ಜೈದ್ ಖಾನ್ 
ಸಿನಿಮಾ ಸುದ್ದಿ

ನಾನು ಇಲ್ಲಿಯವನು, ಹೀಗಾಗಿ ಕನ್ನಡದಿಂದಲೇ ನನ್ನ ಸಿನಿಪಯಣ ಆರಂಭ: ಜಮೀರ್ ಪುತ್ರ ಜೈದ್ ಖಾನ್

ರಾಜಕಾರಣಿ ಜಮೀರ್ ಅಹ್ಮದ್ ಪುತ್ರ ಜೈದ್ ಖಾನ್ ಸಿನಿಮಾ ಮೂಲಕ ತಮ್ಮದೇ ಆದ ಛಾಪು ಮೂಡಿಸಲು ನಿರ್ಧರಿಸಿದ್ದಾರೆ.,..,

ರಾಜಕಾರಣಿ ಜಮೀರ್ ಅಹ್ಮದ್ ಪುತ್ರ ಜೈದ್ ಖಾನ್ ಸಿನಿಮಾ ಮೂಲಕ ತಮ್ಮದೇ ಆದ ಛಾಪು ಮೂಡಿಸಲು ನಿರ್ಧರಿಸಿದ್ದಾರೆ, ತಮ್ಮ ಮೊದಲ ಚಿತ್ರದ ಮೂಲಕವೇ ಉತ್ತಮ ಎಂಟ್ರಿ ನೀಡಲು ಮುಂದಾಗಿದ್ದಾರೆ.
ಈಗಾಗಲೇ ಜೈದ್ ಖಾನ್ 60 ನಿರ್ದೇಶಕರನ್ನು ಭೇಟಿ ಮಾಡಿದ್ದಾರೆ, ಸದ್ಯ ನಿರ್ದೇಶಕ ಜಯತೀರ್ಥ ಅವರ ಕಥೆಗೆ ಒಪ್ಪಿಕೊಂಡಿದ್ದಾರೆ.
ಜಯತೀರ್ಥ ಅವರ ನಿರ್ದೇಶನದಲ್ಲಿ ನನ್ನ ಮೊದಲ ಚಿತ್ರ ಬರಲಿದೆ, ಒಂದು ತಿಂಗಳ ನಂತರ ಸಿನಿಮಾ ಆರಂಭವಾಗಲಿದೆ, ರಂಜಾನ್ ಮುಗಿಯುವುದನ್ನು ಕಾಯುತ್ತಿದ್ದೇನೆ, ಅದಾದ ನಂತರ ನಿರ್ದೇಶಕರ ಜೊತೆ ಕುಳಿತು ಚರ್ಚಿಸುತ್ತೇನೆ, ಮೂರು ತಿಂಗಳ ನಂತರ ಸಿನಿಮಾ ಕೈಗೆತ್ತಿಕೊಳ್ಳಲಾಗುವುದು, ಆಗಸ್ಟ್ ತಿಂಗಳಲ್ಲಿ ಸಿನಿಮಾ ಶೂಟಿಂಗ್ ಆರಂಭವಾಗಲಿದೆ ಎಂದು ಹೇಳಿದ್ದಾರೆ.
ಅನುಪಮ್ ಖೇರ್ ಅವರ ನಟನಾ ಶಾಲೆಯಲ್ಲಿ ತರಬೇತಿ ಪಡೆದಿದ್ದಾರೆ, ಎಲ್ಲಾ ನಿರ್ದೇಶಕರನ್ನು ಭೇಟಿ ಮಾಡುವಾಗ ಒಂದು ಗೌರವವಿರುತ್ತದೆ, ಆದರೆ ಅವರ ಕಥೆ ಹೊಂದಾಣಿಕೆಯಾಗುವುದಿಲ್ಲ, ನಟ ಮತ್ತು ನಿರ್ದೇಶಕ ಗಂಡ-ಹೆಂಡತಿಯಂತೆ ಇರಬೇಕು, ಆಗ ಮಾತ್ರ ಕೆಲಸ ಉತ್ತಮವಾಗಿ ಮೂಡಿ ಬರಲು ಸಾಧ್ಯ. ಕೆಲವು ನಿರ್ದೇಶಕರು ಉತ್ತಮ ಕಥೆ ಹೊಂದಿರುತ್ತಾರೆ, ಆದರೆ ಅವರಿಗೆ ಉತ್ತಮ ಪ್ರೊಡಕ್ಷನಲ್ ಬ್ಯಾಕಪ್ ಸರಿ ಇರುವುದಿಲ್ಲ, ಪ್ರೊಡಕ್ಷನ್ ಬಗ್ಗೆ ನನಗೆ ಹೆಚ್ಚಿನ ಅರಿವಿಲ್ಲ,
ಬೆಲ್ ಬಾಟಮ್ ಗಿಂತ ಮುಂಚೆಯೇ ಜಯತೀರ್ಥ ಅರ ಬಗ್ಗೆ ಕೇಳಿದ್ದೆ, ಆದರೆ ಅವರನ್ನು ಭೇಟಿ ಮಾಡಿರಲಿಲ್ಲ, ಅವರೊಬ್ಬ ಅದ್ಭುತ ವ್ಯಕ್ತಿ, ಅವರನ್ನು ಭೇಟಿ ಮಾಡಿದಾಗ ನನ್ನನ್ನು ಅವರು ತುಂಬಾ ಚೆನ್ನಾಗಿ  ಅರ್ಥ ಮಾಡಿಕೊಂಡಿದ್ದಾರೆ. 
ಕಳೆದ ನಾಲ್ಕು ತಿಂಗಳಿಂದ ಬಾಡಿ ಬಿಲ್ಡಿಂಗ್ ಆರಂಭಿಸಿದ್ದಾರೆ, ಮಗನನ್ನು ಬಾಲಿವುಡ್ ನಲ್ಲಿ ಲಾಂಚ್ ಮಾಡಲು ಎಲ್ಲಾ ರೀತಿಯ ಪ್ರಯತ್ನ ನಡೆಸಲಾಗಿದೆ. ಆದರೆ ನಾನು ಕನ್ನಡ ಇಂಡಸ್ಟ್ರಿ ಮೂಲಕ ಪಾದಾರ್ಪಣೆ ಮಾಡಲು ಮುಂದಾಗಿದ್ದಾರೆ. ನಾನು ಇಲ್ಲಿಗೆ ಸೇರಿದವನಾಗಿದ್ದೇನೆ, ನಾನು ಕನ್ನಡ ಸಿನಿಮಾಗಳನ್ನು ನೋಡುತ್ತಿರುತ್ತೇನೆ, ಉತ್ತಮ ಕಥೆಯುಳ್ಳ  ಸಿನಿಮಾದಲ್ಲಿ ನಟಿಸಬೇಕೆಂಬ ಆಸೆಯಿದೆ, ನಾನು ಎಲ್ಲಿಂದ ಬಂದೆ ನನ್ನ ಹಿನ್ನೆಲೆ ಏನು ಎಂಬುದು ಮುಖ್ಯವಲ್ಲ, ನನ್ನ ಸಿನಿಮಾ ನೋಡಿ ನನ್ನ ಬಗ್ಗೆ ಜನ ಮಾತನಾಡಬೇಕು ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಕಾಂಗ್ರೆಸ್‌ನ ಆಂತರಿಕ ಕಲಹದಿಂದ 'ಮೂರನೇ ಮುಖ್ಯಮಂತ್ರಿ' ಬಂದರೂ ಅಚ್ಚರಿ ಇಲ್ಲ: ಬಿ.ವೈ. ವಿಜಯೇಂದ್ರ

