ಚಿತ್ರದ ದೃಶ್ಯ 
ಸಿನಿಮಾ ಸುದ್ದಿ

ಓದು-ಶೂಟಿಂಗ್ ಎಂದು 'ನಡುವೆ ಅಂತರವಿರಲಿ' ನಾಯಕ-ನಾಯಕಿ ಪ್ರಯಾಸ

ನಡುವೆ ಅಂತರವಿರಲಿ ಚಿತ್ರದ ನಿರ್ದೇಶಕ ರವೀನ್ ಕುಮಾರ ಅವರಿಗೆ ಚಿತ್ರದ ಶೂಟಿಂಗ್ ಶೆಡ್ಯೂಲ್ ನ್ನು...

ನಡುವೆ ಅಂತರವಿರಲಿ ಚಿತ್ರದ ನಿರ್ದೇಶಕ ರವೀನ್ ಕುಮಾರ ಅವರಿಗೆ ಚಿತ್ರದ ಶೂಟಿಂಗ್ ಶೆಡ್ಯೂಲ್ ನ್ನು ಹೊಂದಾಣಿಕೆ ಮಾಡಿಕೊಳ್ಳುವುದು ಕಷ್ಟವಾಗಿತ್ತು. ಅದಕ್ಕೆ ಕಾರಣ ಚಿತ್ರದ ನಾಯಕ-ನಾಯಕಿ ಐಶಾನಿ ಶೆಟ್ಟಿ ಮತ್ತು ಪ್ರಖ್ಯಾತ್ ಪರಮೇಶ್.

ಇಬ್ಬರೂ ಕಾಲೇಜಿಗೆ ಹೋಗುವ ವಿದ್ಯಾರ್ಥಿಗಳಾಗಿರುವುದರಿಂದ ತಮ್ಮ ಕಾಲೇಜು ಮತ್ತು ಶೂಟಿಂಗ್ ಸಮಯಗಳನ್ನು ಹೊಂದಿಸಿಕೊಳ್ಳಬೇಕಾಗಿತ್ತು. ಪರಮೇಶ್ ದಯಾನಂದ ಸಾಗರ ಕಾಲೇಜಿನಲ್ಲಿ ಎಂಜಿನಿಯರಿಂಗ್ ಓದುತ್ತಿದ್ದರೆ ಐಶಾನಿ ಸ್ನಾತಕೋತ್ತರ ಪದವಿ ಓದುತ್ತಿದ್ದಾರೆ. ಅವರ ಓದಿಗೆ ತೊಂದರೆಯಾಗದಂತೆ ಚಿತ್ರದ ಶೂಟಿಂಗ್ ಮಾಡುವುದು ನನ್ನ ಉದ್ದೇಶವಾಗಿತ್ತು. ಹೀಗಾಗಿ ಸಿನಿಮಾ ಮುಗಿಸಲು ಸ್ವಲ್ಪ ಸಮಯ ಹಿಡಿಯಿತು ಎನ್ನುತ್ತಾರೆ ನಿರ್ದೇಶಕ ರವೀನ್ ಕುಮಾರ್.

ಅಕ್ಟೋಬರ್ 5ರಂದು ತೆರೆಗೆ ಬರಲು ಸಜ್ಜಾಗಿರುವ ನಡುವೆ ಅಂತರವಿರಲಿ ಚಿತ್ರಕ್ಕೆ ಸೆನ್ಸಾರ್ ಬೋರ್ಡ್ ನಿಂದ ಒಪ್ಪಿಗೆ ಸಿಗಲು ಕೂಡ ಸ್ವಲ್ಪ ಕಷ್ಟವಾಯಿತಂತೆ. ಪರಿಷ್ಕರಣಾ ಸಮಿತಿಯಿಂದ ಕೊನೆಗೆ ಚಿತ್ರಕ್ಕೆ ಸರ್ಟಿಫಿಕೇಟ್ ಸಿಕ್ಕಿತಂತೆ. ಚಿತ್ರವನ್ನು ವೀಕ್ಷಿಸಿದ ಸ್ಥಳೀಯ ಸೆನ್ಸಾರ್ ಮಂಡಳಿ ಅಧಿಕಾರಿಗಳು, ಹದಿಹರೆಯದಲ್ಲಿನ ಪ್ರೀತಿಯ ಕಥೆಯಲ್ಲಿ ವಯಸ್ಕರಿಗೆ ಸಂಬಂಧಪಟ್ಟ ವಿಷಯಗಳಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದ್ದರಂತೆ.

ಅವರ ವಾದ ನನಗೆ ಅರ್ಥವಾಗಿರಲಿಲ್ಲ. ನಾನು ಒಪ್ಪಿರಲಿಲ್ಲ. ವಾದ ಮುಂದುವರಿಸುವ ಬದಲು ಪರಿಷ್ಕರಣಾ ಸಮಿತಿ ಮುಂದೆ ನಾನು ಹೋದೆ. ನನ್ನ ಅದೃಷ್ಟಕ್ಕೆ ಪರಿಷ್ಕರಣಾ ಸಮಿತಿಯಲ್ಲಿ ನಿರ್ದೇಶಕ ನಾಗಾಭರಣ ಅವರು ಇದ್ದರು. ಚಿತ್ರವನ್ನು ವೀಕ್ಷಿಸಿ ಯಾವುದೇ ಕತ್ತರಿ ಹಾಕದೆ ಯು/ಎ ಸರ್ಟಿಫಿಕೇಟ್ ನೀಡಿದರು ಎಂದರು.

ಚಿತ್ರಕ್ಕೆ ಸಂಗೀತ ಮಣಿಕಾಂತ್ ಕದ್ರಿ ಒದಗಿಸಿದ್ದಾರೆ. ಉದಯ್ ಕೆ ಮೆಹ್ತಾ ನಿರ್ಮಾಣದ ಚಿತ್ರದಲ್ಲಿ ಚಿಕ್ಕಣ್ಣ ಮತ್ತು ತುಳಸಿ ಶಿವಮಣಿ ಕೂಡ ಪ್ರಮುಖ ಪಾತ್ರ ಮಾಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಹಿರಿಯ ನಟ ಅನಂತ್ ನಾಗ್ ಗೆ ಪ್ರತಿಷ್ಠಿತ 'ದಾದಾ ಸಾಹೇಬ್ ಫಾಲ್ಕೆ' ಪ್ರಶಸ್ತಿ ಪ್ರಕಟ! ಪ್ರಧಾನಿ ಮೋದಿ, ಸಿಎಂ ಡಿಕೆಶಿ ಅಭಿನಂದನೆ

ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ, ಟಿ20 ಸರಣಿಗೆ ಭಾರತ ತಂಡ ಪ್ರಕಟ: ಹಾರ್ದಿಕ್, ಪಂತ್'ಗೆ ಬಿಗ್ ಶಾಕ್; ವಿರಾಟ್, ರೋಹಿತ್​ ಶರ್ಮಾಗೆ ಚಾನ್ಸ್

‘ಪ್ರತಿಷ್ಠಿತ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಬಂದ್ರೂ ನಂಬದ ಅನಂತ್ ನಾಗ್; ‘ಸುಳ್ಳು ಸುದ್ದಿ’ ಎಂದು ನಕ್ಕಿ ಮಲಗಿದ್ರು’

CBFC ಪುನಾರಚನೆ: ಸುನಿಲ್ ಶೆಟ್ಟಿ, ಪ್ರೀತಿ ಜಿಂಟಾ, ರಿಕಿ ಕೇಜ್ ಸೇರಿದಂತೆ 18 ಸದಸ್ಯರ ಆಯ್ಕೆ!

ಬಿಸಿಸಿಐನಿಂದ WPL 2027ರ ವೇಳಾಪಟ್ಟಿ ಪ್ರಕಟ: ಇದೇ ಅಕ್ಟೋಬರ್‌ನಲ್ಲಿ ಹರಾಜು ಪ್ರಕ್ರಿಯೆ