ಚಿತ್ರದ ದೃಶ್ಯ 
ಸಿನಿಮಾ ಸುದ್ದಿ

ಊಟಿಯಲ್ಲಿ 'ಸೀತಾರಾಮ ಕಲ್ಯಾಣ' ಅಂತಿಮ ಹಂತದ ಶೂಟಿಂಗ್

ನಿರ್ದೇಶಕ ಹರ್ಷ ಅವರ ನಿಖಿಲ್ ಕುಮಾರ್ ನಟನೆಯ ಸೀತಾರಾಮ ಕಲ್ಯಾಣ ಚಿತ್ರದ ಶೂಟಿಂಗ್ ಅಂತಿಮ ಹಂತ...

ನಿರ್ದೇಶಕ ಹರ್ಷ ಅವರ ನಿಖಿಲ್ ಕುಮಾರ್ ನಟನೆಯ ಸೀತಾರಾಮ ಕಲ್ಯಾಣ ಚಿತ್ರದ ಶೂಟಿಂಗ್ ಅಂತಿಮ ಹಂತ ತಲುಪಿದ್ದು ಚಿತ್ರದ ಪ್ರಮುಖ ಭಾಗವನ್ನು ಊಟಿಯಲ್ಲಿರುವ 174 ವರ್ಷಗಳ ಹಳೆಯ ಫೆರ್ನ್ ಹಿಲ್ಸ್ ರಾಯಲ್ ಅರಮನೆಯಲ್ಲಿ ಶೂಟಿಂಗ್ ಮಾಡಲಾಯಿತು. 10 ದಿನಗಳ ಶೂಟಿಂಗ್ ಮೊನ್ನೆ ಮುಗಿದಿದೆ.

ಶೂಟಿಂಗ್ ನ ಪ್ರಮುಖ ಫೋಟೋ ಸಿಟಿ ಎಕ್ಸ್ ಪ್ರೆಸ್ ಗೆ ಲಭ್ಯವಾಗಿದ್ದು ನಿಖಿಲ್ ಕುಮಾರ್, ರಚಿತಾ ರಾಮ್ ಮತ್ತು ಇತರ 200 ಕಲಾವಿದರು ಮತ್ತು 150 ತಂತ್ರಜ್ಞರು ಶೂಟಿಂಗ್ ನಲ್ಲಿ ಭಾಗಿಯಾಗಿದ್ದರು. ಚಿತ್ರಕ್ಕೆ ಇನ್ನಷ್ಟು ರಂಗು ಮೂಡಿಸಲು ಪರಂಪರಾ ಕಟ್ಟಡದಲ್ಲಿ ಶೂಟಿಂಗ್ ಮಾಡಿದೆವು ಎಂದರು ನಿರ್ದೇಶಕ ಹರ್ಷ.

ಚಿತ್ರದ ಫ್ಲಾಶ್ ಬಾಕ್ ದೃಶ್ಯ ಮತ್ತು ಎರಡು ಹಾಡುಗಳ ಶೂಟಿಂಗ್ ಬಾಕಿ ಉಳಿದಿದೆ. ಮುಂದಿನ ಶೆಡ್ಯೂಲ್ ಚಿತ್ರೀಕರಣ ನಾಡಿದ್ದು ಸೋಮವಾರ ಆರಂಭವಾಗಲಿದೆ. ಅದು ಕರ್ನಾಟಕದ ಕೆಲವು ಸ್ಥಳಗಳಲ್ಲಿ ನಡೆಯಲಿವೆಯಂತೆ.

ಚನ್ನಾಂಬಿಕಾ ಪ್ರೊಡಕ್ಷನ್ ನಡಿ ನಿರ್ಮಾಣವಾಗುತ್ತಿರುವ ಸೀತಾರಾಮ ಕಲ್ಯಾಣ ಚಿತ್ರದಲ್ಲಿ ಶರತ್ ಕುಮಾರ್, ಬಾಲಿವುಡ್ ನಟರು, ಮದೂ, ರವಿಶಂಕರ್ ಮೊದಲಾದವರಿದ್ದಾರೆ. ಅನುಪ್ ರುಬೆನ್ಸ್ ಅವರ ಸಂಗೀತ ಮತ್ತು ಸ್ವಾಮಿ ಜೆ ಅವರ ಛಾಯಾಗ್ರಹಣವಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪ್ರದೋಶ್ ಮಾಫಿ ಸಾಕ್ಷಿ ಅರ್ಜಿ ಅಂಗೀಕರಿಸಿದ ಕೋರ್ಟ್; 'ದಾಸ'ನಿಗೆ ಬಿಗ್ ಶಾಕ್!

Congress ಶಾಸಕ ಪ್ರದೀಪ್ ಈಶ್ವರ್ ವಿರುದ್ಧ ಜಾಮೀನು ರಹಿತ ಬಂಧನ ವಾರಂಟ್ ಜಾರಿ, ಬಂಧನ ಭೀತಿ!

SIR ವಿರುದ್ಧ 'ಚುನಾವಣಾ ಆಯೋಗ ಚಲೋ' ಘೋಷಿಸಿದ ಪ್ರಕಾಶ್ ರಾಜ್; ಆಯುಕ್ತರ ರಾಜೀನಾಮೆಗೆ ಆಗ್ರಹ

ನಾಳೆ ಜಗತ್ತಿನಾದ್ಯಂತ ಯಶ್ ನಟನೆಯ 'Toxic' ಚಿತ್ರ ಬಿಡುಗಡೆ; ಇಂದು ದಿಢೀರ್ ಕೋರ್ಟ್ ಮೆಟ್ಟಿಲೇರಿದ ನಿರ್ಮಾಪಕ!

ಬೆಂಗಳೂರು: ಸಿಗ್ನಲ್‌ನಲ್ಲಿ ನಿಂತಿದ್ದ ಬೈಕ್‌ಗೆ ವೇಗವಾಗಿ ಬಂದ ಕಾರು ಡಿಕ್ಕಿ, ಹೇರ್ ಸ್ಟೈಲಿಸ್ಟ್ ಸಾವು; Video