ಯಶ್ 
ಸಿನಿಮಾ ಸುದ್ದಿ

ಕೆಜಿಎಫ್ ಮೂಲಕ ನನ್ನ ಕನಸು ನನಸಾಗಿದೆ, ಹೆಚ್ಚೆಚ್ಚು ಅಭಿಮಾನಿಗಳು ಸಿಕ್ಕಿದ್ದಾರೆ: ಯಶ್

ಕೆಜಿಎಫ್ ಸಾಧಾರಣ ಸಿನಿಮಾವಲ್ಲ, ಯಶ್ ಸಾಧನೆ ಸಾಮಾನ್ಯವಲ್ಲ, ಬಿಡುಗಡೆಯಾದ ಡಿಸೆಂಬರ್ 21 ರಿಂದ ಕನ್ನಡ ಸಿನಿಮಾಗಳ ಬಹು ದೀರ್ಘ ಕಾಲದ ಎಲ್ಲಾ ...

ಬೆಂಗಳೂರು: ಕೆಜಿಎಫ್  ಸಾಧಾರಣ ಸಿನಿಮಾವಲ್ಲ, ಯಶ್ ಸಾಧನೆ ಸಾಮಾನ್ಯವಲ್ಲ, ಬಿಡುಗಡೆಯಾದ ಡಿಸೆಂಬರ್ 21 ರಿಂದ ಕನ್ನಡ ಸಿನಿಮಾಗಳ ಬಹು ದೀರ್ಘ ಕಾಲದ ಎಲ್ಲಾ ದಾಖಲೆಗಳನ್ನು ಧೂಳೀಪಟ ಮಾಡಿದೆ. ರೆಬೆಲ್ ಸ್ಟಾರ್ ಅಂಬರೀಷ್ ಅವರ ನಿಧನ ಹಿನ್ನೆಲೆಯಲ್ಲಿ ಯಶ್ ತಮ್ಮ ಹುಟ್ಟುಹಬ್ಬ ಆಚರಿಸಿಕೊಳ್ಳದಿರಲು ನಿರ್ಧರಿಸಿದ್ದಾರೆ. 
ಹುಟ್ಟುಹಬ್ಬ ಆಚರಿಸಿಕೊಳ್ಳದೇ ಫ್ಯಾಮಿಲಿ ಜೊತೆ ತಮ್ಮ ಸಮಯ ಕಳೆಯಲು ನಿರ್ಧರಿಸಿದ್ದಾಗಿ ವಿಡಿಯೋ ಮೂಲಕ ಅಭಿಮಾನಿಗಳಿಗೆ ಸಂದೇಶ ರವಾನಿಸಿದ್ದಾರೆ, 
ಕೆಜಿಎಫ್ ಸಕ್ಸಸ್ ಬಗ್ಗೆ ಮಾತನಾಡಿರುವ ಯಶ್, ಈ ಸಿನಿಮಾವನ್ನು ಈ ಲೆವೆಲ್ ಗೆ ತರುವುದು ನನ್ನ ಕನಸಾಗಿತ್ತು,  ಎಲ್ಲಾ ಭಾಷೆಗಳಲ್ಲೂ ಕೆಜಿಎಫ್ ರಿಲೀಸ್ ಆಗಿದ್ದು ಪ್ರಪಂಚಾದ್ಯಂತ ಉತ್ತಮವಾಗಿ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ, ಜೊತೆಗೆ ನನ್ನ ಅಭಿಮಾನಿಗಳ ಸಂಖ್ಯೆಯೂ ಹೆಚ್ಚಿದೆ,  ಇದೇ ಸಮಯದಲ್ಲಿ ನನ್ನ ಮಗಳು ನನ್ನ ಬೆಸ್ಚ್ ಉಡುಗೊರೆಯಾಗಿದೆ ಎಂದು ಹೇಳಿದ್ದಾರೆ.
ರಿಲೀಸ್ ದಿನಾಂಕ ಹತ್ತಿರ ಬರುತ್ತಿರುವಂತೆ ನಾನು ಹಲವು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಗೂಗ್ಲಿ, ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ ಮತ್ತು ಈಗ ಕೆಜಿಎಫ್ ಸಿನಿಮಾ ಬಿಡುಗಡೆ ಸಮಯದಲ್ಲಿ ಸಮಸ್ಯೆಗಳು ಎದುರಾದವು, ಸವಾಲುಗಳು ಮತ್ತು ಸಮಸ್ಯೆಗಳು ನನ್ನನ್ನು ಮತ್ತಷ್ಟು ಗಟ್ಟಿಯಾಗಿಸುತ್ತವೆ. ನಾನು ಕೇವಲ ಯಶಸ್ಸನ್ನೇ ನೋಡುತ್ತಿದ್ದರೇ ವೈಫಲ್ಯದ ಅರ್ಥ ಗೊತ್ತಾಗುವುದಿಲ್ಲ,  ನಾನು ಸಮಸ್ಯೆ ಬಗೆಹರಿಸಲು ಮುಂದಾದಾಗ  ನಾನು ಮತ್ತಷ್ಟು ಪ್ರಬಲನಾಗುತ್ತೇನೆ, ಜನ ನನ್ನೊಂದಿಗೆ ಇರುವುದರಿಂದ , ಯಾವುದು ನನ್ನನ್ನು ನಿಲ್ಲಿಸಲು ಸಾಧ್ಯವಿಲ್ಲ, ಇಡೀ ರಾಜ್ಯವೇ ನನ್ನೊಂದಿಗಿತ್ತು, ಇದು ನನಗೆ ಅಪಾರ ಸಂತೋಷ ತಂದಿದೆ,  ಅವರೆಲ್ಲಾ ನನ್ನ ಜೊತೆ ಇರುವವರೆಗೂ ಇಡೀ ಪ್ರಪಂಚದಲ್ಲಿ ಏನನ್ನೂ ಬೇಕಾದರೂ ಎದುರಿಸುತ್ತೇನೆ ಎಂದು ಹೇಳಿದ್ದಾರೆ.
