ಕನ್ನಡದ ಬ್ಲಾಕ್ ಬಸ್ಟರ್ 'ಕೆಜಿಎಫ್” ಚಿತ್ರವನ್ನು ರಾಧಿಕಾ ಇನ್ನೂ ನೋಡಿಲ್ಲವೇಕೆ ಗೊತ್ತಾ? 
ಸಿನಿಮಾ ಸುದ್ದಿ

ಕನ್ನಡದ ಬ್ಲಾಕ್ ಬಸ್ಟರ್’ ಕೆಜಿಎಫ್” ಚಿತ್ರವನ್ನು ರಾಧಿಕಾ ಇನ್ನೂ ನೋಡಿಲ್ಲ?

ಕನ್ನಡದ ಬ್ಲಾಕ್ ಬಸ್ಟರ್ ಚಿತ್ರ "ಕೆಜಿಎಫ್" ನ್ನು ರಾಕಿ ಬಾಯ್ ಪತ್ನಿ ರಾಧಿಕಾ ಪಂಡಿತ್ ಇನ್ನೂ ನೋಡಿಲ್ಲ! ಹೌದು ಬಾಕ್ಸ್ ಆಫೀಸ್ ನಲ್ಲಿ ನೂರೈವತ್ತು ಕೋಟಿ ಗಳಿಸಿ ದೇಶಾದ್ಯಂತ ಸದ್ದು ಮಾಡಿರುವ ರಾಕಿಂಗ್ ಸ್ಟಾರ್ ಯಶ್ ....

ಬೆಂಗಳೂರು: ಕನ್ನಡದ ಬ್ಲಾಕ್ ಬಸ್ಟರ್ ಚಿತ್ರ "ಕೆಜಿಎಫ್"ನ್ನು ರಾಕಿ ಬಾಯ್ ಪತ್ನಿ ರಾಧಿಕಾ ಪಂಡಿತ್ ಇನ್ನೂ ನೋಡಿಲ್ಲ! ಹೌದು ಬಾಕ್ಸ್ ಆಫೀಸ್ ನಲ್ಲಿ ನೂರೈವತ್ತು ಕೋಟಿ ಗಳಿಸಿ ದೇಶಾದ್ಯಂತ ಸದ್ದು ಮಾಡಿರುವ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಚಿತ್ರವನ್ನು ಅವರ ಪತ್ನಿ ರಾಧಿಕಾ ಪಂಡಿತ್ ಇನ್ನೂ ನೋಡಿಲ್ಲ ಎನ್ನುವುದಕ್ಕೆ ಸ್ವತಃ ಯಶ್ ಸ್ಪಷ್ಟನೆ ನೀಡಿದ್ದಾರೆ.
ಅಭಿಮಾನಿಗಳೊಡನೆ ಹೊಸ ಸೌಂಡ್ ನೊಡನೆ ತೆರೆಗೆ ಬಂದ ಚಿತ್ರವನ್ನು ನೋಡಲು ನಟ ಯಶ್ ಒರಾಯನ್ ಮಾಲ್ ಗೆ ಆಗಮಿಸಿದ್ದ ವೇಳೆ ತನ್ನ ಪತ್ನಿ ರಾಧಿಕಾ ಇನ್ನೂ ಚಿತ್ರ ವೀಕ್ಷಿಸಿಲ್ಲ ಎಂದು ಹೇಳಿದ್ದಾರೆ.
ಎಲ್ಲರೂ ಇಷ್ಟು ಇಷ್ಟಪಟ್ಟ ಸಿನಿಮಾವನ್ನು ತಾನೂ ನೋಡಬೇಕೆಂದು ನಟಿ ರಾಧಿಕಾ ಪ್ರತಿದಿನ ಕೇಳುತ್ತಿದ್ದಾರೆ. ಆದರೆ ಆಕೆಗೆ ಸಧ್ಯ ಸಿನಿಮಾ ವೀಕ್ಷಿಸಲು ಸಾಧ್ಯವಿಲ್ಲ. ವೈದ್ಯರು ಆಕೆಗೆ ಮನೆಯಲ್ಲೇ ವಿಶ್ರಾಂತಿ ಪಡೆಯಬೇಕೆಂದು ತಾಕೀತು ಮಾಡಿದ್ದು ಈ ಕಾರಣ ಅವರು ಸಧ್ಯ ಸಿನಿಮಾ ವೀಕ್ಷಿಸಲು ಸಾಧ್ಯವಿಲ್ಲ  ಎಂದು ನಟ ಯಶ್ ಹೇಳಿದ್ದಾರೆ.
ರಾಧಿಕಾ ಕಳೆದ ಡಿಸೆಂಬರ್ 2ರಂದು ಹೆಣ್ಣು ಮಗುವಿಗೆ ಜನ್ಮ ನೀಡಿದ್ದು ಅವರೀಗ ಮನೆಯಲ್ಲಿ ಮಗುವಿನ ಲಾಲನೆ, ಪಾಲನೆಯಲ್ಲಿ ನಿರತರಾಗಿದ್ದಾರೆ.
ಈಗ ವಿಶ್ರಂತಿಯಲ್ಲಿರುವ ನಟಿ ಇನ್ನು ಕೆಲ ದಿನಗಳಲ್ಲೇ ಮಗುವಿನೊಡನೆ ಚಿತ್ರಮಂದಿರಕ್ಕೆ ಆಗಮಿಸಿ "ಕೆಜಿಎಫ್" ವೀಕ್ಷಿಸಲಿದ್ದಾರೆ ಎಂದು ನಟ ಯಶ್ ಭರವಸೆ ನೀಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಎಲ್ಲಾ ಪ್ರತಿಭಟನೆಗಳೂ ಒಂದೇ: 'ಚಾಯ್ ಪೆ ಚರ್ಚೆ' ಗೂ ಮುನ್ನ ರಾಹುಲ್ ಹೇಳಿಕೆ!

ನಟ ದರ್ಶನ್‌ಗೆ ಕಂಟಕವಾಗ್ತಾರಾ ದೋಸ್ತಿಗಳು? ಕೋರ್ಟ್‌ನಲ್ಲಿ ಗಾಬರಿ ಬಿದ್ದ ಚಿಕ್ಕಣ್ಣ, ಯಶಸ್ ಸೂರ್ಯ ಹೇಳಿದ್ದೇನು?

'ಹಲವು ಕುಟುಂಬಗಳ ಹೆಣ್ಮಕ್ಕಳ ಮರ್ಯಾದೆ ಕಳೆದ ಪುಣ್ಯಾತ್ಮ ಡಿಕೆಶಿ; ಪ್ರಜ್ವಲ್​​ ಕೇಸ್​ ಹಿಂದಿದ್ದವರಿಂದ ಮಾಜಿ ಸಿಎಂ ಸ್ಟಿಂಗ್​​ ಆಪರೇಷನ್: HDK ಹೊಸ ಬಾಂಬ್

ಸಿದ್ದರಾಮಯ್ಯ ವಿರುದ್ಧ ಸ್ಟಿಂಗ್ ಆಪರೇಶನ್: ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗೆ ಪೆನ್ ಡ್ರೈವ್ ಸಲ್ಲಿಕೆ; ನ್ಯಾಯಾಂಗ ತನಿಖೆಗೆ ಆಗ್ರಹ!

ವರ್ತಕರ ಮನವಿಗೆ ಸ್ಪಂದಿಸಿದ ಕೇಂದ್ರ; ದೀಪಾವಳಿ ನಂತರವೇ UPI ಮರ್ಚೆಂಟ್ ಶುಲ್ಕ ಜಾರಿ