ಕಿಚ್ಚ ಸುದೀಪ್ 
ಸಿನಿಮಾ ಸುದ್ದಿ

ಸೈರಾ ನರಸಿಂಹರೆಡ್ಡಿ ಚಿತ್ರದಲ್ಲಿನ ಕಿಚ್ಚ ಸುದೀಪ್ ಫಸ್ಟ್ ಲುಕ್ ಬಿಡುಗಡೆ, ಕಿಚ್ಚನ ಖಡಕ್ ಲುಕ್!

ಟಾಲಿವುಡ್ ಮೆಗಾಸ್ಟಾರ್ ಚಿರಂಚೀವಿ ಅಭಿನಯದ ಬಹುನಿರೀಕ್ಷಿತ ಸೈರಾ ನರಸಿಂಹರೆಡ್ಡಿ ಚಿತ್ರದಲ್ಲಿ ಕಿಚ್ಚ ಸುದೀಪ್ ಅಭಿನಯಿಸುತ್ತಿದ್ದು ಸುದೀಪ್ ಹುಟ್ಟುಹಬ್ಬದ ಹಿನ್ನಲೆಯಲ್ಲಿ ಚಿತ್ರ ತಂಡ ಕಿಚ್ಚನ...

ಟಾಲಿವುಡ್ ಮೆಗಾಸ್ಟಾರ್ ಚಿರಂಚೀವಿ ಅಭಿನಯದ ಬಹುನಿರೀಕ್ಷಿತ ಸೈರಾ ನರಸಿಂಹರೆಡ್ಡಿ ಚಿತ್ರದಲ್ಲಿ ಕಿಚ್ಚ ಸುದೀಪ್ ಅಭಿನಯಿಸುತ್ತಿದ್ದು ಸುದೀಪ್ ಹುಟ್ಟುಹಬ್ಬದ ಹಿನ್ನಲೆಯಲ್ಲಿ ಚಿತ್ರ ತಂಡ ಕಿಚ್ಚನ ಫಸ್ಟ್ ಲುಕ್ ಬಿಡುಗಡೆ ಮಾಡಿದೆ. 
ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಚಿತ್ರದಲ್ಲಿ ಅವುಕು ರಾಜ್ಯದ ರಾಜನಾಗಿ ನಟಿಸುತ್ತಿದ್ದಾರೆ. ಇದೀಗ ಅವರ ಫಸ್ಟ್ ಲುಕ್ ಬಿಡುಗಡೆಯಾಗಿದ್ದು ಸುದೀಪ್ ಕಪ್ಪು ಬಣ್ಣದ ಉಡುಪಿನಲ್ಲಿ ಕಂಗೊಳಿಸಿದ್ದಾರೆ.
ಇತಿಹಾಸಕಾರರ ಪ್ರಕಾರ, 1846 ಜುಲೈ 23ರಂದು ಬ್ರಿಟಿಷರ ವಿರುದ್ಧ ನಡೆದ ಗಿಡ್ಡಲುರು ಬಂಡಾಯದಲ್ಲಿ ಉಯ್ಯಾಲುವಾಡ ನರಸಿಂಹರೆಡ್ಡಿ ಜತೆ ಅವುಕು ರಾಜ ಕೈ ಜೋಡಿಸುತ್ತಾನೆ. ಈ ಕದನದಲ್ಲಿ ಸೆರೆಯಾದ ಉಯ್ಯಾಲು ನರಸಿಂಹರೆಡ್ಡಿಯನ್ನು 1846ರ ಅಕ್ಟೋಬರ್ 6ರಂದು ಮರಣದಂಡನೆಗೊಳಪಡಿಸುತ್ತಾರೆ. ಇದೇ ಕಥಾವಸ್ತುವನ್ನಿಟ್ಟುಕೊಂಡು ನಿರ್ದೇಶಕ ಸುರೇಂದರ್ ಚಿತ್ರವನ್ನು ನಿರ್ದೇಶಿಸಿದ್ದಾರೆ. 
ಕಿಚ್ಚ ಸುದೀಪ್ ಹುಟ್ಟುಹಬ್ಬದ ನಿಮಿತ್ತ ಚಿತ್ರತಂಡ ಸುದೀಪ್ ಫಸ್ಟ್ ಲುಕ್ ಬಿಡುಗಡೆ ಮಾಡಿದ್ದು ಅಭಿಮಾನಿಗಳು ಫುಲ್ ಖುಷಿಯಾಗಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಮೇ ತಿಂಗಳಲ್ಲಿ ನಿರುದ್ಯೋಗ ದರ 5.5%ಕ್ಕೆ ಏರಿಕೆ; 11 ತಿಂಗಳಲ್ಲೇ ಗರಿಷ್ಠ ಮಟ್ಟ

ಏನೇ ಶಾಂತಿ ಒಪ್ಪಂದವಾದ್ರೂ ನಾವು ಅಮೆರಿಕವನ್ನ ನಂಬಲ್ಲ: ಡೊನಾಲ್ಡ್ ಟ್ರಂಪ್ ಗೆ ಶಾಕ್ ಕೊಟ್ಟ Iran

'14 ತಿಂಗಳ ಕಾಲ ಕ್ರಿಕೆಟ್‌ನಿಂದ ದೂರ, ಖಿನ್ನತೆಗೆ ಒಳಗಾಗಿದ್ದೆ.. Cricket ಅನ್ನೇ ತೊರೆಯಬೇಕೆಂದಿದ್ದೆ': ಕನ್ನಡತಿ Shreyanka Patil ಆಘಾತಕಾರಿ ಹೇಳಿಕೆ

'ಗುರು ದ್ರೋಹಿ'; ಪಂಜಾಬ್ ಚುನಾವಣೆಗೂ ಮುನ್ನ ಸಿಎಂ Bhagwant Mannಗೆ ಆಘಾತ, ಧಾರ್ಮಿಕ ಗುರುಗಳ ಆಕ್ರೋಶ

2 ಕೋಟಿ ಇನ್ಷುರೆನ್ಸ್ ಹಣಕ್ಕಾಗಿ ಮಾಜಿ ಯೋಧನ ಕೊಲೆ: FSL ವರದಿಯನ್ನೇ ತಿರುಚಿದ ಖತರ್ನಾಕ್ ಗ್ಯಾಂಗ್, ಪತ್ನಿ, ಆಕೆಯ ಲವರ್ ಸೇರಿ 9 ಮಂದಿ ಬಂಧನ

SCROLL FOR NEXT