ಚಿತ್ರದ ಪೋಸ್ಟರ್ 
ಸಿನಿಮಾ ಸುದ್ದಿ

‘ಮಾಯಾ ಕನ್ನಡಿ’ ಟೀಸರ್ ರಿಲೀಸ್

ಚಂದನವನದ ಚಿತ್ರ ರಸಿಕರನ್ನು ರಂಜಿಸಲು ಥ್ರಿಲ್ಲರ್ ಆಧಾರಿತ ಚಲನಚಿತ್ರ 'ಮಾಯಾ ಕನ್ನಡಿ' ಸದ್ಯದಲ್ಲೇ ತೆರೆಗೆ ಬರಲಿದ್ದು, ಶನಿವಾರ ಟೀಸರ್ ಬಿಡುಗಡೆಯಾಗಿದೆ.

ಬೆಂಗಳೂರು: ಚಂದನವನದ ಚಿತ್ರ ರಸಿಕರನ್ನು ರಂಜಿಸಲು ಥ್ರಿಲ್ಲರ್ ಆಧಾರಿತ ಚಲನಚಿತ್ರ 'ಮಾಯಾ ಕನ್ನಡಿ' ಸದ್ಯದಲ್ಲೇ ತೆರೆಗೆ ಬರಲಿದ್ದು, ಶನಿವಾರ ಟೀಸರ್ ಬಿಡುಗಡೆಯಾಗಿದೆ.
ಇತ್ತೀಚೆಗಷ್ಟೆ ದೇಶ, ವಿದೇಶದ ಸುಮಾರು 138ಕ್ಕೂ ಹೆಚ್ಚು ಮಕ್ಕಳು, ಯುವಕರು ಬಲಿಯಾದ ಬ್ಲೂ ವೇಲ್ ಗೇಮ್ಸ್ ವಿಷಯವನ್ನು ಆಧಾರವಾಗಿಟ್ಟುಕೊಂಡು ಕಾಲೇಜ್ ಕ್ಯಾಂಪಸ್ ನಲ್ಲಿ ನಡೆಯುವ ಕೌತುಕಮಯವಾದ ಕಾಲ್ಪನಿಕ ಕಥೆಯನ್ನು ಮಾಯಾ ಕನ್ನಡಿ ಒಳಗೊಂಡಿದೆ.
ದುಬೈನಲ್ಲಿ ನೆಲೆಸಿರುವ ವಾಯುಯಾನ ಸಂಸ್ಥೆಯ ಉದ್ಯೋಗಿ ವಿನೋದ್ ಪೂಜಾರಿ ನಿರ್ದೇಶನದಲ್ಲಿ ಹೊರಬರುತ್ತಿರುವ ‘ಮಾಯಾ ಕನ್ನಡಿ’ಗೆ ಸಪ್ನಾ ಪೂಜಾರಿ ಬಂಡವಾಳ ಹೂಡಿದ್ದಾರೆ. 
ಸಿಫೋರಿಯಾ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರದಲ್ಲಿ ಪ್ರಭು ಮುಂಡಕೂರ್, ಕೆ ಎಸ್ ಶ್ರೀಧರ್, ಕಾಜಲ್ ಕುಂದೆರ್, ಅನ್ವಿತಾ ಸಾಗರ್, ಅನೂಪ್ ಸಾಗರ್, ಕಾರ್ತಿಕ್ ರಾವ್, ಅಶ್ವಿನ್ ರಾವ್ ಪಲ್ಲಕ್ಕಿ, ರಮೇಶ್ ರೈ ಕುಕ್ಕುವಳ್ಳಿ ಮೊದಲಾದವರಿದ್ದಾರೆ. 
ಬೆಂಗಳೂರು, ಮಂಗಳೂರು ಸೇರಿದಂತೆ ‘ಮಾಯಾ ಕನ್ನಡಿ’ಗಾಗಿ 35 ದಿನಗಳ ಚಿತ್ರೀಕರಣ ಮುಕ್ತಾಯವಾಗಿದೆ. ಐದು ಹಾಡುಗಳಿದ್ದು, ಸೆನ್ಸಾರ್ ಸರ್ಟಿಫಿಕೆಟ್ ದೊರೆತ ಕೂಡಲೇ ಬಿಡುಗಡೆಗೆ ಮುಹೂರ್ತ ಫಿಕ್ಸ್ ಆಗಲಿದೆ ಎಂದು ಚಿತ್ರತಂಡ ತಿಳಿಸಿದೆ. 
