ಗಣೇಶ್ 
ಸಿನಿಮಾ ಸುದ್ದಿ

'ಟ್ರಿಪಲ್ ರೈಡಿಂಗ್' ಗೆ ಸಿದ್ದವಾದ ಗಣೇಶ್!

ಪ್ರಸ್ತುತ ಯೋಗರಾಜ್ ಭಟ್ರ "ಗಾಳಿಪಟ ೨" ಚಿತ್ರದ ಶೂಟಿಂಗ್ ನಲ್ಲಿ ತೊಡಗಿರುವ ಗೋಲ್ಡನ್ ಸ್ಟಾರ್ ಗಣೇಶ್ ತಮ್ಮ ಮುಂದಿನ ಯೋಜನೆ ಹೊರಹಾಕಿದ್ದಾರೆ.  ವಿನೋದ್ ಪ್ರಭಾಕರ್ ಅಭಿನಯದ "ರಗಡ್" ಚಿತ್ರದ ಮೂಲಕ ನಿರ್ದೇಶಕರಾಗಿರುವ ಮಹೇಶ್ ಗೌಡ ಅವರೊಂದಿಗೆ "ಮುಂಗಾರುಮಳೆ" ನಟ ಕೆಲಸ ಮಾಡಲಿದ್ದಾರಂತೆ. 

ಪ್ರಸ್ತುತ ಯೋಗರಾಜ್ ಭಟ್ರ "ಗಾಳಿಪಟ ೨" ಚಿತ್ರದ ಶೂಟಿಂಗ್ ನಲ್ಲಿ ತೊಡಗಿರುವ ಗೋಲ್ಡನ್ ಸ್ಟಾರ್ ಗಣೇಶ್ ತಮ್ಮ ಮುಂದಿನ ಯೋಜನೆ ಹೊರಹಾಕಿದ್ದಾರೆ.  ವಿನೋದ್ ಪ್ರಭಾಕರ್ ಅಭಿನಯದ "ರಗಡ್" ಚಿತ್ರದ ಮೂಲಕ ನಿರ್ದೇಶಕರಾಗಿರುವ ಮಹೇಶ್ ಗೌಡ ಅವರೊಂದಿಗೆ "ಮುಂಗಾರುಮಳೆ" ನಟ ಕೆಲಸ ಮಾಡಲಿದ್ದಾರಂತೆ. ಈ ಚಿತ್ರವು ರಾಮ್‌ಗೋಪಾಲ್ ಮತ್ತು ಅರುಣ್ ಕುಮಾರ್ ಅವರ ನಿರ್ಮಾಣದಲ್ಲಿ ಬರುತ್ತಿದ್ದು ಇದೊಂದು ರೋಮ್ಯಾಂಟಿಕ್ ಕಾಮಿಡಿ ಡ್ರಾಮಾ ಆಗಿರಲಿದೆ ಎ<ದು ಹೇಳಲಾಗುತ್ತಿದೆ.

ಇನ್ನು ಚಿತ್ರಕ್ಕಾಗಿ ಆಕರ್ಷಕ ಶೀರ್ಷಿಕೆಯೊಂದನ್ನು ಅನ್ವೇಷಿಸಲಾಗಿದೆ. ಅದುವೇ "ಟ್ರಿಪಲ್ ರೈಡಿಂಗ್" ಎಂದಾಗಿದೆ. ಆದರೆ ನಿರ್ಮಾಪಕರು ಇದುವರೆಗೆ ಶೀರ್ಷಿಕೆ ಬಗ್ಗೆ ಅಧಿಕೃತ ಪ್ರಕಟಣೆ ಕೊಟ್ಟಿಲ್ಲ.ಮೂಲಗಳ ಪ್ರಕಾರ ಚಿತ್ರದಲ್ಲಿ ಮೂವರು ನಾಯಕಿಯರಿರಲಿದ್ದಾರೆ. ಸಾಧು ಕೋಕಿಲಾ, ರಂಗಾಯಣ ರಘು, ರವಿಶಂಕರ್ ಗೌಡ, ಕುರಿ ಪ್ರತಾಪ್, ಮತ್ತು ಹಿರಿಯ ನಟರಾದ ಉಮೇಶ್, ಡಿಂಗ್ರಿ ನಾಗರಾಜ್ ಅವರನ್ನೂ ಸಹ ತೆರೆ ಮೇಲೆ ತರಲು ನಿರ್ದೇಶಕರು ಮುಂದಾಗಿದ್ದಾರೆ ಎನ್ನಲಾಗಿದೆ.

