ಸಿನಿಮಾ ಸುದ್ದಿ

ಪಾತ್ರದ ಮೂಲಕ ಪ್ರೇಕ್ಷಕರ ಮನಗೆಲ್ಲುವುದು ನನ್ನ ಗುರಿ: ಕೃತ್ತಿಕಾ ಜಯಕುಮಾರ್

Raghavendra Adiga
ಬೆಂಗಳೂರು: ಹ್ಯಾಟ್ರಿಕ್ ಹೀರೋ ಶಿವಣ್ಣ ಅಭಿನಯದ "ಕವಚ" ಚಿತ್ರದ ನಾಯಕಿ ಕೃತಿಕಾ ಜಯಕುಮಾರ್ ತಮಗೆ ಬರುವ ಎಲ್ಲಾ ಅವಕಾಶಗಳಲ್ಲಿ ಸರಿಯಾದದ್ದನ್ನು ಮಾತ್ರವೇ ಆಯ್ಕೆ ಮಾಡಿಕೊಳ್ಳುವ ಚೂಸಿ ಸ್ವಭಾವದ ನಟಿ. ಅವರೀಗ ಅಭಿನಯಿಸುತ್ತಿರುವ "ಕವಚ" ಚಿತ್ರದಲ್ಲಿ ಸಹ ಇದೇ ರೀತಿಯ ವಿಶೇಷ ಪಾತ್ರವನ್ನು ಆಕೆ ಆಯ್ದುಕೊಂಡಿದ್ದಾರೆ. 21  ವರ್ಷದವರಾದ ನಟಿ ತಾವು 35  ವರ್ಷದ ಮಹಿಳೆ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ಆ ಪಾತ್ರದಿಂದ ತಾವು ವೀಕ್ಷಕರ ಮನಸ್ಸಿನಲ್ಲಿ ಶಾಶ್ವತ ಸ್ಥಾನ ಪಡೆಯಲಿದ್ದೇನೆ ಎಂದು ಅವರು ಭಾವಿಸುತ್ತಾರೆ. ಮಲಯಾಳಂ ಚಿತ್ರವೊಂದರಿಂದ ಪ್ರೇರಣೆಗೊಂಡು ತಯಾರಾಗುತ್ತಿರುವ "ಕವಚ" ದಲ್ಲಿ ನನ್ನ ವಯಸ್ಸಿಗಿಂತ ದೊಡ್ಡ ಮಹಿಳೆಯ ಪಾತ್ರದಲ್ಲಿ ಕಾಣಿಸಿಕೊಳ್ಳುವುದಕ್ಕೆ ನನಗೇನೂ ಬೇಸರವಿಲ್ಲ. ನಾನು ಈ ಕಥೆ ಕೇಳಿದ ಬಳಿಕ ಎರಡನೇ ಆಲೋಚನೆ ಇಲ್ಲದೆ ಪಾತ್ರವನ್ನು ಒಪ್ಪಿಕೊಂಡಿದ್ದೆ ಎಂದು ಕೃತಿಕಾ ಹೇಳಿದ್ದಾರೆ.
ಒಂದೇ ಸವಾಲೆಂದರೆ ನಾನು ಪಾತ್ರದ ತೂಕ ಹೆಚುವಂತೆ, ಗೌರವಯುತ, ಮತ್ತು ಪ್ರಬುದ್ದವಾಗಿ ಕಾಣುವ ಪಾತ್ರದಲ್ಲಿ ಅಭಿನಯಿಸುತ್ತಿದ್ದೇನೆ. ಚಿತ್ರದಲ್ಲಿ ಜಯಣ್ಣನಾಗಿರುವ ಶಿವರಾಜ್ ಕುಮಾರ್ ಅವರ ಪಾತ್ರಕ್ಕೆ ನನ್ನ ಪಾತ್ರ ಭಾವನಾತ್ಮಕವಾಗಿ  ಸಂಬಂಧ ಹೊಂದಿದೆ. ಕನ್ನಡ ಪ್ರೇಕ್ಷಕರನ್ನು ಗಮನದಲ್ಲಿಟ್ಟುಕೊಂಡು ಮೂಲ ಚಿತ್ರಕ್ಕಿಂತ ಸಾಕಷ್ಟು ಬದಲಾವಣೆಗಳನ್ನು ಮಾಡಿಕೊಳ್ಳಲಾಗಿದೆ. ಇದು ನಮ್ಮೆಲ್ಲಾ ತಂಡಕ್ಕೆ ಒಳ್ಳೆಯ ಹೆಸರು ತಂದುಕೊಡಲಿದೆ ಎಂದು ನಾನು ನಂಬುತ್ತೇನೆ ಎಂದು ಅವರು ಹೇಳಿದ್ದಾರೆ. ಅಲ್ಲದೆ ಶಿವಣ್ಣನ ಜತೆ ಅಭಿನಯಿಸುವುದು ಯಾವುದೇ ನಟಿ, ನಟರಿಗೆ ದೊಡ್ಡ ಅವಕಾಶವೇ ಸರಿ ಎಂದು ಅವರು ಹೇಳುತ್ತಾರೆ.
ಕನ್ನಡ ಹಾಗೂ ತೆಲುಗಿನಲ್ಲಿ ತಯಾರಾಗುತ್ತಿರುವ "ಕವಚ" ಕೃತ್ತಿಕಾ ಪಾಕ್ಲಿಗೆ ದೊಡ್ಡ ಅದೃಷ್ಟದ ಬಾಗಿಲು ತೆರೆಯಲಿದೆ ಎಂದು ಹೇಳಲಾಗಿದೆ. "ಪ್ರಾಮಾಣಿಕವಾಗಿ, ಹೇಳಬೇಕಾದರೆ ನಾನು ನನಗೆ ಸಿಕ್ಕುವ ಎಲ್ಲಾ ವಕಾಶವನ್ನೂ ಒಂದೇ ಬಾರಿಗೆ ಒಪ್ಪುವುದಿಲ್ಲ, ನನಗೆ ಬಹಳಷ್ಟು ಸಂಖ್ಯೆಯ ಚಿತ್ರಗಳಲ್ಲಿ ಅಭಿನಯಿಸುವ ಆಸೆಯೂ ಇಲ್ಲ, ನಾನು ಪಾತ್ರಗಳನ್ನು ಆಯ್ಕೆ ಮಾಡಿಕೊಳ್ಳುತ್ತೇನೆ.ಪಾತ್ರದ ಮೂಲಕ ಪ್ರೇಕ್ಷಕರ ಮನದಲ್ಲಿ ನನ್ನ ನೆನಪು ಹಸಿರಾಗಿಸಲು ಬಯಸುತ್ತೇನೆ"ಇದೇ ವೇಳೆ ಪದವಿ ವ್ಯಾಸಂಗ ಮಾಡುತ್ತಿರುವ ಕೃತ್ತಿಕಾ ಪದವಿ ಶಿಕ್ಷಣ ಪೂರ್ಣಗೊಳಿಸಿಕೊಳ್ಳುವತ್ತ ಗಮನ ನೀಡುತ್ತಾರೆ. ಬಂದ ಕೆಲ ಅವಕಾಶವನ್ನು ಕೈಬಿಡಲು ಶಿಕ್ಷಣವೂ ಸಹ ಒಂದು ಕಾರಣವಾಗಿದೆ ಎಂದು ಕೃತ್ತಿಕಾ ಹೇಳಿದ್ದಾರೆ.
SCROLL FOR NEXT