'ಸೀತಾರಾಮ ಕಲ್ಯಾಣ' ನನಗೆ ಕೂಡು ಕುಟುಂಬದ ಮೌಲ್ಯಗಳನ್ನು ತಿಳಿಸಿತು: ರಚಿತಾ ರಾಮ್
ಬೆಂಗಳೂರು: 2018ರಲ್ಲಿ ಬಿಡುಗಡೆಯಾದ "ಅಯೋಗ್ಯ" ಚಿತ್ರದ ಯಶಸ್ಸಿನ ಬಳಿಕ ನಟಿ ರಚಿತಾ ರಾಮ್ ಇದೀಗ ನಿಖಿಲ್ ಕುಮಾರ್ ನಾಯಕನಾಗಿರುವ "ಸೀತಾರಾಮ ಕಲ್ಯಾಣ" ಚಿತ್ರದ ಬಿಡುಗಡೆ ನಿರೀಕ್ಷೆಯಲ್ಲಿದ್ದಾರೆ. ಇದು ರಚಿತಾ ಅಭಿನಯದಲ್ಲಿ ಈ ವರ್ಷ ತೆರೆ ಕಾಣುತ್ತಿರುವ ಮೊದಲ ಚಿತ್ರವಾಗಲಿದೆ."ನಾನು ಸುಮಾರು ಒಂದು ವರ್ಷಕಾಲ ಈ ಚಿತ್ರಕ್ಕೆ ಕೆಲಸ ಮಾಡಿದ್ದೇನೆ.ಹಾಗಾಗಿ ಈ ಚಿತ್ರತಂಡವೆಂದರೆ ನನಗೆ ನನ್ನ ಕುಟುಂಬದಂತೆಯೇ ಭಾಸವಾಗಿದೆ.ಇದರಲ್ಲಿ ನಾನು ಸಾಂಪ್ರದಾಯಿಕ ಯುವತಿಯ ಪಾತ್ರಧಾರಿಯಾಗಿ ಕಾಣಿಸಲಿದ್ದೇನೆ.ರಚಿತಾ ತನ್ನ ಶೂಟಿಂಗ್ ದಿನಗಳನ್ನು ನೆನಪಿಸಿಕೊಳ್ಳುತ್ತಾ ಹೇಳಿದ್ದಾರೆ."ನಾನು ಕೂಡು ಕುಟುಂಬದಿಂಡ ಬಂದವಳಲ್ಲ, ಹಾಗಾಗಿ ಇದು ನನಗೆ ವಿಶೇಷ ಅನುಭವ ನೀಡಿತು. ಅಜ್ಜಿ, ದೊಡ್ಡಪ್ಪ-ದೊಡ್ಡಮ್ಮ, ಚಿಕ್ಕಪ್ಪ-ಚಿಕ್ಕಮ್ಮನೊಡನೆ ವಾಸಿಸುವ ಅನುಭವ ಹೇಗಿರುತ್ತದೆ ಎನ್ನುವುದು ಕಲಿತೆ"ಅವರು ಹೇಳ್:ಇದ್ದಾರೆ.
"ನಿದೇಶಕ ಹರ್ಷ ಅವರನ್ನು ನಾನು ಐದು ವರ್ಷಗಳಿಂಡ ಬಲ್ಲೆ, ನಾನು ಸ್ಯಾಂಡಲ್ ವುಡ್ ನಲ್ಲಿ ನಟಿಸಲು ಪ್ರಾರಂಭಿಸಿದ ದಿನದಿಂದ ಅವರು ನನಗೆ ಪರಿಚಯವಿದೆ. ಬುಲ್ ಬುಲ್ ಬಳಿಕ ನಾವು ಮತ್ತೆ ಒಟ್ಟಾಗಿ ಕೆಲಸ ಮಾಡಲು ಪ್ರಯತ್ನಿಸಿದ್ದೆವು. ಕಡೆಗೆ ಈಗ ಅದು ಸಾಧ್ಯವಾಗಿದೆ." ಎನ್ನುವ ರಚಿತಾ "ನಾನು ಹನುಮಂತ ದೇವರ ಭಕ್ತೆ, ಹರ್ಷ ಅವರೂ ಸಹ ಆಂಜನೇಯನ ಭಕ್ತರು, ನಾನು ಸೀತಾರಾಮ ಕಲ್ಯಾಣದಲ್ಲಿ ಅವರ ಮಾರ್ಗದರ್ಶನ ನನ್ನ ಪಾಲಿಗೆ ಹನುಮಂತನೇ ಮಾರ್ಗದರ್ಶಿ ಆಗಿ ಬಂದಂತಿತ್ತು" ಎಂದರು.
