ಶಾರ್ದೂಲ ಸಿನಿಮಾ ಪೋಸ್ಟರ್ 
ಸಿನಿಮಾ ಸುದ್ದಿ

ನಿಜಕ್ಕೂ ದೆವ್ವವಿದೆಯೇ? 'ಶಾರ್ದೂಲ'ದಲ್ಲಿ ಭೂತ ಹುಡುಕಿ ಹೊರಟ ನಿರ್ದೇಶಕ ಅರವಿಂದ್ ಕೌಶಿಕ್

ಚೇತನ್ ಚಂದ್ರ ಮತ್ತು ಕೃತಿಕಾ ಅಭಿನಯದ ಶಾರ್ದೂಲ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ಅರವಿಂದ್ ಕೌಶಿಕ್ ನಿರ್ದೇಶಿಸಿದ್ದಾರೆ. ನಿಜಕ್ಕೂ ದೆವ್ವ ಇದೆಯೇ ಅಥವಾ ಕೇವಲ ...

ಚೇತನ್ ಚಂದ್ರ ಮತ್ತು ಕೃತಿಕಾ ಅಭಿನಯದ ಶಾರ್ದೂಲ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ಅರವಿಂದ್ ಕೌಶಿಕ್ ನಿರ್ದೇಶಿಸಿದ್ದಾರೆ. ನಿಜಕ್ಕೂ ದೆವ್ವ ಇದೆಯೇ ಅಥವಾ ಕೇವಲ ಕಲ್ಪನೆಯೇ ಎಂಬುದನ್ನು ಹುಡುಕಲು ನಿರ್ದೇಶಕರು ಸಿನಿಮಾದಲ್ಲಿ ಪ್ರಶ್ನಿಸಿದ್ದಾರೆ.
ಸತ್ವ ಮೀಡಿಯಾ ಅಡಿಯಲ್ಲಿ ಅರವಿಂದ್ ಕೌಶಿಕ್ ನಿರ್ದೇಶನ ಮಾಡುತ್ತಿರುವ ಹೊಸ ಸಿನಿಮಾ ಶಾರ್ದೂಲ. ಈಗಾಗಲೇ ಚಿತ್ರೀಕರಣವನ್ನು ಮುಗಿಸಿ ಬಿಡುಗಡೆಗೆ ಸಿದ್ದವಾಗಿದೆ,
ದಿನ ನಿತ್ಯದ ಆಗುಹೋಗುಗಳ ಕುರಿತಾಗಿ ಅರಿವಿಟ್ಟುಕೊಂಡಿರುವ ಮನುಷ್ಯ ಎದ್ದಾಗಿನಿಂದ ತಾನು ನಿರ್ವಹಿಸುವ ಪ್ರತಿ ಕೆಲಸದಲ್ಲಿಯೂ ತನ್ನದೇ ಆದ ನಿಯಂತ್ರಣವನ್ನು ಹೊಂದಿರುತ್ತಾನೆ. ಅದರ ಬಗ್ಗೆ ಯಾರಿಗೂ ಅಂತಹ ಕೌತುಕತೆಗಳೇನು ಇರಲಿಕಿಲ್ಲ.
ಆದರೆ ಹೊಸ ವಾತಾವರಣಕ್ಕೆ ಮನುಷ್ಯ ಪ್ರಯಾಣ ಬೆಳೆಸಿದಾಗ ಆತನಲ್ಲಿ ಸಾಕಷ್ಟು ಬದಲಾವಣೆಗಳು ಆಗುತ್ತದೆ. ಪ್ರತಿ ನಿಮಿಷವೂ ಆತನಲ್ಲಿ ಹೊಸ ಹೊಸ ಅನುಭವಗಳಾಗುತ್ತದೆ. ಅಂತಹ ಸೂಕ್ಷ್ಮ ಎಳೆಯನ್ನಿಟ್ಟುಕೊಂಡು ಶಾರ್ದೂಲ ಸಿನಿಮಾವನ್ನು ತಯಾರಿಸಲಾಗಿದೆಯಂತೆ. ಈ ಚಿತ್ರಕ್ಕೆ ರವಿತೇಜಾ ಮತ್ತು ಚೇತನ್ ಚಂದ್ರ ನಾಯಕರಾಗಿದ್ದು, ಐಶ್ವರ್ಯಾ ಮತ್ತು ಕೃತಿಕಾ ರವೀಂದ್ರ ಅವರಿಗೆ ಜತೆಯಾಗಿದ್ದಾರೆ. 
ಇನ್ನು ಈ ಸಿನಿಮಾವನ್ನು ಅರವಿಂದ್ ಕೌಶಿಕ್ ತಮ್ಮದೇ ಬ್ಯಾನರ್ ನಲ್ಲಿ ಸ್ನೇಹಿತ ರೋಹಿತ್ ಕಲ್ಯಾಣ್ ಸಹಭಾಗಿತ್ವದಲ್ಲಿ ನಿರ್ಮಾಣವನ್ನು ಮಾಡಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT