ಸಿನಿಮಾ ಸುದ್ದಿ

ಮಧ್ಯರಾತ್ರಿಯಿಂದಲೇ 'ನಟಸಾರ್ವಭೌಮ ' ಅಬ್ಬರ ಬಲು ಜೋರು!

Nagaraja AB

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ ಪವನ್ ಒಡೆಯರ್ ನಿರ್ದೇಶನದ ಅದ್ದೂರಿ ಸಿನಿಮಾ ನಟಸಾರ್ವಭೌಮ ನಿನ್ನೆ ರಾತ್ರಿಯಿಂದಲೇ  ಬಿಡುಗಡೆ ಆಗಿದ್ದು, ಅಬ್ಬರ  ಬಲು ಜೋರಾಗಿದೆ. ಇಂದು ರಾಜ್ಯಾದ್ಯಂತ ಬಿಡುಗಡೆ ಆಗಿರುವ ನಟಸಾರ್ವಭೌಮನಿಗೆ ಅದ್ದೂರಿ ಸ್ವಾಗತ ಸಿಕ್ಕಿದೆ.

ಬೆಂಗಳೂರಿನ ಪ್ರಸನ್ನ ಚಿತ್ರಮಂದಿರದಲ್ಲಿ ರಾತ್ರಿ 10 ಗಂಟೆ ಸುಮಾರಿಗೆ ಶೋ ಆರಂಭವಾಗಿದ್ದು,  ಲಾಲ್ ಬಾಗ್ ಬಳಿಯ ಊರ್ವಶಿ ಥಿಯೇಟರಿನಲ್ಲಿ ಸತತ 24 ಗಂಟೆ ಪ್ರದರ್ಶನ ಕಾಣುತ್ತಿದೆ.
ಶ್ರೀನಿವಾಸ, ಸಂಗಮ ಥಿಯೇಟರ್ ಸೇರಿದಂತೆ 5 ಕಡೆ ಮೊದಲ ಶೋ ಪ್ರದರ್ಶನ ಗೊಂಡಿದೆ.ರಿಲೀಸ್ ಡೇಟ್ ಗೂ ಒಂದು ದಿನ ಮುಂಚಿತವಾಗಿ ಸಿನಿಮಾ  ಬಿಡುಗಡೆ ಆಗಿದ್ದು, ಕನ್ನಡ ಚಿತ್ರರಂಗದಲ್ಲಿ ಹೊಸ ದಾಖಲೆ ಬರೆದಿದೆ.
SCROLL FOR NEXT