್ ನಲ್ಲಿ ಮೀಟೂ ಆರೋಪ ಮಾಡಿದ್ದ ನಟಿಯರ ವಿರುದ್ಧ ರೇಗಾಡಿದ್ದ ನಿರ್ದೇಶಕ ಗುರುಪ್ರಸಾದ್ ವಿರುದ್ಧ ಅವರ ಮಾಜಿ ಪತ್ನಿ ಆರತಿ ಗರಂ ಆಗಿದ್ದಾರೆ...

ಬೆಂಗಳೂರು: ಸ್ಯಾಂಡಲ್ವುಡ್ ನಲ್ಲಿ ಮೀಟೂ ಆರೋಪ ಮಾಡಿದ್ದ ನಟಿಯರ ವಿರುದ್ಧ ರೇಗಾಡಿದ್ದ ನಿರ್ದೇಶಕ ಗುರುಪ್ರಸಾದ್ ವಿರುದ್ಧ ಅವರ ಮಾಜಿ ಪತ್ನಿ ಆರತಿ ಗರಂ ಆಗಿದ್ದಾರೆ. 
ನಟಿಯರ ಪಾತಿವ್ರತೆ ಪ್ರಶ್ನಿಸುವ ಗುರುಪ್ರಸಾದ್ ಮಧ್ಯರಾತ್ರಿಯಲ್ಲಿ ತನ್ನ 14 ವರ್ಷದ ಸ್ವಂತ ಮಗಳು ಹಾಗೂ ಪತ್ನಿಯನ್ನೇ ಮಧ್ಯರಾತ್ರಿ ಮನೆಯಿಂದ ಹೊರಹಾಕಿದ್ದಾರೆ ಎಂಬ ಸ್ಫೋಟಕ ವಿಚಾರವನ್ನು ಆರತಿ ಬಹಿರಂಗಪಡಿಸಿದ್ದಾರೆ. 
ಯಾವುದೇ ವ್ಯಕ್ತಿ ಯಾರ ಬಗ್ಗೆಯೂ ಮಾತನಾಡಿದರೂ ಅದು ಒಪ್ಪುವಂತಹ ವಿಷಯವಲ್ಲ ಅನ್ನೋದು ನನ್ನ ಅಭಿಪ್ರಾಯ. ಯಾವುದೇ ಒಬ್ಬ ವ್ಯಕ್ತಿಗೆ ಇನ್ನೊಬ್ಬ ಹೆಣ್ಣು ಅಥವಾ ಮಹಿಳೆ ಹಾಗೂ ತೃತೀಯ ಲಿಂಗಿಗಳ ಬಗ್ಗೆಯೂ ಈ ತರ ಮಾತನಾಡುವ ಹಕ್ಕು ಇರಲ್ಲ ಎಂದು ಹೇಳಿದ್ದಾರೆ. 
ಗುರುಗೆ ಹೆಣ್ಣು ಮಗಳಿದ್ದಾಳೆ. ಹೀಗಾಗಿ ಎಲ್ಲರೂ ಹೆಣ್ಣು ಮಕ್ಕಳು ಸರಿಯಿಲ್ಲ ಅಂತ ಒಬ್ಬ ಅಪ್ಪನಾಗಿ ಹೇಳೋದತ್ತೂ ಮುಂಚೆ ಯೋಚನೆ ಮಾಡಬೇಕು. ಆತ ಯೋಚನೆ ಮಾಡುತ್ತಿಲ್ಲ ಅಂದ್ರೆ ಆತ ಅಪ್ಪನಾಗಿ ನಡೆದುಕೊಳ್ಳುತ್ತಿಲ್ಲ ಅಂತ ಅರ್ಥ ಎಂದು ಗುರುಪ್ರಸಾದ್ ವಿರುದ್ಧ ಆರತಿ ಗರಂ ಆಗಿದ್ದಾರೆ. 
ನನ್ನ ಹಾಗೂ ನನ್ನ ಮಗಳನ್ನು ಹೊರಗೆ ಹಾಕಿ ಮೂರು ವರ್ಷ ವಾಯ್ತು. ಆ ಮೇಲೆ ನಾವು ವಿಚ್ಛೇದನೆಕ್ಕೆ ಒಪ್ಪಿಕೊಂಡೇವು. ಒಂದೆರಡು ಸಲ ಕೋರ್ಟ್ ಗೆ ಬಂದ ನಂತರ ಅವರು ಕೋರ್ಟ್ ಗೂ ಬಂದಿಲ್ಲ. ಡಿವೋರ್ಸ್ ಪೇಪರ್ ಗೆ ಸಹಿ ಹಾಕಿ ಕೊಡಿ ಅಂದರೂ ಅವರು ಸಿಗುತ್ತಿಲ್ಲ ಅಂತ ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಪಶ್ಚಿಮ ಬಂಗಾಳದ 15 ಮತಗಟ್ಟೆಗಳಲ್ಲಿ ನಾಳೆ ಮರು ಮತದಾನ: ಚುನಾವಣಾ ಆಯೋಗ ಆದೇಶ!

ಕದನ ವಿರಾಮ ಇದ್ದರೂ, ದಕ್ಷಿಣ ಲೆಬನಾನ್ ಮೇಲೆ ಇಸ್ರೇಲ್ ವೈಮಾನಿಕ ದಾಳಿ: ನಾಲ್ವರು ಸಾವು!

ಡಿಸಿಎಂ DKS ಪುತ್ರಿಗೆ ಹೆಣ್ಣು ಮಗು ಜನನ: ತಾತನಾದ ಖುಷಿ; ಆಸ್ಪತ್ರೆಗೆ ದೌಡಾಯಿಸಿದ ಡಿ.ಕೆ ಶಿವಕುಮಾರ್

ಮದ್ಯಪಾನ ಮಾಡಿ ವಿಧಾನಸಭೆಗೆ ಬಂದ್ರಾ ಪಂಜಾಬ್ ಸಿಎಂ ಭಗವಂತ್ ಮಾನ್? ಡೋಪ್ ಪರೀಕ್ಷೆಗೆ ವಿಪಕ್ಷಗಳ ಒತ್ತಾಯ; Video

Tamilnadu: ರಾಜಕೀಯ ದ್ವೇಷ; ಟಿವಿಕೆ ಪ್ರಚಾರ ಕಚೇರಿಗೆ ದುಷ್ಕರ್ಮಿಗಳಿಂದ ಬೆಂಕಿ!

SCROLL FOR NEXT