ಸಿನಿಮಾವನ್ನು ನಾನು ಪ್ರೀತಿಯಿಂದ ಮಾಡಿದ್ದೇನೆ, ಈ ಸಿನಿಮಾಗಾಗಿ ನಾನು ನನ್ನನ್ನು ಸಮರ್ಪಿಸಿಕೊಂಡಿದ್ದೇನೆ, ನಾನು ಸಿನಿಮಾ ಪ್ರೀತಿಸಿದ್ದರಿಂದ ಕೆಜಿಎಫ್ ಸಾಧ್ಯವಾಯಿತು, ನನ್ನ ಜೀವನದಲ್ಲಿ ಹಲವಾರು ಸಂಗತಿಗಳು ನಡೆದಿವೆ, ಯಾವುದೇ ಸಿನಿಮಾವಾಗಲಿ ಅಪಾರ ಪ್ರಮಾಣದ ಪ್ರೇಕ್ಷಕರನ್ನು ಗಮನದಲ್ಲಿರಿಸಿಕೊಳ್ಳಬೇಕಾಗುತ್ತದೆ.
ಯಶಸ್ಸು ಮತ್ತು ವೈಫಲ್ಯ ನನ್ನಲ್ಲಿ ಹೊಸತನ ತರುತ್ತದೆ,ಇದು ಕೇವಲ ರಾತ್ರೋ ರಾತ್ರಿ ಆದದ್ದಲ್ಲ, ಅದು ಸುಮಾರು ಸಮಯಗಳ ಕಾಲ ನಡೆದ ಪ್ರಯತ್ನದ ಫಲವಾಗಿದೆ, ನನಗೆ ಯಶಸ್ಸು ಮತ್ತು ವೈಫಲ್ಯ ಬಗ್ಗೆ ನನಗೆ ಸಂಪೂರ್ಣ ಅರ್ಥವಾಗಿದೆ, ಇದು ಜನಮರ ಮೇಲೆ ನಿಂತಿದೆ, 
ಮುಂದಿನ ಸಿನಿಮಾ ಬಗ್ಗೆ ಮಾತನಾಡಿದ ಯಶ್, ಕೆಲವು ದಿನ ಕಾಯವಂತೆ ಹೇಳಿದ್ದಾರೆ, ನನ್ನ ಮುಂದಿನ ನಡೆಯ ಬಗ್ಗೆ ನಾನು  ಮಾನಸಿಕವಾಗಿ ಸಿದ್ದತೆ ನಡೆಸಬೇಕಿದೆ, ನಾನು ತುಂಬಾ ಆಕಾಂಕ್ಷೆಯುಳ್ಳ ವ್ಯಕ್ತಿ, ಮುಂದಿನ ನಿರ್ಧಾರದ ತೆಗೆದುಕೊಳ್ಳುವ ಬಗ್ಗೆ ಸ್ವಲ್ಪ ಸಮಯ ಬೇಕಾಗುತ್ತದೆ 
ಕೆಜಿಎಫ್ ನಿಂದಾಗಿ  ಬೇರೆ ಭಾಷೆಗಳ ಸಿನಿಮಾಗಳು ಕನ್ನಡಕ್ಕೆ ಡಬ್ ಆಗಿ ಕನ್ನಡದಲ್ಲಿ ರಿಲೀಸ್ ಆಗಲು ದಾರಿ ಮಾಡಿಕೊಟ್ಟಿವೆ, ಕೋರ್ಟ್ ಆದೇಶ ಏನೇ ಇದ್ದರೂ ಅಂತಿಮ ನಿರ್ಧಾರ ಪ್ರೇಕ್ಷಕರಿಗೆ ಸೇರಿದ್ದು ಎಂದು ಹೇಳಿದ್ದಾರೆ.
ಇನ್ನೂ ಕೆಜಿಎಫ್ ಯಶಸ್ಸಿನಲ್ಲಿರುವ ನಟ ಯಶ್ ಶೀಘ್ರವೇ ಯಶೋ ಯಾತ್ರಾ ಕೈಗೊಳ್ಳುವುದಾಗಿ ಹೇಳಿರುವ ಅವರು ಶೀಘ್ರವೇ ಕೆಜಿಎಫ್-2 ಸಿನಿಮಾ ಶೂಟಿಂಗ್ ಆರಂಭಿಸುವುದಾಗಿ ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ದಸರಾ ಉದ್ಘಾಟನೆ ಮಾಡುವಷ್ಟು ದೊಡ್ಡವನು ನಾನಲ್ಲ, ಮಹನೀಯರು ಹಚ್ಚಿದ ದೀಪ ಆರದಿರಲಿ ಎಂದು ಪ್ರಾರ್ಥಿಸಲಿಕ್ಕೆ ಬಂದಿದ್ದೇನೆ': ಗವಿಸಿದ್ಧೇಶ್ವರ ಶ್ರೀಗಳು; Video