‘ಸಿನೆಮಾ ನನ್ನ ಪ್ಯಾಷನ್’  
ವಾಯುಯಾನಕ್ಕೆ ಸಂಬಂಧಿಸಿದ ವೃತ್ತಿಯಲ್ಲಿದ್ದರೂ, ಕಂಪ್ಯೂಟರ್ ಮುಂದೆ ಕೂತಾಗ ಚಲನಚಿತ್ರಗಳತ್ತಲೇ ಮನಸ್ಸು ವಾಲುತ್ತಿತ್ತು.  ಹೀಗಾಗಿ ಚಿತ್ರ ನಿರ್ದೇಶನಕ್ಕೆ ಮುಂದಾದೆ ಎಂದು ನಿರ್ದೇಶಕ ವಿನೋದ್ ಪೂಜಾರಿ ಹೇಳಿಕೊಂಡರು. ಆಧುನಿಕ ತಂತ್ರಜ್ಞಾನದ ಆವಿಷ್ಕಾರಗಳು ಮಾಯೆಯೂ ಹೌದು, ಮಹತ್ವವೂ ಹೌದು. ಅದು ಬಳಕೆದಾರರನ್ನು ಅವಲಬಿಸಿರುತ್ತದೆ. ಈ ವಿಷಯವನ್ನೇ ಆಧಾರವಾಗಿಟ್ಟುಕೊಂಡರು ‘ಮಾಯಾ ಕನ್ನಡಿ’ಯ ಚಿತ್ರಕಥೆ ಸಿದ್ಧಪಡಿಸಲಾಗಿದೆ ಎಂದರು. 
ಕನ್ನಡ ಕೋಗಿಲೆಗಳ ಗಾಯನ. . . 
‘ಮಾಯಾ ಕನ್ನಡಿ’ಯ ಹಾಡುಗಳಿಗೆ ಕನ್ನಡದ ಹೊಸ ಪ್ರತಿಭೆಗಳಿಗೆ ಅವಕಾಶ ನೀಡಲಾಗಿದೆ ಎಂದು ಸ್ವತಃ ಒಂದು ಹಾಡಿಗೆ ಸಾಹಿತ್ಯ ನೀಡಿರುವ ಸಂಗೀತ ನಿರ್ದೇಶಕ ಅಭಿಷೇಕ್ ಎಸ್. ಎನ್ ತಿಳಿಸಿದ್ದಾರೆ.  ಉಳಿದಂತೆ ರಜನೀಶ್ ಅಮಿನ್, ಕೀರ್ತನ್ ಭಂಡಾರಿ ಸಾಹಿತ್ಯ ಒದಗಿಸಿದ್ದಾರಂತೆ. 
ಈಗಾಗಲೆ ‘ಊರ್ವಿ’ ಸೇರಿದಂತೆ ಹಲವು ಚಿತ್ರಗಳಲ್ಲಿ ಕಾಣಿಸಿಕೊಂಡಿರುವ ಪ್ರಭು ಮುಂಡಕೂರ್ ‘ಮಾಯಾ ಕನ್ನಡಿ’ ಚಿತ್ರದಲ್ಲಿ ಕಾಲೇಜು ಯುವಕನಾಗಿ ಬಣ್ಣ ಹಚ್ಚಿದ್ದಾರೆ  “ಕಾಲೇಜ್ ಕ್ಯಾಂಪಸ್ ನಲ್ಲಿ ನಡೆಯುವ ಹಲವು ಘಟನೆಗಳು, ಬ್ಲೂ ವೇಲ್ ಗೇಮ್” ಬಗ್ಗೆ ಚಿತ್ರದಲ್ಲಿ ಹೇಳಲಾಗಿದೆ.  ಬಿಗಿಯಾದ ಹಿಡಿತವಿರುವ ನಿರೂಪಣಾ ಶೈಲಿ, ಪ್ರತಿ 10 ನಿಮಿಷಕ್ಕೂ ತಿರುವು ಪಡೆದುಕೊಳ್ಳುತ್ತ ಪ್ರೇಕ್ಷಕರ ಊಹೆಯನ್ನು ಮೀರಿರುತ್ತದೆ” ಎಂದು ಹೇಳಿದರು. 
