ಸಿನಿಮಾ ಸುದ್ದಿ

ವಿವಿಧ ದಿನಾಂಕಗಳಲ್ಲಿ, ವಿಭಿನ್ನ ಭಾಷೆಗಳಲ್ಲಿ 'ಅವನೇ ಶ್ರೀಮನ್ನಾರಾಯಣ' ಸಿನಿಮಾ ರಿಲೀಸ್

Shilpa D

ರಕ್ಷಿತ್ ಶೆಟ್ಟಿ ನಟನೆಯ 'ಅವನೇ ಶ್ರೀಮನ್ನಾರಾಯಣ'  ಸಿನಿಮಾ ಕ್ರಿಸ್ ಮಸ್ ಹೊತ್ತಿಗೆ ರಿಲೀಸ್ ಆಗಲಿದೆ. ಅವನೇ ಶ್ರೀಮನ್ನಾರಾಯಣ ಚಿತ್ರಕ್ಕೆ ಯು/ಎ ಸರ್ಟಿಫಿಕೇಟ್‌ ನೀಡಲಾಗಿದೆ. ಈ ಚಿತ್ರ ಡಿ. 27ರಂದು ರಿಲೀಸ್‌ ಆಗಲಿದ್ದು, ಮಹಾರಾಷ್ಟ್ರ ಸೇರಿ ದಕ್ಷಿಣ ಭಾರತದಾದ್ಯಂತ ಅಬ್ಬರದ ಪ್ರಚಾರ ಪ್ರಾರಂಭವಾಗಿದೆ.

ಕನ್ನಡ ಭಾಷೆಯಲ್ಲಿ  ಡಿಸೆಂಬರ್ 27ರಂದು, ತೆಲುಗಿನಲ್ಲಿ ಜನವರಿ 1 2020ರಂದು,  ತಮಿಳು ಮತ್ತು ಮಲಯಾಳಂ ನಲ್ಲಿ ಜನವರಿ 3 ರಂದು ಹಾಗೂ ಹಿಂದಿಯಲ್ಲಿ 16 ರಂದು ಬಿಡುಗಡೆಯಾಗಲಿದೆ. 

ಮೊದಲ ಬಾರಿಗೆ ವಿನೂತನ ರೀತಿಯಲ್ಲಿ ಪ್ರಚಾರ ಮಾಡಲಾಗುತ್ತಿದೆ. ಬೆಂಗಳೂರಿನ ಮಾಲ್‌ ಒಂದರಲ್ಲಿ ಶ್ರೀಮನ್ನಾರಾಯಣನ ಜತೆ ಫೋಟೊ ತೆಗೆಸಿಕೊಳ್ಳುವ ಅವಕಾಶ ಅಭಿಮಾನಿಗಳಿಗೆ ಕಲ್ಪಿಸಲಾಗಿದೆ. ಅವನೇ ಶ್ರೀಮನ್ನಾರಾಯಣ ಚಿತ್ರದ ಹೊಸ ಪೋಸ್ಟರ್‌ ರಿಲೀಸ್‌ ಆಗಿದೆ

ಅವನೇ ಶ್ರೀಮನ್ನಾರಾಯಣ ಚಿತ್ರದಲ್ಲಿರಕ್ಷಿತ್‌ ಲುಕ್‌ನ ಮಿನಿ ಕ್ರಿಯೇಚರ್‌ ಸಿದ್ಧಗೊಂಡಿದೆ. ಚಿತ್ರಕ್ಕೆ ಕರಮ್‌ ಚಾವ್ಲಾಛಾಯಾಗ್ರಹಣ ಮಾಡಿದ್ದಾರೆ. ಅಜನೀಶ್‌ ಲೋಕನಾಥ್‌ ಮತ್ತು ಚರಣ್‌ ರಾಜ್‌ ಸಂಗೀತ ನೀಡಿದ್ದಾರೆ

SCROLL FOR NEXT