ಸಂಗ್ರಹ ಚಿತ್ರ 
ಸಿನಿಮಾ ಸುದ್ದಿ

'ವಿಕ್ಟರಿ' ಸರಣಿ ಚಿತ್ರದಲ್ಲಿ 'ಖಾಲಿ ಕ್ವಾಟ್ರು ಬಾಟ್ಲಿಯಂಗೆ ಲೈಫು' ಹಾಡಿಗೆ ಹೊಸ ರೂಪ!

ಖಾಲಿ ಕ್ವಾಟ್ರು ಬಾಟ್ಲಿಯಂಗೆ ಲೈಫು... ಆಚೆಗೆ ಹಾಕೊವ್ಲೆ ವೈಫು...ಹಾಡು ಎಲ್ಲರಿಗೂ ನೆನಪಿರಬಹುದು. 2013ರಲ್ಲಿ ಹಿಟ್ ಚಿತ್ರಗಳಲ್ಲಿ ಒಂದಾಗಿದ್ದ ವಿಕ್ಟರಿ ಚಿತ್ರದ ಹಾಡಿದು. ಈ ಹಾಡು ಸಾಕಷ್ಟು ಜನರ ಮನಗೆದ್ದಿತ್ತ...

ಖಾಲಿ ಕ್ವಾಟ್ರು ಬಾಟ್ಲಿಯಂಗೆ ಲೈಫು... ಆಚೆಗೆ ಹಾಕೊವ್ಲೆ ವೈಫು...ಹಾಡು ಎಲ್ಲರಿಗೂ ನೆನಪಿರಬಹುದು. 2013ರಲ್ಲಿ ಹಿಟ್ ಚಿತ್ರಗಳಲ್ಲಿ ಒಂದಾಗಿದ್ದ ವಿಕ್ಟರಿ ಚಿತ್ರದ ಹಾಡಿದು. ಈ ಹಾಡು ಸಾಕಷ್ಟು ಜನರ ಮನಗೆದ್ದಿತ್ತು. 
5 ವರ್ಷಗಳ ಬಳಿಕ ಇದೇ ರೀತಿಯ ಹಾಡಿನೊಂದಿಗೆ ಜನರ ಮನಗೆಲ್ಲಲು ವಿಕ್ಟರಿ ಚಿತ್ರದ ತಂಡ ಸಿದ್ಧತೆ ನಡೆಸಿದೆ. ನಾನ್ ಮನೆಗ್ ಹೋಗೋದಿಲ್ಲ ಎಂಬ ಹಾಡಿನ ಸಾಹಿತ್ಯವನ್ನು ಯೋಗರಾಜ್ ಭಟ್ ಅವರು ಬರೆದಿದ್ದು, ಹಾಡಿಗೆ ಸಂಗೀತ ನೀಡುತ್ತಿರುವ  ಅರ್ಜುನ್ ಜನ್ಯ ಹಾಗೂ ವಿಜಯ್ ಪ್ರಕಾಶ್ ಅವರೇ ಧ್ವನಿ ನೀಡುತ್ತಿದ್ದಾರೆ. ಹಾಡಿನಲ್ಲಿ ಶರಣ್ ಹಾಗೂ ಸಾಧುಕೋಕಿಲಾ ಹೆಜ್ಜೆ ಹಾಕುತ್ತಿದ್ದು, ನೃತ್ಯ ಸಂಯೋಜನೆಯನ್ನು ಭೂಷಣ್ ಅವರು ಮಾಡುತ್ತಿದ್ದಾರೆ. 
ವಿಕ್ಟರಿ 2 ಚಿತ್ರವನ್ನು ತರುಣ್ ಶಿವಪ್ಪ ಫಿಲಮ್ಸ್ ನಿರ್ಮಾಣ ಮಾಡುತ್ತಿದ್ದು, ಚಿತ್ರದ ಛಾಯಾಗ್ರಹಣವನ್ನು ಗುರು ಪ್ರಶಾಂತ್ ರೈ ನೋಡಿಕೊಳ್ಳುತ್ತಿದ್ದಾರೆ. 
ಚಿತ್ರದಲ್ಲಿ ರವಿಶಂಕರ್, ನಸ್ಸಾರ್ ಸೇರಿ ಅಶ್ಮಿತಾ ಸೂದ್ ಹಾಗೂ ಅಪೂರ್ವ ಅವರು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಮತಗಳ್ಳತನ' ನಡೆದಿರುವುದನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ನಿರಾಕರಿಸಲಿಲ್ಲ, ನನಗೆ ಆಶ್ಚರ್ಯವಾಯಿತು: ರಾಹುಲ್ ಗಾಂಧಿ

ಬೆಂಗಳೂರು: ನಮ್ಮ ಮೆಟ್ರೋದಲ್ಲಿ Alt News ಸಹ ಸ್ಥಾಪಕ ಮೊಹಮ್ಮದ್ ಜುಬೈರ್ ಗೆ ಹಿಗ್ಗಾಮುಗ್ಗ ಥಳಿತ?, Video Viral

19ನೇ ಓವರ್‌ನಲ್ಲೇ 250 ರನ್ ಚೇಸ್: ಟಿ20 ಕ್ರಿಕೆಟ್‌ನಲ್ಲಿ ಭಾರತವನ್ನು ಸೋಲಿಸಿ ದಾಖಲೆ ಬರೆದ ವಿಂಡೀಸ್

CJP Protest: ಭಾರತದ ಯುವಕರು ದೆಹಲಿಗೆ ತಲುಪುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ: ಚಿರಾಗ್ ಪಾಸ್ವಾನ್

24 ಗಂಟೆ ಇಂಟರ್ನೆಟ್ ಕಟ್, 57 ಮೆಟ್ರೋ ನಿಲ್ದಾಣ ಬಂದ್: ಸಿಜೆಪಿ ಪ್ರತಿಭಟನೆಗೂ ಮುನ್ನ ದೆಹಲಿ ಹೈ ಅಲರ್ಟ್