ಪ್ರಸ್ತುತ ಚಿತ್ರದ ಚಿತ್ರಕಥೆ ಸಂಬಂಧ ಕೆಲಸ ಮಾಡುತ್ತಿರುವ ನಿರ್ದೇಶಕರು,"ಗಾಳಿಪಟ ೨" ಚಿತ್ರದ ಶೂಟಿಂಗ್ ಮುಗಿದ ಬಳಿಕವೇ ಗಣೇಶ್ 2020 ರಲ್ಲಿ ಜನವರಿ ಅಂತ್ಯದ ವೇಳೆಗೆ ಈ ಚಿತ್ರದ ಶೂಟಿಂಗ್ ಪ್ರಾರಂಭಿಸಲಿದ್ದಾರೆ.ಆದರೆ ಉಳಿದ ನಟ ನಟಿಯರು ಇದಾಗಲೇ ಡಿಸೆಂಬರ್ 2ರಿಂದ ಶೂಟಿಂಗ್ ನಲ್ಲಿ ತೊಡಗಿದ್ದಾರೆ.ಚಿತ್ರತಂಡ ಪ್ರಸ್ತುತ ಕುದುರೆಮುಖದಲ್ಲಿ ಕ್ಯಾಂಪ್ ಹಾಕಿದ್ದು ಅಲ್ಲಿ ಅವರು ಜನವರಿ 8 ರವರೆಗೆ ಉಳಿಯುವ ಸಾಧ್ಯತೆಯಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಪಕ್ಷದ ಹಿತಕ್ಕಾಗಿ ನಾಗೇಂದ್ರ ಯಾವುದೇ ತ್ಯಾಗಕ್ಕೂ ಸಿದ್ಧ, ಆದ್ರೆ...: ಹೈಕಮಾಂಡ್ ಭೇಟಿ ಬಳಿಕ CM ಡಿಕೆ ಶಿವಕುಮಾರ್

Nepal Floods: ಭೀಕರ ಪ್ರವಾಹದಲ್ಲಿ 30 ದೇಶಗಳ ನಾಗರೀಕರು ನಾಪತ್ತೆ, ಅಮೆರಿಕದವರೇ ಅತೀ ಹೆಚ್ಚು!

Yash’s Toxic: ನೆಗೆಟಿವ್ ರಿವ್ಯೂ ನಡುವೆ 'ರೇಟಿಂಗ್' ತೆಗೆದುಹಾಕಿದ ಬುಕ್ ಮೈ ಶೋ; ನಿರೀಕ್ಷಿತ ಕಲೆಕ್ಷನ್ ಇಲ್ವಾ? ನೆಟ್ಟಿಗರಿಂದ ತರಾಟೆ!

‘ಬರೆಯೋದೊಂದು, ಶೂಟ್ ಮಾಡೋದು ಇನ್ನೊಂದು’: ಟಾಕ್ಸಿಕ್ ರಿಲೀಸ್ ಬೆನ್ನಲ್ಲೇ ಗೀತು ಮೋಹನ್‌ದಾಸ್ ಹಳೆ ವಿಡಿಯೋ ವೈರಲ್; ಅದಕ್ಕೇನೆ ಸಿನಿಮಾ ಹೀಗಿದೆ ಎಂದ ನೆಟ್ಟಿಗರು!

"RSS ನಲ್ಲಿ ಜೆನ್ ಝೀಗಳೇ ಅತಿ ದೊಡ್ಡ ಸಂಖ್ಯೆ": ಬಿಜೆಪಿ ಉಪಾಧ್ಯಕ್ಷ ರಾಮ್ ಮಾಧವ್