'ಬಾಹುಬಲಿ' ನಟನ ಪತ್ನಿ ನೇಣಿಗೆ ಶರಣು! 
ಸಿನಿಮಾ ಸುದ್ದಿ

'ಬಾಹುಬಲಿ' ನಟನ ಪತ್ನಿ ನೇಣಿಗೆ ಶರಣು!

ರಾಜಮೌಳಿ ಅವರ "ಬಾಹುಬಲಿ"ಯಲ್ಲಿ ಸಣ್ಣ ಪಾತ್ರವೊಂದರಲ್ಲಿ ನಟಿಸಿದ್ದ ಪ್ರಖ್ಯಾತ ತೆಲುಗು ಕಿರುತೆರೆ ಕಲಾವಿದ ಮಧು ಪ್ರಕಾಶ್ ಅವರ ಪತ್ನಿ ನೇಣಿಗೆ ಶರಣಾಗಿದ್ದಾರೆ.

ಹೈದರಾಬಾದ್: ರಾಜಮೌಳಿ ಅವರ "ಬಾಹುಬಲಿ"ಯಲ್ಲಿ ಸಣ್ಣ ಪಾತ್ರವೊಂದರಲ್ಲಿ ನಟಿಸಿದ್ದ ಪ್ರಖ್ಯಾತ ತೆಲುಗು ಕಿರುತೆರೆ ಕಲಾವಿದ ಮಧು ಪ್ರಕಾಶ್ ಅವರ ಪತ್ನಿ ನೇಣಿಗೆ ಶರಣಾಗಿದ್ದಾರೆ.
ಮಧು ಪ್ರಕಾಶ್ ಅವರ ಪತ್ನಿ ಭಾರತಿ ಮಂಗಳವಾರ ಹೈದರಾಬಾದ್ ನ ತಮ್ಮ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಪತಿ ಮಧು ಅವರ ಜೀವನ ಶೈಲಿ ವಿಚಾರವಾಗಿ ಗಂಡ-ಹೆಂಡತಿಯ ನಡುವೆ ಆಗಾಗ ಜಗಳವಾಗುತ್ತಿತ್ತು ಎನ್ನಲಾಗಿದೆ. ಅಲ್ಲದೆ ಪತಿಗೆ ಅಕ್ರಮ ಸಂಬಂಧವಿದ್ದ ಬಗ್ಗೆ ಭಾರತಿ ಶಂಕೆ ವ್ಯಕ್ತಪಡಿಸಿದ್ದರು ಎಂದೂ ಹೇಳಲಾಗಿದೆ.
2015ರಲ್ಲಿ  ಮಧು ಹಾಗೂ ಭಾರತಿ ವಿವಾಹವಾಗಿದ್ದು ಭಾರತಿ ಹೈದರಾಬಾದ್ ಖಾಸಗಿ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ನಟ ಪ್ರತಿದಿನ ತಡವಾಗಿ ಮನೆಗೆ ಬರುತ್ತಿದ್ದದ್ದು ಪತಿ-ಪತ್ನಿಯರ ಜಗಳಕ್ಕೆ ಪ್ರಮುಖ ಕಾರಣವಾಗಿತ್ತು.
ಮಂಗಳವಾರ ಸಹ ಭಾರತಿ ಪತಿಗೆ ಬೇಗ ಮನೆಗೆ ಬರುವಂತೆ ಒತ್ತಾಯಿಸಿದ್ದಾರೆ. ಬೆಳಿಗ್ಗೆ ಹತ್ತಕ್ಕೆ ಶೂಟಿಂಗ್ ಗೆ ಹೊರಟಿದ್ದ ಮಧು ರಾತ್ರಿ ಏಳರ ಸುಮಾರಿಗೆ ಜಿಮ್ ಮುಗಿಸಿಕೊಂಡು ಮನೆಗೆ ಮರಳುವಷ್ಟರಲ್ಲಿ ಭಾರತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಆತ್ಮಹತ್ಯೆಗೆ ಮುನ್ನ "ತಾನು ನೇಣು ಹಾಕಿಕೊಳ್ಳುತ್ತೇನೆ" ಎಂದು ಪತಿ ಮಧು ಅವರಿಗೆ ಭಾರತಿ ಸಂದೇಶ ರವಾನಿಸಿದ್ದಾರೆ. ಆದರೆ ನಟ ತನ್ನ ಪತ್ನಿ ಮಾತಿಗೆ ಖಂಡಿಸಿ ಉತ್ತರಿಸಿದ್ದಾರೆ.
ತನಿಖೆ ಕೈಗೊಂಡಿರುವ ಪೊಲೀಸರು ಮಧು ಹೇಳಿಕೆಯನ್ನು ದಾಖಲಿಸಿಕೊಂಡಿದ್ದಾರೆ. ಮರಣೋತ್ತರ ಪರೀಕ್ಷೆಗಾಗಿ ಮೃತದೇಹವನ್ನು ಓಸ್ಮಾನಿಯ ಜನರಲ್‌ ಆಸ್ಪತ್ರೆಗೆ ರವಾನಿಸಲಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಅನಕ್ಷರಸ್ಥ' ಪ್ರಧಾನಿಯಿಂದಾಗಿ ಪೆಟ್ರೋಲ್-ಡೀಸೆಲ್ ಮತ್ತು ಅನಿಲ ಬೆಲೆಗಳು ಹೆಚ್ಚಳವಾಗಿದೆ: ಸಿಎಂ ಸಿದ್ದರಾಮಯ್ಯ

IPL Valuation Chart: 1.63 ಲಕ್ಷ ಕೋಟಿಗೇರಿದ ಐಪಿಎಲ್ ಮೌಲ್ಯ, CSK ಹಿಂದಿಕ್ಕಿ ಅಗ್ರಸ್ಥಾನಕ್ಕೇರಿದ KKR, 'ಕಿಂಗ್' ವಿರಾಟ್ ಕೊಹ್ಲಿ ಗಳಿಸಿದ್ದೆಷ್ಟು ಗೊತ್ತಾ?

ಮಾರ್ತಾಂಡ ಆನೆ ಕೊಂದ ಕಂಜನ್ ದಸರಾದಿಂದ ಶಾಶ್ವತ ನಿಷೇಧ: ಸಚಿವ ಈಶ್ವರ್ ಖಂಡ್ರೆ ಆದೇಶ

ಬೋಗಸ್ ದಾಖಲೆ ಸೃಷ್ಟಿಸಿ 23 ಕೋಟಿ ರೂ ಲೂಟಿ; ಬೆಳಗಾವಿ ಕೊಳಚೆ ನಿರ್ಮೂಲನಾ ಮಂಡಳಿಗೆ ಸೇರಿದ 8 ಕಡೆ ಲೋಕಾಯುಕ್ತ ದಾಳಿ!

ವಚನಾನಂದಶ್ರೀ ವಿರುದ್ಧದ Pocso ಪ್ರಕರಣ: ತನಿಖಾಧಿಕಾರಿ PSI ಮಂಜುಳಾ ದಿಢೀರ್ ವರ್ಗಾವಣೆ!

SCROLL FOR NEXT