"ಮುಖ್ಯಮಂ<ತ್ರಿ ಕುಮಾರಸ್ವಾಮಿ ಅವರ ಮಗನಾಗಿಯೂ ಚಿತ್ರೋದ್ಯಮದಲ್ಲಿ ತನ್ನನ್ನು ತಾನು ಪ್ರೊಜೆಕ್ಟ್ ಮಾಡಿಕೊಂಡಿರುವ ನಿಖಿಲ್ಜತೆ ನಾನು ಹೇಗೆ ಸಂಪರ್ಕ ಸಾಧಿಸಲೆನ್ನುವುದು ನನಗೆ ತಿಳಿಯಲಿಲ್ಲ" ನಾಯಕ ನಟ ನಿಖಿಲ್ ಕುಮಾರ್ ಬಗ್ಗೆ ರಚಿತಾ ಹೇಳಿದ್ದಾರೆ. ಆದಾಗ್ಯೂ, ಸೆಟ್ ನಲ್ಲಿ ಅವರು ಸ///////////ಮ್ಪೂರ್ಣ ವೃತ್ತಿಪರ ನಟರಾಗಿದ್ದರು. ಸೆಟ್ ನಲ್ಲಿರುವ ಪ್ರತಿಯೊಬ್ಬರೂ ಭಾವಿಸಿದಂತೆ, ಅವರ ಮೊದಲ ಚಿತ್ರದಿಂದ ಇಂದಿಗೆ ದೊಡ್ಡ ಪ್ರಮಾಣದಲ್ಲಿ ರೂಪಾಂತರ ಹೊಂದಿದ್ದಾರೆ ಎಂದು ನಟಿ ಹೇಳಿದ್ದಾರೆ.
ಬಾಲಿವುಡ್ ಚಿತ್ರಗಳಾದ ಕಭಿ ಖುಷಿ ಕಭೀ ಗಮ್, ದಿಲ್ವಾಲೆ ದುಲ್ಹನಿಯಾ ಲೆ ಜಾಯೇಂಗೆ, ಹಮ್ ಆಪ್ಕೆ ಹೈ ಕೌನ್,ನಂತಹಾ ಚಿತ್ರಗಳಿಗೆ ನಮ್ಮ "ಸೀತಾರಾಮ ಕಲ್ಯಾಣ" ಹೋಲಿಕೆಯಾಗಲಿದೆ ಎನ್ನುವ ನಟಿ "ಕನ್ನಡದಲ್ಲಿ, ನಾನು ಸೂರ್ಯವಂಶ, ಮಿಲನ, ನನ್ನ ಅಭಿನಯದ ರನ್ನ, ಬುಲ್ ಬುಲ್ ಗಳಂತೆ ಇದೂ ಸಹ ಕೌಟುಂಬಿಕ ಮನೋರಂಜನೆ ಚಿತ್ರವಾಗಿದೆ. ಎಂದಿದ್ದಾರೆ.
"ಸಾಧ್ಯವಾದಲ್ಲಿ ನಾನಿದನ್ನು ಗಾಂಧಿ ಕ್ಲಾಸ್ ನಲ್ಲಿ ವೀಕ್ಷಿಸಲು ಬಯಸುತ್ತೇನೆ. ಅಲ್ಲಿ ನಿಜವಾದ ಚಿತ್ರಪ್ರೇಮಿಗಳು ಇರಲ್;ಇದ್ದಾರೆ. ಅವರ ನೇರ ವಿಮರ್ಶೆ, ಬ್ಯಾಕ್ ಟು ಬ್ಯಾಕ್ ಕಮೆಂಟ್ ಗಳನ್ನು ಕೇಳಲು ನನಗಿಷ್ಟ.ಹೇಗಾದರೂ, ಕೆಲವೊಮ್ಮೆ ಅವರು ನಮ್ಮ ತಾಳ್ಮೆ ಪರೀಕ್ಷಿಸಲುಇ ಮುಂದಾಗುತ್ತಾರೆ"
ಚಿತ್ರೋದ್ಯಮದಲ್ಲಿ ಐದು ವರ್ಷ ಕಳೆದಿರುವ ರಚಿತಾ"ಇಂದು ಪ್ರೇಕ್ಷಕರು ನನ್ನನ್ನು ಉತ್ತಮ ನಟಿಯಾಗಿ ಗುರುತಿಸುತ್ತಿದ್ದಾರೆ.ಇದು ಉತ್ತಮ ಸಂಕೇತವಾಗಿದೆ. ಸೂಕ್ತ ಕಥೆ ಯನ್ನು ಆಯ್ಕೆ ಮಾಡುವ ಮೂಲಕ ನಾನು ಉದ್ಯಮದಲ್ಲಿ ಗಳಿಸಿದ ಹೆಸರನ್ನು ಉಳಿಸಿಕೊಳ್ಳಬೇಕಾಗಿದೆ. ಇದು ನನ್ನ ಮುಂದಿನ ಸವಾಲು" ಅವರು ಹೇಳಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos