ರೆಟ್ರೊ ನೆನಪು ಹೊತ್ತು ತರಲಿದ್ದಾರೆ ಹರಿಪ್ರಿಯಾ 
ಸಿನಿಮಾ ಸುದ್ದಿ

ಬೆಲ್ ಬಾಟಮ್ ನಲ್ಲಿ ರೆಟ್ರೊ ನೆನಪು ಹೊತ್ತು ತರಲಿದ್ದಾರೆ ಹರಿಪ್ರಿಯಾ

ಜಯತೀರ್ಥ ನಿರ್ದೇಶನದಲ್ಲಿ ಮೂಡಿ ಬಂದಿರುವ ಬೆಲ್‌ ಬಾಟಮ್‌ ಸಿನಿಮಾದ ಟ್ರೇಲರ್‌ ಇಂದು ಬಿಡುಗಡೆ ಆಗಲಿದೆ. ಎಂಬತ್ತರ ದಶಕದ ಕಥೆಯನ್ನು...

ಬೆಂಗಳೂರು:  ಜಯತೀರ್ಥ ನಿರ್ದೇಶನದಲ್ಲಿ ಮೂಡಿ ಬಂದಿರುವ ಬೆಲ್‌ ಬಾಟಮ್‌ ಸಿನಿಮಾದ ಟ್ರೇಲರ್‌ ಇಂದು ಬಿಡುಗಡೆ ಆಗಲಿದೆ. ಎಂಬತ್ತರ ದಶಕದ ಕಥೆಯನ್ನು ಈ ಸಿನಿಮಾದಲ್ಲಿ ಹೇಳಲು ಹೊರಟಿದ್ದಾರೆ ನಿರ್ದೇಶಕರು. ಇಡೀ ಸಿನಿಮಾ ಆ ಕಾಲಘಟ್ಟದಲ್ಲೇ ತೆರೆದುಕೊಳ್ಳುವುದು ವಿಶೇಷ. 
ಕಾಸ್ಟ್ಯೂಮ್‌, ಹಿನ್ನೆಲೆ, ಬಳಸಿದ ಪರಿಕರ ಎಲ್ಲವೂ 80ರ ಕಾಲದವು. ಈಗಾಗಲೇ ರಿಲೀಸ್‌ ಆಗಿರುವ ಫೋಟೋ ಮತ್ತು ಪೋಸ್ಟರ್‌ ಕೂಡ ಅದೇ ಕಾಲಘಟ್ಟವನ್ನು ಪ್ರತಿನಿಧಿಸುತ್ತವೆ. 
ಬೆಲ್ ಬಾಟಮ್ ಸಿನಿಮಾ ಫಿಲ್ಮ್ ಟೀಸರ್ ಮತ್ತು ಅದರ ಒಂದು ಹಾಡು ಬಹಳ ಪ್ರಸಿದ್ದವಾಗಿದ್ದು, ಸಿನಿ ಪ್ರಿಯರ ಹುಬ್ಬೇರುವಂತೆ ಮಾಡಿದೆ. 80 ರ ದಶಕದ ಕಥೆಯ ಹಿಂದಿನ ಮಾಸ್ಟರ್ ಮೈಂಡ್ ದಯಾನಂದ ಟಿ.ಕೆ ಅವರದ್ದು.
ನಿರ್ದೇಶಕ ರಿಷಭ್‌ ಶೆಟ್ಟಿ ಈ ಚಿತ್ರದ ನಾಯಕನಾದರೆ, ಹರಿಪ್ರಿಯಾ ನಾಯಕಿ. ಅಚ್ಯುತ್‌ ಕುಮಾರ್‌, ಪಿ.ಡಿ.ಸತೀಶ್‌ ಸೇರಿದಂತೆ ಅನುಭವಿ ಕಲಾವಿದರ ತಂಡವೇ ಸಿನಿಮಾದಲ್ಲಿದೆ.  ಅಟ್ಲಾಸ್ ಸೈಕಲ್, ಕರ್ನಾಟಕ ರಾಜ್ಯ ಲಾಟರಿ, ಇಮಾಮಿ ಪೌಡರ್,  ಪ್ರಾಮಿಸ್ ಟೂತ್ ಪೇಸ್ಟ್, ಎಚ್ ಎಂಟಿ ವಾಚ್, 30 ಬ್ರಾಂಡ್ ಬೀಡಿಗಳು, ಜಾಹೀರಾತುಗಲಿವೆ,
ಸಿನಿಮಾದಲ್ಲಿ ರಿಷಬ್ ಶೆಟ್ಟಿ  ಡಿಟೆಕ್ಟಿವ್ ದಿವಾಕರ್ ಪಾತ್ರದಲ್ಲಿ ನಟಿಸಿದ್ದಾರೆ, ಈ ಜಾಹೀರಾತುಗಳು 80 ದಶಕವನ್ನು  ನೆನಪಿಸುತ್ತವೆ ಇದರ ಎಲ್ಲಾ ಕ್ರೆಡಿಟ್ ದಯಾನಂದ ಅವರಿಗೆ ಸಲ್ಲಬೇಕು ಎಂದು ಹೇಳಿದ್ದಾರೆ. ಈ ಜಾಹೀರಾತುಗಳಿಗಲೂ ಸಿನಿಮಾ ಕಥೆಗೂ ಯಾವುದೇ ಸಂಬಂಧವಿಲ್ಲ ಎಂದು ಹೇಳಿದ್ದಾರೆ, ಬೆಲ್ ಬಾಟಮ್ ಸಿನಿಮಾ ಜನವರಿ ತಿಂಗಳ ಮದ್ಯದಲ್ಲಿ ರಿಲೀಸ್ ಆಗುವ ಸಾಧ್ಯತೆಯಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಯುದ್ಧ ತೀವ್ರ: ಪಾಕಿಸ್ತಾನದ ಏರ್ ಸ್ಟ್ರೈಕ್ ಗೆ ಅಫ್ಘಾನಿಸ್ತಾನದಿಂದ ಕ್ಷಿಪಣಿ ದಾಳಿ ಉತ್ತರ

