ಸುಮಂತ್ ಶೈಲೇಂದ್ರ 
ಸಿನಿಮಾ ಸುದ್ದಿ

'ಗೋವಿಂದಾ ಗೋವಿಂದಾ' ಎಂದು ಹಾಡುತ್ತಿರುವ ಸುಮಂತ್ ಶೈಲೇಂದ್ರ

"ದಿಲ್ವಾಲಾ" ಖ್ಯಾತಿಯ  ಸುಮಂತ್ ಶೈಲೇಂದ್ರ ಬಹುದೀರ್ಘ ಕಾಲದ ವಿರಾಮದ ಬಳಿಕ ಮತ್ತೆ ತೆರೆ ಮೇಲೆ ಬರುತ್ತಿದ್ದಾರೆ. ಈ ಬಾರಿ ಅವರು "ಗೋವಿಂದಾ ಗೋವಿಂದಾ" ಎಂಬ ಚಿತ್ರದ ಮೂಲಕ ಸ್ಯಾಂಡಲ್ ವುಡ್ ಮರುಪ್ರವೇಶಕ್ಕೆ ಸಿದ್ದವಾಗಿದ್ದಾರೆ. ಇದು ಅವರ ವಿವಾಹದ ಬಳಿಕ ತೆರೆ ಕಾಣಲಿರುವ ಮೊದಲ ಕಮರ್ಷಿಯಲ್ ಎಂಟರ್ಟೈನರ್ ಎಂಬುದು ಗಮನಾರ್ಹ.

"ದಿಲ್ವಾಲಾ" ಖ್ಯಾತಿಯ  ಸುಮಂತ್ ಶೈಲೇಂದ್ರ ಬಹುದೀರ್ಘ ಕಾಲದ ವಿರಾಮದ ಬಳಿಕ ಮತ್ತೆ ತೆರೆ ಮೇಲೆ ಬರುತ್ತಿದ್ದಾರೆ. ಈ ಬಾರಿ ಅವರು "ಗೋವಿಂದಾ ಗೋವಿಂದಾ" ಎಂಬ ಚಿತ್ರದ ಮೂಲಕ ಸ್ಯಾಂಡಲ್ ವುಡ್ ಮರುಪ್ರವೇಶಕ್ಕೆ ಸಿದ್ದವಾಗಿದ್ದಾರೆ. ಇದು ಅವರ ವಿವಾಹದ ಬಳಿಕ ತೆರೆ ಕಾಣಲಿರುವ ಮೊದಲ ಕಮರ್ಷಿಯಲ್ ಎಂಟರ್ಟೈನರ್ ಎಂಬುದು ಗಮನಾರ್ಹ.

ತಿಲಕ್ ನಿರ್ದೇಶನದ ಈ ಚಿತ್ರದ ಚಿತ್ರೀಕರಣ ಕಳೆದ ಹತ್ತು ದಿನಗಳ ಹಿಂದೆ ಕೈವಾರದಲ್ಲಿ ಪ್ರಾರಂಭವಾಗಿದೆ.

ಲವ್ ಥ್ರಿಲ್ಲರ್ ಕಥಾನಕವಾಗಿರುವ ಈ ಚಿತ್ರದ ಕಥೆಯನ್ನು ತೆಲುಗಿನ ಬ್ರೋಚೆವಾರೆವರುರಾ" ಚಿತ್ರದಿಂಡ ತೆಗೆದುಕೊಳ್ಲಲಾಗಿದೆಯಂತೆ. ಆದರೆ ಕನ್ನಡ ಆವೃತ್ತಿಗೆ ಸ್ಥಳೀಯ ಟಚ್ ನೀಡಲು ಅನೇಕ ಬದಲಾವಣೆಗಳನ್ನು ಮಾಡಿಕೊಳ್ಲಲಾಗಿದೆ ಎಂದು ಚಿತ್ರತಂಡ ಹೇಳಿದೆ.

