ವಿನಯ್ ರಾಜ್ ಕುಮಾರ್ 
ಸಿನಿಮಾ ಸುದ್ದಿ

'ಗ್ರಾಮಾಯಣ'ಕ್ಕಾಗಿ ಹಳ್ಳಿ ಹೈದನಾದ ವಿನಯ್ ರಾಜ್ ಕುಮಾರ್!

ನಿರ್ದೇಶಕ, ದೇವನೂರು ಚಂದ್ರು ಹೊಸ ಚ್ವಿತ್ರ "ಗ್ರಾಮಾಯಣ" ತೀಸರ್ ಗುರುವಾರ ಬಿಡುಗಡೆಯಾಗಿದೆ. ಟೀಸರ್ ನಲ್ಲಿ ವಿಭಿನ್ನ ಗೆಟಪ್ ನಲ್ಲಿರುವ ವಿನಯ್ ರಾಜ್ ಕುಮಾರ್ ಅವರನ್ನು ಕಾಣಬಹುದಾಗಿದ್ದು....

ಬೆಂಗಳೂರು: ನಿರ್ದೇಶಕ, ದೇವನೂರು ಚಂದ್ರು ಹೊಸ ಚಿತ್ರ "ಗ್ರಾಮಾಯಣ" ಟೀಸರ್ ಗುರುವಾರ ಬಿಡುಗಡೆಯಾಗಿದೆ. ಟೀಸರ್ ನಲ್ಲಿ ವಿಭಿನ್ನ ಗೆಟಪ್ ನಲ್ಲಿರುವ ವಿನಯ್ ರಾಜ್ ಕುಮಾರ್ ಅವರನ್ನು ಕಾಣಬಹುದಾಗಿದ್ದು ಚಿತ್ರದಲ್ಲಿ ಗ್ರಾಮೀಣ ಯುವಕನ ಪಾತ್ರೆ ವಹಿಸಿರುವ ನಟ ಲುಂಗಿ ಹಾಗೂ ಗಡ್ಡದೊಡನೆ ವಿಶೇಷ ಹಳ್ಳಿ ಪೋಷಾಕಿನಲ್ಲಿ ಕಾಣಿಸಿಕೊಂಡಿದ್ದಾರೆ.
ಹಳ್ಳಿಯ ಯುವಕರು ಪಟ್ಟಣದಲ್ಲಿ ನೆಲೆ ಕಾಣಲು ಪಡುವ ಹೋರಾಟದ ಹಿನ್ನೆಲೆ ಇರುವ ಈ ಚಿತ್ರ "ಮುಗ್ಧತೆ, ಸಂಸ್ಕೃತಿ, ಹಳ್ಳಿ ಜೀವನದ ಸೊಗಡು," ಎಲ್ಲವನ್ನೂ ಹೊಂದಿದೆ. ಎಂದು ನಟ ವಿನಯ್ ಹೇಳಿದ್ದಾರೆ.
ವರ್ಷಗಳ ಕಾಲ ಈ ಚಿತ್ರಕ್ಕಾಗಿ ಕೆಲಸ ಮಾಡಿರುವ ನಿರ್ದೇಶಕರು ಗ್ರಾಮೀಣ ಯುವಕನ ಪಾತ್ರವನ್ನು ನೈಜವಾಗಿ ತೋರಿಸುವ ಪ್ರಾಮಾಣಿಕ ಪ್ರಯತ್ನ ಮಡಿದ್ದಾರೆ. ಇದಕ್ಕಾಗಿ ವಿನಯ್ ನಿರ್ದೇಶಕರ ಬಗೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದು "ನಾನು ಕೆಲವು ಹಳ್ಳಿಗಳಿಗೆ ಹೋಗಿದ್ದಲ್ಲದೆ ಚಿತ್ರದ ನನ್ನ ಪಾತ್ರದಲ್ಲಿ ನಾನು ಹೇಗೆ ಕಾಣಿಸಿಕೊಳ್ಳಬೇಕು, ನನ್ನ ಹಾವ ಭಾವ, ಸಂಬಾಷಣೆ ಹೇಗಿರಬೇಕು ಎನ್ನುವುದನ್ನು ಕಲಿಸ್ತುಕೊಂಡೆ" ವಿನಯ್ ಹೇಳಿದರು.
ಗ್ರಾಮಾಯಣದಲ್ಲಿ ನಿರ್ದೇಶಕರು ಹಳ್ಳಿ ಜನರ ಜೀವನದ ನಾನಾ ಮುಖಗಳನ್ನು ತೋರಿಸಿದ್ದಾರೆ."ನನ್ನ ಪಾತ್ರದ ಹೆಸರು ಸಿಕ್ಸ್ತ್ ಸೆನ್ಸ್ ಸೀನ ಎಂದಾಗಿದೆ. ನಿರ್ದೇಶಕರು ಅನೇಕ ಪಾತ್ರಗಳಿಗೆ ವಿಶಿಷ್ಟ ಲಕ್ಷಣಗಳನ್ನು, ಮತ್ತು ಒಂದು ಪಾತ್ರದಲ್ಲಿ ಹಳ್ಳಿಯ ಜನರಲ್ಲಿ ವಿವಿಧ ರೀತಿಯ ಮುಖಗಳನ್ನು ತಂದಿದ್ದಾರೆ.ನನ್ನನ್ನು ಹಲವು ಗ್ರಾಮಸ್ಥರು ಭೇಟಿಯಾಗಿದ್ದು ಅವರೆಲ್ಲಾ ನಾನು ಆ ಪಾತ್ರಕ್ಕೆ ಒಗ್ಗಿಕೊಳ್ಳಲು ಸಹಾಯ ಮಾಡಿದ್ದಾರೆ. ಅಲ್ಲದೆ ಹಲವು ರಂಗಭೂಮಿ ಹಿನ್ನೆಲೆಯ ನಟರನ್ನು ಸಹ ನಿರ್ದೇಶಕರು ಈ ಚಿತ್ರದಲ್ಲಿ ಬಳಸಿಕೊಂಡಿದ್ದಾರೆ." ನಟ ವಿವರಿಸಿದರು.
ಚಿತ್ರಕ್ಕೆ ಪೂರ್ಣಚಂದ್ರ ತೇಜಸ್ವಿ ಮತ್ತು ಅಭಿಷೇಕ್ ಜಿ ಕಾಸರಗೋಡು ಸಂಗೀತವಿದ್ದು  ವಿಕ್ರಮ್ ಮೋರ್ ಸಾಹಸ ನಿರ್ದೇಶಕರಾಗಿದ್ದಾರೆ. ಎನ್​​.ಎಲ್​.ಎನ್ ಮೂರ್ತಿ ಅವರ ನಿರ್ಮಾಣದ ಈ ಚಿತ್ರದಲ್ಲಿ ಅಮೃತಾ ಅಯ್ಯರ್ , ಸಂಪತ್ ಮೈತ್ರಿಯಾ, ಅಪರ್ಣಾ, ಸೀತಾ ಕೋಟೆ, ಶ್ರೀನಿವಾಸ್ ಪ್ರಭು, ಮಂಜುನಾಥ್ ಹೆಗಡೆ ಮೊದಲಾದವರ ಅಭಿನಯವಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನಾವು ದಾಳಿ ಮಾಡದೇ ಹೋಗಿದ್ದರೆ ಇಷ್ಟು ಹೊತ್ತಿಗೆ Iran ಅಣ್ವಸ್ತ್ರ ರಾಷ್ಟ್ರವಾಗಿರುತ್ತಿತ್ತು': ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು

