#MeToo ಅಭಿಯಾನ: ನಟ ಅಲೋಕ್ ನಾಥ್'ಗೆ ಜಾಮೀನು ಮಂಜೂರು, ದೂರು ವೈಯಕ್ತಿಕ ದ್ವೇಷ ಎಂದ ನ್ಯಾಯಾಲಯ 
ಸಿನಿಮಾ ಸುದ್ದಿ

#MeToo ಅಭಿಯಾನ: ನಟ ಅಲೋಕ್ ನಾಥ್'ಗೆ ಜಾಮೀನು ಮಂಜೂರು, ದೂರು ವೈಯಕ್ತಿಕ ದ್ವೇಷ ಎಂದ ನ್ಯಾಯಾಲಯ

ಅತ್ಯಾಚಾರ ಆರೋಪ ಎದುರಿಸುತ್ತಿದ್ದ ಬಾಲಿವುಡ್ ನಟ ಅಲೋಕ್ ನಾಥ್ ಅವರಿಗೆ ನ್ಯಾಯಾಲಯ ಬುಧವಾರ ಜಾಮೀನು ಮಂಜೂರು ಮಾಡಿದ್ದು, ಅಲೋಕ್ ವಿರುದ್ಧ ದಾಖಲಾಗಿರುವ ದೂರು ವೈಯಕ್ತಿಕ ದ್ವೇಷದಿಂದಾಗಿದೆ ಎಂದು ಹೇಳಿದೆ...

ಮುಂಬೈ: ಅತ್ಯಾಚಾರ ಆರೋಪ ಎದುರಿಸುತ್ತಿದ್ದ ಬಾಲಿವುಡ್ ನಟ ಅಲೋಕ್ ನಾಥ್ ಅವರಿಗೆ ನ್ಯಾಯಾಲಯ ಬುಧವಾರ ಜಾಮೀನು ಮಂಜೂರು ಮಾಡಿದ್ದು, ಅಲೋಕ್ ವಿರುದ್ಧ ದಾಖಲಾಗಿರುವ ದೂರು ವೈಯಕ್ತಿಕ ದ್ವೇಷದಿಂದಾಗಿದೆ ಎಂದು ಹೇಳಿದೆ. 
ಅಲೋಕ್ ನಾಥ್ ವಿರುದ್ಧ ಚಿತ್ರ ನಿರ್ಮಾಪತಿ ವಿಂತಾ ನಂದಾ ಅವರು ಕೆಲ ದಿನಗಳ ಹಿಂದೆ ಅತ್ಯಾಚಾರ ಆರೋಪ ಮಾಡಿದ್ದರು. ಪ್ರಕರಣ ಸಂಬಂಧ ಅಲೋಕ್ ನಾಥ್ ಅವರು ವಿಂತಾ ನಂದಾ ಅವರ ವಿರುದ್ಧ ಮಾನನಷ್ಟ ಮೊಕದ್ದಮೆಯನ್ನೂ ಹೂಡಿದ್ದರು. 
ಇದಾಗ ಅಲೋಕ್ ನಾಥ್ ಅವರಿಗೆ ಮುಂಬೈ ಸೆಷನ್ಸ್ ಕೋರ್ಟ್ ಜಾಮೀನು ಮಂಜೂರು ಮಾಡಿದ್ದು, ವಿಂತಾ ನಂದಾ ಅವರ ದೂರು ವೈಯಕ್ತಿಕ ದ್ವೇಷದಿಂದಾಗಿದೆ ಎಂದು ಹೇಳಿದೆ. 
ಅಲೋಕ್ ನಾಥ್ ಅವರ ಪತ್ನಿ ಅಶು ಹಾಗೂ ವಿಂತಾ ನಂದಾ ಇಬ್ಬರೂ 1980ರಲ್ಲಿ ಚಂಡೀಗಢದ ಕಾಲೇಜೊಂದರಲ್ಲಿ ಸ್ನೇಹಿತೆಯರಾಗಿದ್ದರು. ಇಬ್ಬರೂ ಟಿವಿ ಧಾರಾವಾಹಿಯೊಂದರ ನಿರ್ಮಾಪಕ ಘಟಕದಲ್ಲಿ ಕೆಲಸ ಮಾಡುತ್ತಿದ್ದರು. ಅಲೋಕ್ ನಾಥ್ ಅವರನ್ನು ಭೇಟಿಯಾದ ಬಳಿಕ ಮೂವರೂ ಸ್ನೇಹಿತರಾಗಿ ಮುಂದುವರೆರಿದ್ದರು. ಅಲೋಕ್ ನಾಥ್ ಅವರು ಅಶು ಅವರನ್ನು ಪ್ರೀತಿಸಲು ಆರಂಭಿಸಿದ್ದರು. ಬಳಿಕ ಅಶು ಅವರನ್ನು ವಿವಾಹವಾಗಿದ್ದರು. ಇದಾದ ಬಳಿಕ ಆಪ್ತ ಗೆಳೆತಿಯನ್ನು ಕಳೆದುಕೊಂಡ ವಿಂತಾ ನಂದ ಅವರಿಗೆ ಏಕಾಂತ ಭಾವನೆ ಮೂಡಿತ್ತು. ಇದರಿಂದ ಅಲೋಕ್ ನಾಥ್ ಅವರ ಮೇಲೆ ದ್ವೇಷ ಬೆಳೆಸಿಕೊಂಡಿದ್ದ ವಿಂತಾ ನಂದಾ ಅವರು ಇದೇ ದ್ವೇಷದಿಂದಲೇ ದೂರು ದಾಖಲಿಸಿದ್ದಾರೆಂದು ನ್ಯಾಯಾಲಯ ತಿಳಿಸಿದೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಹೊಸದಾಗಿ ನೇಮಕಗೊಂಡಿದ್ದ Hamas ಮಿಲಿಟರಿ ನಾಯಕನನ್ನೂ ಹೊಡೆದುರುಳಿಸಿದ Israel!

ಸಿದ್ದರಾಮಯ್ಯ 2 ಬಾರಿ ಸಿಎಂ ಆಗಿದ್ದಾರೆ; ಡಿಕೆಶಿ ಹಲವು ಮುಖ್ಯಮಂತ್ರಿಗಳ ಜತೆ ಸಚಿವರಾಗಿ ಕೆಲಸ ಮಾಡಿದ್ದಾರೆ: ಸುರ್ಜೇವಾಲ ಮಾತಿನ ಅರ್ಥವೇನು?

ಇಲ್ಲಿಂದ ತೊಲಗಿ; ಭಾರತೀಯ ದಂಪತಿಗೆ ಅಮೆರಿಕಾದಲ್ಲಿ ಜನಾಂಗೀಯ ನಿಂದನೆ

IPL 2026: SRH ವಿರುದ್ಧ RR ಗೆ 47 ರನ್ ಗಳ ಭರ್ಜರಿ ಗೆಲುವು

IPL 2026 Eliminator: ವೈಭವ್ ಸೂರ್ಯವಂಶಿ ಸ್ಫೋಟಕ ಬ್ಯಾಟಿಂಗ್, SRHಗೆ 244 ರನ್ ಬೃಹತ್ ಗುರಿ ನೀಡಿದ RR

SCROLL FOR NEXT