ಯುವ ಜನತೆಯ ಆಕ್ರೋಶ ತಡೆಯಲು ಸಾಧ್ಯವಿಲ್ಲ, ಇಡೀ ದೇಶ ಜಂತರ್ ಮಂತರ್ ಆಗಲಿದೆ: ಪ್ರಕಾಶ್ ರಾಜ್

'ಅಧರ್ಮ ಎಸಗಿದವರಿಗೆ ಶಿಕ್ಷೆ ನೀಡುವುದೂ ಧರ್ಮವೇ'; ಮೀರತ್ ಹತ್ಯೆ ಪ್ರಕರಣ ಶಿಕ್ಷೆ ಪ್ರಕಟ ವೇಳೆ ನ್ಯಾಯಾಧೀಶರಿಂದ ಭಗವದ್ಗೀತೆ ಉಲ್ಲೇಖ!

ಟೀಂ ಇಂಡಿಯಾ ಸೆಲೆಕ್ಷನ್ ಕಮಿಟಿ ಅಧ್ಯಕ್ಷರ ಆಯ್ಕೆ: ಮೇಜರ್ ಟ್ವಿಸ್ಟ್, ರೇಸ್ ನಿಂದ ಪಾರ್ಥಿವ್‌ ಪಟೇಲ್ ಔಟ್? 24 ಟೆಸ್ಟ್‌ ಅನುಭವದ ಮಾಜಿ ಕ್ರಿಕೆಟಿಗನ ಹೆಸರು ಮುಂಚೂಣಿಗೆ!

ಗಂಡನ ಕೊಂದು ನೀಲಿ ಡ್ರಮ್ ನಲ್ಲಿ ಮುಚ್ಚಿಟ್ಟ ಕೇಸ್: ಪತ್ನಿ ಮುಸ್ಕಾನ್, ಪ್ರಿಯಕರ ಸಾಹಿಲ್ ಗೆ ಮರಣದಂಡನೆ ಶಿಕ್ಷೆ!