ಶೈಲೇಂದ್ರ ಬಾಬು ಮತ್ತು ರವಿ ಆರ್ ಗರಿಣಿ ಜಂಟಿಯಾಗಿ ನಿರ್ಮಿಸಿರುವ ಈ ಚಿತ್ರದಲ್ಲಿ ಬಹುತಾರಾಂಗಣವಿರಲಿದೆ.ಸುಮಂತ್ ಈ ಚಿತ್ರದಲ್ಲಿ ವಿದ್ಯಾರ್ಥಿಯ ಪಾತ್ರವಹಿಸಲಿದ್ದಾರೆ. ಜತೆಗೆ "ಜಾಕಿ" ಖ್ಯಾತಿಯ ಭಾವನಾ ಹಾಗೂ ಕವಿತಾ ಗೌಡ ನಾಯಕಿಯರಾಗಿದ್ದಾರೆ.ನಟ ಪ್ರದೀಪ್ ರಾಜ್ ಪಾತ್ರವರ್ಗದ ಬಾಗವಾಗಿದ್ದಾರೆ.

ಕವಿತಾ ಗೌಡ ತುಳಿವಿನಲ್ಲಿ ಜನಪ್ರಿಯವಾಗಿರುವ ನಟಿ. ಕಡೆಯ ಬಾರಿಗೆ "ಗಿರ್ಗಿಟ್ಲೆ" ಚಿತ್ರದಲ್ಲಿ ಕಾಣಿಸಿಕೊಂಡಿದ್ದರು.ಹಿತೇಶ್ "ಗೋವಿಂದಾ ಗೋವಿಂದಾ" ಚಿತ್ರಕ್ಕಾಗಿ ಇದೇ ಮೊದಲ ಬಾರಿಗೆ ಸಂಗೀತ ನಿರ್ದೇಶಕರಾಗುತ್ತಿದ್ದಾರೆ. ಕುಮಾರ್ ಛಾಯಾಗ್ರಹಣ ಈ ಚಿತ್ರದಲ್ಲಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ದೆಹಲಿಯಲ್ಲಿ ನಾಯಕರ ಬಂಧನ, ಮೆಟ್ರೋ ಸ್ಥಗಿತ ಕುರಿತ ನ್ಯಾಯಾಂಗ ನಿಂದನೆ: ಭಾನುವಾರವೂ 'ಸುಪ್ರೀಂ' ವಿಶೇಷ ಪೀಠದಿಂದ ವಿಚಾರಣೆ!

BBK 13: ಗಾನವಿ ಹೇಳಿಕೆಗೆ ನೊಂದು ಗಗನ್ ತಾಯಿಗೆ ತಾನೇ ಕ್ಷಮೆ ಕೇಳಿ ಕಣ್ಣೀರು ಹಾಕಿದ ಸುದೀಪ್

ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಭಾರತ, ಆಫ್ರಿಕಾಗೆ ಸೂಕ್ತ ಪ್ರಾತಿನಿಧ್ಯ ಸಿಗಲೇಬೇಕು: ಜೈಶಂಕರ್ ಆಗ್ರಹ

ಪ್ರತಿಭಟನೆಗಳ ನಡುವೆಯೇ ಚು. ಆಯೋಗ ಮಹತ್ವದ ನಡೆ, ಹೊಸ ಉಪಾಯುಕ್ತರ ನೇಮಕ, 27 ಅಧಿಕಾರಿಗಳಿಗೆ ಹೊಸ ಹೊಣೆ!

ಮಣಿಪುರದಲ್ಲಿ ಮತ್ತೆ ಭುಗಿಲೆದ್ದ ಹಿಂಸಾಚಾರ: 30 ಮನೆ-ಅಂಗಡಿಗಳಿಗೆ ಬೆಂಕಿ, ಕನಿಷ್ಠ 5 ಸಾವು!