ಸಿನಿಮಾ ಸುದ್ದಿ

'ದಿ ವರ್ಸ್ಟ್ ಡೇ' ಮೂಲಕ ನೀತು ಚಂದ್ರ ಹಾಲಿವುಡ್ ಗೆ ಎಂಟ್ರಿ!

Shilpa D
2017ರಲ್ಲಿ ಬ್ರಹ್ಮ.ಕಾಮ್ ಎಂಬ ತಮಿಳು ಸಿನಿಮಾದಲ್ಲಿ ಕಡೆಯ ಬಾರಿಗೆ ಕಾಣಿಸಿಕೊಡಿದ್ದ  ನಟಿ ನೀತು ಚಂದ್ರ ಹಾಲಿವುಡ್ ಶಾರ್ಟ್ ಫಿಲ್ಮ್ ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. 
ದಿ ವರ್ಸ್ಟ್ ಡೇ ಎಂಬ ಕಿರುಚಿತ್ರದ ಮೂಲಕ ಹಾಲಿವುಡ್ ಪ್ರವೇಶಿಸುತ್ತಿದ್ದಾರೆ, ಲಾಸ್ ಏಂಜಲೀಸ್ ಮೂಲದ ಸ್ಟಾನಿಸ್ಲಾವ ಐವಿ ಎಂಬುವರು ಕಥೆ ಬರೆದು ಸಿನಿಮಾ ನಿರ್ದೇಶಿಸುತ್ತಿದ್ದಾರೆ.
2019ನೇ ವರ್ಷ ನನಗೆ ತುಂಬಾ ಚೆನ್ನಾಗಿದೆ, ನಾನು ನನಗೆ ಇನ್ನೂ ಕಲಿಯಲು ಹೆಚ್ಚಿನ ಅವಕಾಶ ಸಿಕ್ಕಿದೆ, ಇದೇ ಮೊದಲ ಬಾರಿಗೆ ನೆಗೆಟಿವ್ ರೋಲ್ ನಲ್ಲಿ ಕಾಣಿಸಿಕೊಳ್ಳುತ್ತಿರುವುದಾಗಿ ನೀತು ಚಂದ್ರ ಹೇಳಿದ್ದಾರೆ.
ಈ ಶಾರ್ಟ್ ಫಿಲ್ಮ್ ನಲ್ಲಿ ಕಲಾವಿದರಾದ ಮಾರಿಯೆಟ್ಟಾ ಮೆರ್ಲೋಸ್ ಮತ್ತು ಜೋಸ್ ಮೊರೆನೋ ಕೂಡ ನಟಿಸಿದ್ದಾರೆ,  ಆದರೆ ಈ ಬಗ್ಗೆ ಇನ್ನೂ ಅಧಿಕೃತವಾಗಿ ಎಲ್ಲೂ ಪ್ರಕಟಿಸಿಲ್ಲ, ಇದನ್ನು ಹೊರತು ಪಡಿಸಿ ನೀತು, ಕೊರಿಯಾ ಯೂತ್ ಆಕ್ಷನ್ ಡ್ರಾಮಾದಲ್ಲಿ ಕೂಡ ನಟಿಸುತ್ತಿದ್ದಾರೆ, 
ಅಕ್ಷಯ್ ಕುಮಾರ್ ಮತ್ತು ಜಾನ್ ಅಬ್ರಹಾಂ ನಟನೆಯ ಗರಮ್ ಮಸಾಲಾ ಸಿನಿಮಾದಲ್ಲಿ  ಗಗನಸಖಿ ಪಾತ್ರದಲ್ಲಿ ನಟಿಸಿದ್ದರು, ಹಲವು ಭಾರತೀಯ ಸಿನಿಮಾಗಳಲ್ಲಿ ನಟಿಸಿದ್ದಾರೆ. 
SCROLL FOR NEXT