ಬೆಂಗಳೂರು: ಮೈಸೂರು ಬಳಿ ಕಾರು ಅಪಘಾತದಿಂದ ಗಾಯಗೊಂಡಿರುವ ದರ್ಶನ್ ಬೇಗನೇ ಗುಣಮುಖನಾಗಿ ಬನ್ನಿ ಎಂದು ಕಿಚ್ಚ ಸುದೀಪ್ ಹಾರೈಸಿದ್ದಾರೆ.
ಈ ಸಂಬಂಧ ಟ್ವೀಟ್ ಮಾಡಿರುವ ಸುದೀಪ್, ನೀವು ಚೆನ್ನಾಗಿದ್ದೀರಿ ಎಂದು ತಿಳಿದು ಖುಷಿಯಾಯಿತು. ಶೀಘ್ರವೇ ಗುಣಮುಖರಾಗಿ ಎಂದು ನಾನು ಹಾರೈಸುತ್ತೇನೆ ಎಂದು ಹೇಳಿದ್ದಾರೆ.
ಸುದೀಪ್ ನಿನ್ನೆ ಸಂಜೆ ಮಾಡಿರುವ ಈ ಟ್ವೀಟ್ ಗೆ ಸಾವಿರಗಟ್ಟಲೆ ಲೈಕ್ ಗಳು ಬಂದಿದ್ದು ಹಲವರು ರಿ ಟ್ವೀಟ್ ಮಾಡಿದ್ದಾರೆ.
ಇದಕ್ಕೂ ಮುನ್ನ ನಿನ್ನೆ ಮಧ್ಯಾಹ್ನ ಸ್ವತಃ ನಟ ದರ್ಶನ್ ಅವರೇ ಅಭಿಮಾನಿಗಳಲ್ಲಿ, ನನಗೆ ಏನೂ ಆಗಿಲ್ಲ, ಗಾಬರಿಯಾಗಬೇಡಿ, ಹುಷಾರಾಗಿದ್ದೇನೆ, ಆಸ್ಪತ್ರೆಯತ್ತ ಯಾರೂ ಬರಬೇಡಿ, ಬಂದು ಗದ್ದಲವಾದರೆ ಬೇರೆ ರೋಗಿಗಳಿಗೆ ತೊಂದರೆಯಾಗುತ್ತದೆ ಎಂದು ಮನವಿ ಮಾಡಿಕೊಂಡಿದ್ದರು.