ಸಿನಿಮಾ ಸುದ್ದಿ

ಇದು ಸಾಮಾನ್ಯ ಲವ್ ಸ್ಟೋರಿಯಲ್ಲ: ರೇಮೊ ಸಿನಿಮಾ ಬಗ್ಗೆ ಪವನ್ ಒಡೆಯರ್ ಮಾತು

Shilpa D
ಪವನ್ ಒಡೆಯರ್ ಮತ್ತೆ ರೋಮ್ಯಾಂಟಿಕ್ ಕಥೆಯೊಂದಿಗೆ ನಿರ್ದೇಶನಕ್ಕಿಳಿದಿದ್ದಾರೆ,  ಗೂಗ್ಲಿ ನಿರ್ದೇಶಕ ರೇಮೊ ಎಂಬ ಟೈಟಲ್ ಮೂಲಕ ಸಿನಿಮಾ ನಿರ್ದೇಶಿಸುತ್ತಿದ್ದು, ಸೋಮವಾರದಿಂದ ಶೂಟಿಂಗ್ ಆರಂಭವಾಗಿದೆ.
ಇದೊಂದು ಪೂರ್ಣ ಪ್ರಮಾಣದ ಲವ್ ಸ್ಟೋರಿ, ನಟಸಾರ್ವಭೌಮ, ರಣವಿಕ್ರಮ ಅಥವಾ ಜೆಸ್ಸಿ ಸಿನಿಮಾಗಳಲ್ಲಿನ ಪ್ರೇಮಕಥೆಗಾಗಿ ಪ್ರೇಕ್ಷಕರಿಂದ ಉತ್ತಮ ಪ್ರಶಂಸೆ ವ್ಯಕ್ತವಾಗಿತ್ತು.
ಗೂಗ್ಲಿ ನಂತರ ಮತ್ತೊಂದು ಪ್ರೇಮಕಥೆಯೊಂದಿಗೆ ಮತ್ತೆ ಸಿನಿಮಾ ಮಾಡಬೇಕು ಎಂದು ಅಭಿಮಾನಿಗಳು ಒತ್ತಾಯಿಸಿದ್ದರು. ರೇಮೊದಲ್ಲಿ ಇಶಾನ್ ನಾಯಕನಾಗಿದ್ದಾರೆ. ಚುಟು ಚುಟು ಹುಡುಗಿ ಆಶಿಕಾ ರಂಗನಾಥ್ ನಾಯಕಿಯಾಗಿದ್ದಾರೆ. ಇಬ್ಬರ ಯಂಗ್ ಜೋಡಿ ತೆರೆ ಮೇಲೆ ಮುದ್ದಾಗಿ ಕಾಣುತ್ತದೆ
ದುಬೈ ನಲ್ಲಿ ನಡೆದ ಸೈಮಾ ಪ್ರಶಸ್ತಿ ಕಾರ್ಯಕ್ರಮದಲ್ಲಿ ಇಷಾನ್ ಭೇಟಿಯಾದೆ, ಅವರ ಜೊತೆ ಚರ್ಚಿಸಿದೆ ನಾನು ಬರೆದ ಕಥೆಗ ಆತ ಸೂಕ್ತ ಎಂದು ಭಾವಿಸಿದೆ.  ಆಕ್ಷನ್ ರೋಮ್ಯಾಂಟಿಕ್ ಕಥೆಗೆ ಇಷಾನ್ ಸೂಕ್ತ ಎನಿಸಿತು. ಇಷಾನ್ ಗೂ ಕೂಡಕಥೆ ಇಷ್ಟವಾಯಿತು. ಕಥೆ ಕೇಳಿ ನಿರ್ಮಾಪಕ ಸಿ ಮನೋಹರ್ ಚಿತ್ರ ನಿರ್ಮಿಸಲು ಮುಂದಾಗಿದ್ದಾರೆ, ಸಂಗೀತ, ವೈದಿ ಕ್ಯಾಮರಾ, ಕೆ ಎಂ ಪ್ರಕಾಶ್ ಸಂಕಲನ, ಕರಣ್ ಕಲಾ ನಿರ್ದೇಶಕ ಇರಲಿದೆ. 
ಇಲ್ಲಿ ಸಿನಿಮಾದ ನಾಯಕನ ಹೆಸರು ರೇವಂತ್, ನಾಯಕಿ ಮೋಹನಾ ಇಬ್ಬರ ಲವ್ ಸ್ಟೋರಿಗೆ ಅವರ ಹೆಸರಿನ ಮೊದಲ ಅಕ್ಷರವನ್ನು ತೆಗೆದುಕೊಂಡು ಟೈಟಲ್ ಮಾಡಲಾಗಿದೆ. ಹಾಗೆಂದ ಮಾತ್ರಕ್ಕೆ 'ರೇಮೊ' ಎನ್ನುವುದರ ಅರ್ಧ ಇಷ್ಟು ಮಾತ್ರ ಅಲ್ಲವಂತೆ. ಇದೇ ಹೆಸರನ್ನು ಇಡಲು, ಸಿನಿಮಾದಲ್ಲಿ ತುಂಬ ಕಾರಣಗಳಿವೆ ಎನ್ನುತ್ತಾರೆ ನಿರ್ದೇಶಕ ಪವನ್ ಒಡೆಯರ್.
SCROLL FOR NEXT