ಮೈಸೂರು ದಸರಾಕ್ಕೆ ಕೊಪ್ಪಳದ ಗವಿಸಿದ್ದೇಶ್ವರ ಶ್ರೀಗಳಿಂದ ಅಧಿಕೃತ ಚಾಲನೆ

4 ಜನರಿಗೆ ಒಂದೇ ಟಿಕೆಟ್! ಸಾರಿಗೆ ಇಲಾಖೆಯಲ್ಲಿ ಡೀಸೆಲ್ ಬೆನ್ನಲ್ಲೇ ಟಿಕೆಟ್ ರೋಲ್ ಕೊರತೆ

ದೆಹಲಿಯಲ್ಲಿ ಹೈಡ್ರಾಮಾ: ವಿಮಾನ ನಿಲ್ದಾಣದಲ್ಲಿ ಬಂಧನಕ್ಕೊಳಗಾಗಿದ್ದ CJP ನಾಯಕರಾದ ದೀಪ್ಕೆ, ರಾಂಕಾ, ದಾಸ್ ಕೊನೆಗೂ ಬಿಡುಗಡೆ, 1 ವರ್ಷ ಶಾಂತಿ ಕಾಪಾಡುವಂತೆ ಷರತ್ತು..!

Riyadh ವಿಮಾನ ನಿಲ್ದಾಣದ ಮೇಲೆ ಕ್ಷಿಪಣಿ ದಾಳಿ: 12 ಮಂದಿ ಸಾವು, 300ಕ್ಕೂ ಹೆಚ್ಚು ಜನರಿಗೆ ಗಾಯ