ಇತಿಹಾಸ ಬರೆದ Sherry Singh, 48 ವರ್ಷಗಳಲ್ಲಿ ಮೊದಲ ಬಾರಿಗೆ ಭಾರತಕ್ಕೆ 'ಮಿಸ್ ಯೂನಿವರ್ಸ್' ಕಿರೀಟ!

20 ವರ್ಷ ಸಾಕಿ ಬೆಳೆಸಿದ 'ಅಶ್ವತ್ಥ'ಕ್ಕೆ ಕಿಡಿಗೇಡಿಗಳ ಕೊಡಲಿ ಪೆಟ್ಟು, ಬಿಕ್ಕಿ ಬಿಕ್ಕಿ ಅತ್ತ 'ವೃಕ್ಷಮಾತೆ', ಇಬ್ಬರ ಬಂಧನ, video viral

ಅಭಿಷೇಕ್ ಶರ್ಮಾನನ್ನು ಮೂರೇ ಎಸೆತಗಳಲ್ಲಿ ಔಟ್ ಮಾಡುತ್ತೇನೆ: ಪಾಕ್ ನ 152.65 kmph ವೇಗಿಯ ಉದ್ಧಟತನದ ಮಾತು

ಡಿಕೆ ಶಿವಕುಮಾರ್ ಇದ್ದ ವೇದಿಕೆಯಲ್ಲೇ ಹೈಡ್ರಾಮಾ: RSS ಸಮವಸ್ತ್ರದಲ್ಲಿ ಬಿಜೆಪಿ ಶಾಸಕ ಮುನಿರತ್ನ ಧರಣಿ! Video

SCROLL FOR NEXT