ಇನ್ನು, ಚಿತ್ರದ ನಾಯಕಿಯರಾದ ಕಾಜಲ್ ಕುಂದರ್ ಮತ್ತು ಅನ್ವಿತಾ ಸಾಗರ್ ಕಾಲೇಜ್ ಕೌನ್ಸಿಲರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರಂತೆ.  ಕಾಜಲ್ ಈಗಾಗಲೇ ಹಿಂದಿಯ ಆರ್ಟ್ ಮೂವಿ ‘ಲೋಹರ್ ದಗಾ’ ಹಾಗೂ ಮಲಯಾಳಂನ ಕೆಲ ಚಿತ್ರಗಳಲ್ಲಿ ನಟಿಸಿದ ಅನುಭವ ಹೊಂದಿದ್ದಾರೆ.  ಅನ್ವಿತಾ ಸಾಗರ್ ಕೂಡ ತುಳು, ಮತ್ತು ಕನ್ನಡ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.  ಅನೂಪ್ ಸಾಗರ್ ಮತ್ತು ಅಶ್ವಿನ್ ಪಲ್ಲಕ್ಕಿ ಖಳನಾಯಕನ ಪಾತ್ರದಲ್ಲಿದ್ದಾರೆ.
‘ಮಾಯಾ ಕನ್ನಡಿ’ಯ ಒಳಮರ್ಮವೇನು, ಬ್ಲೂ ವೇಲ್ ಪ್ರಭಾವ ಎಷ್ಟಿದೆ ಅಥವಾ ಬ್ಲೂ ವೇಲ್ ಹೆಸರಿನಲ್ಲಿ ರಕ್ತ ಚೆಲ್ಲಾಡಿದೆಯೇ ಎಂಬ ಪ್ರಶ್ನೆಗಳಿಗೆ ಚಿತ್ರ ತೆರೆಕಂಡ ಬಳಿಕವಷ್ಟೆ ಉತ್ತರ ಸಿಗಲಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಯುಕ್ರೇನ್-ರಷ್ಯಾ ಶಾಂತಿ ಒಪ್ಪಂದ ಸನಿಹ: ಸುಳಿವು ನೀಡಿದ ಯುಕ್ರೇನ್

2026 T20 ವಿಶ್ವಕಪ್: ಕೊಲಂಬೋದಲ್ಲಿ ಫೆ.15 ರಂದು ಭಾರತ- ಪಾಕ್ ಪಂದ್ಯ

ಕಾರು ಅಪಘಾತದಲ್ಲಿ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ಸೇರಿ ಮೂವರು ಸಾವು: ಸಿಎಂ, ಡಿಸಿಎಂ ಸಂತಾಪ

CM ಬದಲಾವಣೆ ನಾಲ್ಕರಿಂದ ಐದು ಜನರ ನಡುವೆ ನಡೆದ "ರಹಸ್ಯ ಒಪ್ಪಂದ": ಡಿಕೆಶಿ​ ಸ್ಫೋಟಕ ಹೇಳಿಕೆ

ರಾಸಾಯನಿಕಗಳು, ಎಲೆಕ್ಟ್ರಾನಿಕ್ ಘಟಕಗಳ ಸುಲಭ ಲಭ್ಯತೆಯಿಂದ ಐಇಡಿ ಅಪಾಯ ಹೆಚ್ಚು: NSG

SCROLL FOR NEXT