IPL 2026: ತವರಿನಲ್ಲಿ ಮುಂಬೈ ಗೆ ಮುಖಭಂಗ; RCB ಗೆ 18 ರನ್ ಭರ್ಜರಿ ಗೆಲುವು!

7 ತಿಂಗಳ ಮಗುವಿಗಾಗಿ ಕೆಲಸದ ಸಮಯದ ಹೊಂದಾಣಿಕೆ ಕೋರಿದ ಭಾರತೀಯ ಉದ್ಯೋಗಿ; US ಮ್ಯಾನೇಜರ್ ಪ್ರತಿಕ್ರಿಯೆ ಬಗ್ಗೆ ಜಾಲತಾಣಗಳಲ್ಲಿ ಭಾರಿ ಚರ್ಚೆ!

ಗುರಿ ಇಟ್ಟಿದ್ದು ಜಿಹಾದಿ ಬಂಡುಕೋರರಿಗೆ, ಗುರಿಯಾಗಿದ್ದು ಸ್ಥಳೀಯ ಮಾರ್ಕೆಟ್; 100 ಕ್ಕೂ ಹೆಚ್ಚು ನಾಗರಿಕರ ಮಾರಣಹೋಮ!

IPL 2026: ಮುಂಬೈ ವಿರುದ್ದ ಭರ್ಜರಿ ಬ್ಯಾಟಿಂಗ್; ಬಾಬರ್ ಆಜಂ, ಕ್ರಿಸ್ ಗೇಯ್ಲ್ ದಾಖಲೆ ಮುರಿದ Virat Kohli!

SCROLL FOR NEXT