ಸಿನಿಮಾ ಸುದ್ದಿ

ಬಹುಭಾಷಾ ನಟಿ  ನಮಿತಾ ಬಿಜೆಪಿಗೆ ಸೇರ್ಪಡೆ

Nagaraja AB

ಚೆನ್ನೈ:  ದಕ್ಷಿಣ ಭಾರತದ ಖ್ಯಾತ ನಟಿ  ನಮಿತಾ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಬಿಜೆಪಿ ಕಾರ್ಯಾಧ್ಯಕ್ಷ ಜೆ. ಪಿ. ನಡ್ಡಾ, ಬಿಜೆಪಿ ಪ್ರಧಾನ ಕಾರ್ಯದರ್ಶಿ ಮುರಳೀಧರ್ ರಾವ್ ಸಮ್ಮುಖದಲ್ಲಿ ಅವರು ಶನಿವಾರ ನಡೆದ ಸಮಾರಂಭದಲ್ಲಿ ಬಿಜೆಪಿ ಪಕ್ಷವನ್ನು ಸೇರಿದರು.

ರವಿಚಂದ್ರನ್ ಅಭಿಯನದ ನೀಲಕಂಠದ ಮೂಲಕ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟಿದ್ದ ನಮಿತಾ, ಬಳಿಕ ದರ್ಶನ್ ಜೊತೆಗೆ ಇಂದ್ರ, ಹೂ, ನಮಿತಾ ಐ ಎಲವ್ ಯೂ, ಬೆಂಕಿ ಬಿರುಗಾಳಿಯಲ್ಲಿ ಅಭಿನಯಿಸಿದ್ದಾರೆ. ಕನ್ನಡ , ತೆಲುಗು, ತಮಿಳು, ಮಲೆಯಾಳಂ ಸೇರಿದಂತೆ ಒಟ್ಟು 40 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಮಿತಾ ನಟಿಸಿದ್ದಾರೆ.

ಇದಕ್ಕೂ ಮುನ್ನ ನಟ ರಾಧಾರವಿ ಅವರು ಕೂಡಾ ಬಿಜೆಪಿಗೆ ಸೇರ್ಪಡೆಯಾದರು. ಚಲನಚಿತ್ರ ಸಮಾರಂಭವೊಂದರ ವೇಳೆ ನಯನತಾರ ಕುರಿತ ಹೇಳಿಕೆಗಳಿಂದ ಇತ್ತೀಚೆಗೆ ಪ್ರತಿಪಕ್ಷ ಡಿಎಂಕೆ ಯಿಂದ ರಾಧಾರವಿ ಅವರನ್ನು ಉಚ್ಛಾಟಿಸಲಾಗಿತ್ತು.

 ರಾಧಾರವಿ ಅವರು ಎಐಎಡಿಎಂಕೆಗೆ ಗುಡ್‍ ಬೈ ಹೇಳಿ ಡಿಎಂಕೆ ಸೇರಿಕೊಂಡಿದ್ದರು. ಅಲ್ಲೂ ಸಹ ಅವರನ್ನು ಹೊರ ಹಾಕಿದ ನಂತರ ಇದೀಗ ಬಿಜೆಪಿ ಸೇರಿದ್ದಾರೆ. 

SCROLL FOR NEXT