ಸಂಗ್ರಹ ಚಿತ್ರ 
ಸಿನಿಮಾ ಸುದ್ದಿ

ಅಂಬಿ ಮೇಲಿನ ಪ್ರೀತಿ; ಜನ್ಮದಿನಾಚರಣೆಯನ್ನೇ ರದ್ದು ಮಾಡಿದ ನಟ ಯಶ್!

2018ನೇ ಸಾಲನ್ನು ನಟ ಯಶ್ ತಡವಾಗಿ ನೆನಪಿಸಿಕೊಂಡಿದ್ದು, ಕೆಜಿಎಫ್ ಸಕ್ಸಸ್ ಖುಷಿಯಲ್ಲಿರುವ ತಮ್ಮ ಅಭಿಮಾನಿಗಳಿಗೆ ನಟ ಯಶ್ ಶಾಕ್ ನೀಡಿದ್ದಾರೆ.

ಬೆಂಗಳೂರು: 2018ನೇ ಸಾಲನ್ನು ನಟ ಯಶ್ ತಡವಾಗಿ ನೆನಪಿಸಿಕೊಂಡಿದ್ದು, ಕೆಜಿಎಫ್ ಸಕ್ಸಸ್ ಖುಷಿಯಲ್ಲಿರುವ ತಮ್ಮ ಅಭಿಮಾನಿಗಳಿಗೆ ನಟ ಯಶ್ ಶಾಕ್ ನೀಡಿದ್ದಾರೆ.
ಈ ಬಗ್ಗೆ ಟ್ವಿಟರ್ ನಲ್ಲಿ ವಿಡಿಯೋ ಅಪ್ಲೋಡ್ ಮಾಡಿರುವ ನಟ ಯಶ್ 2018ನೇ ಸಾಲು ತಮ್ಮ ಜೀವನದ ಸಾಕಷ್ಚು ನೆನಪುಗಳನ್ನು ಉಳಿಸಿ ಹೋಗಿದೆ. ನಾನು ಖುಷಿಯಿಂದ ಎಲ್ಲರೊಡನೆ ಸಂಭ್ರಮಿಸಲು ಒಂದು ಸಮಯ. ನನ್ನ ನೆನಪುಗಳ ಪುಟ ತಿರುಗಿಸಲು ಈ ಸಮಯ ಎಂದು ಹೇಳಿದ್ದಾರೆ. 
ವಿಡಿಯೋದಲ್ಲಿ 2018ನೇ ಸಾಲನ್ನು ಸಂಕ್ಷಿಪ್ತವಾಗಿ ನೆನಪಿಸಿಕೊಂಡ ಯಶ್ ಮರೆಯಾದ ಅಂಬಿ, ಪ್ರೀತಿಯ ಮಗಳ ಜನನ, ಕೆಜಿಎಫ್ ಸಕ್ಸಸ್ ಅನ್ನು ನೆನಪಿಸಿಕೊಂಡಿದ್ದಾರೆ. ಅಂತೆಯೇ ಕಳೆದ ವರ್ಷಾಂತ್ಯದಲ್ಲಿ ನಮ್ಮನ್ನಗಲಿದ ರೆಬೆಲ್ ಸ್ಟಾರ್ ಅಂಬರೀಷ್ ಅವರ ನೆನಪಿನಾರ್ಥವಾಗಿ ಈ ವರ್ಷ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುವುದಿಲ್ಲ ಎಂದು ಯಶ್ ಹೇಳಿದ್ದಾರೆ.
ಇದೇ ಜನವರಿ 8ರಂದು ನಟ ಯಶ್ ಅವರ ಹುಟ್ಟಿದ ದಿನವಾಗಿದ್ದು, ಕೆಜಿಎಫ್ ಭರ್ಜರಿ ಸಕ್ಸಸ್ ಮೂಡ್ ನಲ್ಲಿರುವ ಅವರ ಅಭಿಮಾನಿಗಳು ದೊಡ್ಡ ಮಟ್ಟದಲ್ಲಿ ಆಚರಿಸಲು ನಿರ್ಧರಿಸಿದ್ದರು. ಆದರೆ ಯಶ್ ಅವರ ಈ ನಿರ್ಧಾರ ಅವರ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ದೆಹಲಿಯಲ್ಲಿ ನಾಯಕರ ಬಂಧನ, ಮೆಟ್ರೋ ಸ್ಥಗಿತ ಕುರಿತ ನ್ಯಾಯಾಂಗ ನಿಂದನೆ: ಭಾನುವಾರವೂ 'ಸುಪ್ರೀಂ' ವಿಶೇಷ ಪೀಠದಿಂದ ವಿಚಾರಣೆ!

BBK 13: ಗಾನವಿ ಹೇಳಿಕೆಗೆ ನೊಂದು ಗಗನ್ ತಾಯಿಗೆ ತಾನೇ ಕ್ಷಮೆ ಕೇಳಿ ಕಣ್ಣೀರು ಹಾಕಿದ ಸುದೀಪ್

ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಭಾರತ, ಆಫ್ರಿಕಾಗೆ ಸೂಕ್ತ ಪ್ರಾತಿನಿಧ್ಯ ಸಿಗಲೇಬೇಕು: ಜೈಶಂಕರ್ ಆಗ್ರಹ

ಪ್ರತಿಭಟನೆಗಳ ನಡುವೆಯೇ ಚು. ಆಯೋಗ ಮಹತ್ವದ ನಡೆ, ಹೊಸ ಉಪಾಯುಕ್ತರ ನೇಮಕ, 27 ಅಧಿಕಾರಿಗಳಿಗೆ ಹೊಸ ಹೊಣೆ!

ಮಣಿಪುರದಲ್ಲಿ ಮತ್ತೆ ಭುಗಿಲೆದ್ದ ಹಿಂಸಾಚಾರ: 30 ಮನೆ-ಅಂಗಡಿಗಳಿಗೆ ಬೆಂಕಿ, ಕನಿಷ್ಠ 5 ಸಾವು!