ನಿರ್ದೇಶಕ ಕುಮಾರ್ 
ಸಿನಿಮಾ ಸುದ್ದಿ

'ಕ್ರಿಟಿಕಲ್ ಕೀರ್ತನೆಗಳು' ಮೂಲಕ ಐಪಿಎಲ್ ಬೆಟ್ಟಿಂಗ್ ಕಥೆ ಹೇಳಲು ಬಂದ ಡೈರೆಕ್ಟರ್ ಕುಮಾರ್

ಈ ಹಿಂದೆ ತಮ್ಮ ಚೊಚ್ಚಲ ಚಿತ್ರ "ಕೆಮಿಸ್ಟ್ರಿ ಆಫ್ ಕರಿಯಪ್ಪ"ಗೆ ಪ್ರೇಕ್ಷಕರು, ವಿಮರ್ಶಕರ ಮೆಚ್ಚುಗೆ ಗಳಿಸಿದ್ದ ನಿರ್ದೇಶಕ ಕುಮಾರ್ ಇದೀಗ ತಮ್ಮ ಮೂರನೇ ಚಿತ್ರದ ತಯಾರಿಯಲ್ಲಿದ್ದಾರೆ. "ಕ್ರಿಟಿಕಲ್ ಕೀರ್ತನೆಗಳು" ಎಂಬ ಕುತೂಹಲಕರ ಶೀರ್ಷಿಕೆಯೊಡನೆ ಅವರು ಬರುತ್ತಿದ್ದು ಈ ಚಿತ್ರ ಶೀರ್ಷಿಕೆಯೊಡನೆ ವಿಕೆಟ್ ಗಳ ಚಿತ್ರವಿದ್ದು ಅದು ತಕ್ಷಣ ಗಮನ ಸೆಳೆಯುತ್ತದೆ.  

ಈ ಹಿಂದೆ ತಮ್ಮ ಚೊಚ್ಚಲ ಚಿತ್ರ "ಕೆಮಿಸ್ಟ್ರಿ ಆಫ್ ಕರಿಯಪ್ಪ"ಗೆ ಪ್ರೇಕ್ಷಕರು, ವಿಮರ್ಶಕರ ಮೆಚ್ಚುಗೆ ಗಳಿಸಿದ್ದ ನಿರ್ದೇಶಕ ಕುಮಾರ್ ಇದೀಗ ತಮ್ಮ ಮೂರನೇ ಚಿತ್ರದ ತಯಾರಿಯಲ್ಲಿದ್ದಾರೆ. "ಕ್ರಿಟಿಕಲ್ ಕೀರ್ತನೆಗಳು" ಎಂಬ ಕುತೂಹಲಕರ ಶೀರ್ಷಿಕೆಯೊಡನೆ ಅವರು ಬರುತ್ತಿದ್ದು ಈ ಚಿತ್ರ ಶೀರ್ಷಿಕೆಯೊಡನೆ ವಿಕೆಟ್ ಗಳ ಚಿತ್ರವಿದ್ದು ಅದು ತಕ್ಷಣ ಗಮನ ಸೆಳೆಯುತ್ತದೆ. 

ಚಿತ್ರ ಐಪಿಎಲ್ ಬೆಟ್ಟಿಂಗ್ ಕುರಿತ ಕಥಾನಕವನ್ನು ಒಳಗೊಂಡಿದೆ. "ಕೆಮಿಸ್ಟ್ರಿ ಆಫ್ ಕರಿಯಪ್ಪ"ದಲ್ಲಿ ನಟಿಸಿದ್ದ  ತಬಲಾ ನಾಣಿ ಹಾಗೂ ಸುಚೇಂದ್ರ ಪ್ರಸಾದ್ ಅವರು ಕ್ರಿಟಿಕಲ್ ಕೀರ್ತನೆಳು ಗಾಗಿ ಮತ್ತೆ ಸೇರಿದ್ದಾರೆ. ಅಂತಿಮವಾಗಿ ನಾಲ್ಕು ಕಥೆಗಳನ್ನು ಇಲ್ಲಿ ತೆರೆದು ತೋರಿಸಲಾಗುವುದು ಎಂದು ಕುಮಾರ್ ಹೇಳುತ್ತಾರೆ, "ಪ್ರತಿ ವರ್ಷ ಐಪಿಎಲ್ ಬೆಟ್ಟಿಂಗ್ ಕನಿಷ್ಠ 120 ಜನರ ಆತ್ಮಹತ್ಯೆಗೆ ಕಾರಣವಾಗುತ್ತದೆ ಆದರೆ ಇದನ್ನು ಎಂದಿಗೂ ಪ್ರಮುಖ ಸಮಸ್ಯೆಯೆಂದು ಪರಿಗಣಿಸಲಾಗಿಲ್ಲ. ಕ್ರಿಕೆಟ್ ಜಗತ್ತಿಗೆ ಪ್ರವೇಶಿಸುವ ಹೆಚ್ಚಿನ ಸಂಖ್ಯೆಯ ಜನ ಗೊಂದಲದಲ್ಲಿರುತ್ತಾರೆ. ಅಲ್ಲಿನ ಮಾಯಾಲೋಕ ಅವರನ್ನು  ಹೆಚ್ಚು ಕಡಿಮೆ ಬಫೂನ್ ಆಗಿಸುತ್ತದೆ.

ಈ ಚಿತ್ರವು ಗಂಭೀರ ವಿಷಯವನ್ನು ಹಗುರವಾದ ರೀತಿಯಲ್ಲಿ ಪ್ರಸ್ತುತಪಡಿಸುತ್ತದೆ. ”ಕುಮಾರ್ 2007 ರಲ್ಲಿ ಸಂಭವಿಸಿದ ಐಪಿಎಲ್ ಬೆಟ್ಟಿಂಗ್‌ನ ನೈಜ ಘಟನೆಯನ್ನು ಆಧರಿಸಿ ಚಿತ್ರಕಥೆ ರಚಿಸಿದ್ದಾರೆ. ಈ ಚಿತ್ರವು ಕರ್ನಾಟಕದ ನಾಲ್ಕು ವಿಭಿನ್ನ ಸ್ಥಳಗಳಲ್ಲಿ ನಡೆಯುತ್ತದೆ - ಬೆಂಗಳೂರು, ಮಂಡ್ಯ, ಕುಂದಾಪುರ ಮತ್ತು ಬೆಳಗಾವಿ ಇವೆಲ್ಲವೂ ಒಂದು ಕಥೆಯಲ್ಲಿ ಸಂಯೋಜಿತವಾಗುತ್ತದೆ.

ನಿರ್ದೇಶನದ ಹೊರತಾಗಿ, ಕ್ರಿಟಿಕಲ್ ಕೀರ್ತನೆಗಳು ಚಿತ್ರದ ಕಥೆ, ಚಿತ್ರಕಥೆ ಮತ್ತು ಸಂಭಾಷಣೆಗಳನ್ನು ಕುಮಾರ್ ನಿರ್ವಹಿಸಿದ್ದಾರೆ, ಇದರಲ್ಲಿ ರಾಜೇಶ್ ನಟರಾಜ, ತರಂಗ, ಧರ್ಮ, ಅಪೂರ್ವಾ ಭಾರದ್ವಾಜ್, ಯಶ ಅಭಿ, ಅನಂತ್ ಶೆಟ್ಟಿ, ಅರುಣಾ ಬಲರಾಜ್ ಮಹೇಂದ್ರ, ಮತ್ತು ಪುಟ್ಟ ರಾಜು ಕೂಡ ಇದ್ದಾರೆ. ಈ ಚಿತ್ರದಲ್ಲಿ ಎರಡು ಡಿಒಪಿಗಗಳಿದ್ದು ವೀರ್ ಸಮರ್ತ್ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

Theaterisation: 'ಥಿಯೇಟರ್ ಕಮಾಂಡ್‌' ರಚನೆ: ಪ್ರಯತ್ನದಲ್ಲಿ ಪ್ರಗತಿ ಸಾಧಿಸಲಾಗುತ್ತಿದೆಯೇ? ಆಡ್ಮಿರಲ್ ಡಿಕೆ ತ್ರಿಪಾಠಿ ಹೇಳಿದ್ದು ಹೀಗೆ...

'ಪಾಕಿಸ್ತಾನದೊಂದಿಗೆ ಯುದ್ಧ ನಿಲ್ಲಿಸಲು ಟ್ರಂಪ್ 24 ಗಂಟೆ ಕಾಲಾವಕಾಶ ನೀಡಿದ್ದರು, ಮೋದಿ ಕೇವಲ 5 ಗಂಟೆಗಳಲ್ಲಿ ಪಾಲಿಸಿದರು': ರಾಹುಲ್ ಗಾಂಧಿ

'ಧಮ್ ಇದ್ರೆ.. ಸನಾತನಧರ್ಮ, ಬಿಹಾರಿಗಳ ಕುರಿತ ಹೇಳಿಕೆ ಮತ್ತೆ ಹೇಳ್ತೀರಾ?': MK Stalin ಗೆ ಬಿಜೆಪಿ-ಜೆಡಿಯು ಸವಾಲು!

Video: 80 ಸಾವಿರ ಹಣವಿದ್ದ ಬ್ಯಾಗ್ ನಾಪತ್ತೆ, ಮೇಲಿಂದ ಕೋತಿಯಿಂದ ಹಣದ ಸುರಿಮಳೆ! ಸಿಕ್ಕಿದೆಷ್ಟು ಗೊತ್ತಾ?

Dharmasthala: Mahesh Shetty Thimarodi ಮನೆ ಮಹಜರು, ಪತ್ನಿ-ಮಕ್ಕಳ ಮೊಬೈಲ್ ವಶಕ್ಕೆ, 3 ತಲ್ವಾರ್ ಕೂಡ ಪತ್ತೆ!

SCROLL FOR NEXT